ಪುನೀತ್ ಅವರ ಸಿನಿಮಾಗೆ ಪುನೀತ್ ಅವರ ಬದಲು ಆಯ್ಕೆಯಾಗಿರುವ ನಟ ಯಾರೆಂದು ನಿಮಗೆ ಗೊತ್ತಾ.. ಕೇಳಿದರೆ ಖುಷಿ ಎನಿಸುತ್ತದೆ..!!
ಅಪ್ಪು ಅವರು ಈಗ ನಮ್ಮ ಜೊತೆ ಇಲ್ಲ. ಇವರಿಗಾಗಿ ಸಾಕಷ್ಟು ನಿರ್ದೇಶಕರು ಸಿನಿಮಾದ ಕಥೆಗಳನ್ನು ಬರೆದಿದ್ದರು. ಆದರೆ ಆ ಸಿನಿಮಾಗಳಲ್ಲಿ ನಟಿಸುವ ಮುನ್ನವೇ ಅಪ್ಪು ಅವರು ನಮ್ಮನ್ನು ಬಿಟ್ಟು ಇಹಲೋಕಕ್ಕೆ ಹೋದರು. ಇದು ಎಲ್ಲರಿಗೂ ತುಂಬಾ ಬೇಸರ ತಂದುಕೊಟ್ಟ ವಿಷಯವಾಗಿದೆ. ಹೌದು ಪುನೀತ್ ಅವರು ಮರಣ ಹೊಂದಿ ಸುಮಾರು 2 ತಿಂಗಳು ಹತ್ತಿರವಾಗುತ್ತಿದ್ದರೂ ಕೂಡ ಅವರು ಎಲ್ಲರ ಮನದಲ್ಲಿಯೂ ಹಾಗೆಯೇ ಇದ್ದಾರೆ.
ಅವರ ಸಾವಿನ ನೋವು ಎಲ್ಲಾ ಅಭಿಮಾನಿಗಳ ಮನದಲ್ಲಿ ಕೊನೆಯವರೆಗೂ ಹಾಗೇ ಇರುತ್ತದೆ. ಕೊರೊನಾ ಹಾವಳಿಯಿಂದ ಲಾಕ್ ಡೌನ್ ಆಗಿತ್ತು. ಲಾಕ್ ಡೌನ್ ತೆರೆದ ನಂತರ ಪುನೀತ್ ಅವರು ಹಲವಾರು ಚಿತ್ರಗಳಿಗೆ ಸಹಿಯನ್ನು ಕೂಡ ಹಾಕಿದ್ದರು. ಆದರೆ ಪುನೀತ್ ಅವರು ಅಕ್ಟೋಬರ್ 29 ರಂದು ಮರಣ ಹೊಂದಿದರು.
ಇನ್ನು ಖ್ಯಾತ ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರು ಪುನೀತ್ ಅವರಿಗೆ ಬರೆದ ಸಿನಿಮಾದ ಕಥೆಗಳನ್ನು ದೊಡ್ಮನೆ ಕುಡಿಯಾಗಿರುವ ಯುವ ರಾಜ್ ಕುಮಾರ್ ಅವರಿಗೆ ನೀಡಿ ಎಂದು ಅಭಿಮಾನಿಗಳು ಕೇಳಿಕೊಂಡಿದ್ದರು. ಸಂತೋಷ್ ಆನಂದ್ ರಾಮ್ ಅವರು ಪುನೀತ್ ರಾಜ್ ಕುಮಾರ್ ಅವರ ಜೊತೆ ರಾಜಕುಮಾರ ಮತ್ತು ಯುವರತ್ನ ಚಿತ್ರಗಳನ್ನು ಮಾಡಿದ್ದಾರೆ. ಇವೆರಡು ಚಿತ್ರ ಆದಮೇಲೆ ಮೂರನೆಯ ಚಿತ್ರವನ್ನು ಕೂಡ ನಿರ್ದೇಶಿಸಲು ಸಜ್ಜಾಗಿದ್ದರು.
ಇದಕ್ಕೆ ಪುನೀತ್ ಅವರು ಕೂಡ ಒಪ್ಪಿಕೊಂಡರು. ಆದರೆ ಈಗ ನಾವು ಊಹೆ ಮಾಡಿಕೊಳ್ಳದೇ ಇರುವ ರೀತಿ ಆಗಿಬಿಟ್ಟಿದೆ. ಇದಕ್ಕಾಗಿ ಪುನೀತ್ ಅವರ ಬದಲು ರಾಘಣ್ಣ ಮಗ ಆಗಿರುವ ಯುವ ರಾಜ್ ಕುಮಾರ್ ಅವರನ್ನು ನಾಯಕ ನಟರಾಗಿ ಹಾಕಿಕೊಂಡು ಸಿನಿಮಾ ಮಾಡುವುದಕ್ಕೆ ಒಪ್ಪಿದ್ದಾರೆ.
ಇನ್ನೂ ಬಲ್ಲ ಮೂಲಗಳ ಪ್ರಕಾರದಿಂದ ಯುವ ರಾಜ್ ಕುಮಾರ್ ಅವರು ಈ ಚಿತ್ರದ ಮೂಲಕ ಎಲ್ಲರಿಗೂ ತೆರೆಯ ಮೇಲೆ ಪರಿಚಿತವಾಗುತ್ತಿದ್ದಾರೆ ಎಂದು ಹೇಳಲಾಗಿದೆ. ಇನ್ನು ಅಪ್ಪು ಅವರ ಸ್ಥಾನವನ್ನು ತುಂಬಿಸುವ ಏಕೈಕ ನಟ ಎಂದರೆ ಅದು ಯುವರಾಜ್ ಕುಮಾರ್ ಎಂಬುದು ಎಲ್ಲಾ ಅಭಿಮಾನಿಗಳ ಅಭಿಪ್ರಾಯವಾಗಿದೆ. ಅವರ ತಕ್ಕಂತೆ ಈಗ ಅವರ ಆಸೆ ನೆರವೇರುತ್ತಿದೆ…..