ಪುನೀತ್ ಅವರ ನಗುಮುಖ ಮಗುವಿನಂತೆ ಇರುವ ಮನಸ್ಸು ಇರುವ ವ್ಯಕ್ತಿ ಸಿಗುವುದು ತುಂಬಾನೇ ಕಷ್ಟ. ಅಪ್ಪು ಅವರು ನಮ್ಮೆಲ್ಲರನ್ನು ಬಿಟ್ಟು ಹೋಗಿದ್ದಾರೆ ಅವರು ಇಲ್ಲದೇ ಇದ್ದರೂ ಕೂಡ ಸದಾ ನಮ್ಮ ಮನಸ್ಸಿನಲ್ಲಿ ಹಾಗೇ ನೆಲೆಸಿರುತ್ತಾರೆ. ಇನ್ನು ಅಪ್ಪು ಅವರ ತರಾನೇ ನೋಡುವುದಕ್ಕೆ ಇಬ್ಬರು ಮಕ್ಕಳು ಇದ್ದಾರೆ.
ಹೌದು ಪುನೀತ್ ಅವರು ಚಿಕ್ಕ ವಯಸ್ಸಿನಲ್ಲಿ ಇದ್ದಾಗ ಸಾಕಷ್ಟು ಸಿನಿಮಾಗಳನ್ನು ಮಾಡಿ ಆ ವಯಸ್ಸಿನಲ್ಲೇ ಯಶಸ್ವಿಯನ್ನು ಸಾಧಿಸಿದ್ದರು. ಇನ್ನು ಅಪ್ಪು ಅವರು ಚಿಕ್ಕವಯಸ್ಸಿನಲ್ಲಿ ನೋಡುವುದಕ್ಕೆ ಹೇಗಿದ್ದರೋ ಹಾಗೆಯೇ ಅವಳಿ ಜವಳಿ ಮಕ್ಕಳು ಇಬ್ಬರೂ ಕೂಡ ಪುನೀತ್ ಅವರ ರೀತಿಯಲ್ಲಿ ನೋಡುವುದಕ್ಕೆ ಇದ್ದಾರೆ. ಈ ಅವಳಿ ಜವಳಿ ಮಕ್ಕಳ ಫೋಟೋ ಇದೀಗ ಎಲ್ಲಾ ಕಡೆ ಸಖತ್ ವೈರಲ್ ಆಗುತ್ತಿದೆ.
ಇನ್ನು ಪುನೀತ್ ಅವರ ಅಗಲಿಕೆ ಈಗಲೂ ಎಲ್ಲರ ಮನಸ್ಸನ್ನು ನೋವನ್ನುಂಟು ಮಾಡುತ್ತದೆ. ಪುನೀತ್ ಅವರು ಅಕ್ಟೋಬರ್ 29 2021 ರಂದು ಹೃದಯಾಘಾತದಿಂದ ಸಾವನ್ನಪ್ಪಿದರು. ಇವರ ಅಕಾಲಿಕ ಮರಣವನ್ನು ಯಾರೂ ಕೂಡ ಮರೆಯುವುದಕ್ಕೆ ಸಾಧ್ಯವಿಲ್ಲ.
ಪುನೀತ್ ಅವರು ಮಾಡಿದ ಸಾಕಷ್ಟು ಸಾಮಾಜಿಕ ಸೇವೆಗಳು ಅವರ ಒಳ್ಳೆಯ ಗುಣ ಒಳ್ಳೆಯ ವ್ಯಕ್ತಿತ್ವ ಅಭಿಮಾನಿಗಳಿಗೆ ತೋರಿಸುವ ಪ್ರೀತಿ ಎಲ್ಲರಿಗೂ ತುಂಬ ಇಷ್ಟವಾಗುತ್ತದೆ.
ಇನ್ನು ಪುನೀತ್ ಅವರು ಭೋಜನ ಪ್ರಿಯರು. ಇವರು ಎಲ್ಲಿ ಊಟ ಚೆನ್ನಾಗಿದ್ದರೂ ಅದು ಎಲ್ಲಿಯಾದರೂ ಸರಿ ಅಲ್ಲೇ ಕೂತು ತಿನ್ನುತ್ತಾರೆ. ದೊಡ್ಮನೆ ಕುಟುಂಬದಲ್ಲಿ ಹುಟ್ಟಿದ ಪುನೀತ್ ಅವರ ಸರಳತೆ ಹೇಗಿತ್ತು ಎಂದು ಎಲ್ಲರಿಗೂ ಗೊತ್ತೇ ಇದೆ. ಇನ್ನೂ ಅವರ ಅಭಿಮಾನಿಗಳು ಕೂಡ ಪುನೀತ್ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಾ ಸಾಕಷ್ಟು ಬಡ ಜನರಿಗೆ ಸಹಾಯ ಮಾಡುತ್ತಿದ್ದಾರೆ.
ಪುನೀತ್ ಅವರು ಮರಣ ಹೊಂದಿ 5 ತಿಂಗಳು ಆಗುತ್ತಾ ಬರುತ್ತಿದ್ದರೂ ಕೂಡ ಅವರನ್ನು ಯಾರೂ ಕೂಡ ಮರೆಯುವುದಕ್ಕೆ ಸಾಧ್ಯವಾಗುತ್ತಿಲ್ಲ. ಇನ್ನು ಅವರ ಹುಟ್ಟುಹಬ್ಬದ ದಿನದಂದೇ ಅಂದರೆ ಮಾರ್ಚ್ 17 2022 ರಂದು ಅವರ ಕೊನೆಯ ಚಿತ್ರ ಜೇಮ್ಸ್ ಸಿನಿಮಾವನ್ನು ಎಲ್ಲಾ ಕಡೆ ಭರ್ಜರಿಯಾಗಿ ಬಿಡುಗಡೆ ಮಾಡಲಾಯಿತು.
ಪುನೀತ್ ಅವರ ಕೊನೆಯ ಸಿನಿಮಾವನ್ನು ನೋಡುವುದಕ್ಕೆ ಬಹುತೇಕ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದು ಅದನ್ನು ನೋಡಿ ಸಿನಿಮಾವನ್ನು ಯಶಸ್ವಿಗೊಳಿಸಿದ್ದಾರೆ. ಇನ್ನೂ ಕೆಲವರು ಅಪ್ಪು ಅವರ ಕೊನೆಯ ಚಿತ್ರವೆಂದು ಆ ಸಿನಿಮಾವನ್ನು ಇನ್ನೂ ನೋಡೇ ಇಲ್ಲ…..