ಪುಟ್ಟಕ್ಕನ ಮಕ್ಕಳು ಸೀರಿಯಲ್ ಉಮಾಶ್ರೀ ಅವರಿಗೆ ಒಂದು ದಿನಕ್ಕೆ ಕೊಡುತ್ತಿರುವ ಸಂಭಾವನೆ ಎಷ್ಟು ಗೊತ್ತಾ ?? ವಾರಕ್ಕೆ ಲಕ್ಷ ಲಕ್ಷ ಬರುತ್ತೆ ನೋಡಿ !!
ಜೀಕನ್ನಡ ವಾಹಿನಿಯಲ್ಲಿ ಸಾಕಷ್ಟು ಒಳ್ಳೊಳ್ಳೆ ಧಾರಾವಾಹಿಗಳು ಮೂಡಿ ಬರುತ್ತಿವೆ. ಅದರಲ್ಲೂ ಜೊತೆ ಜೊತೆಯಲಿ ಧಾರಾವಾಹಿ ಒಳ್ಳೆಯ ಟಿ.ಆರ್.ಪಿ ಅನ್ನು ಹೊಂದಿದೆ. ಇದರ ಜೊತೆಗೆ ಈಗ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಕೂಡ ಹೊಸದಾಗಿ ಶುರುವಾಗಿದೆ. ಇದು ಡಿಸೆಂಬರ್ 13 2021 ರಂದು ಪ್ರಸಾರವಾಗುತ್ತಿದೆ. ಇದರಲ್ಲಿ ಉಮಾಶ್ರೀ ಅವರು ಮುಖ್ಯವಾದ ತಾಯಿಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ಇವರ ಜೊತೆಗೆ ಯುಕ್ತ ಮಲ್ನಾಡ್, ಅಂಜನಾ, ಪವನ್ ರವೀಂದ್ರ, ಕರುಣಾ ಇನ್ನೂ ಸಾಕಷ್ಟು ಕಲಾವಿದರು ಅಭಿನಯಿಸುತ್ತಿದ್ದಾರೆ. ಇದರಲ್ಲಿ ಪುಟ್ಟಕ್ಕನ ಪಾತ್ರದಲ್ಲಿ ಉಮಾಶ್ರೀ ಅವರು ಅಭಿನಯಿಸುತ್ತಿದ್ದಾರೆ. ಉಮಾಶ್ರೀ ಅವರು ಕೇವಲ ಸಿನಿಮಾಗಳಲ್ಲಿ ಮಾತ್ರವಲ್ಲ ರಾಜಕೀಯ ಕ್ಷೇತ್ರದಲ್ಲಿ ಕೂಡ ಇವರು ತೊಡಗಿಸಿಕೊಂಡಿದ್ದಾರೆ. ಈಗ ಕಿರುತೆರೆಯಲ್ಲೂ ಕೂಡ ಹಿರಿಯ ನಟಿಯಾಗಿ ಅಭಿನಯ ಮಾಡುತ್ತಿದ್ದಾರೆ.
ಪುಟ್ಟಕ್ಕನ ಮಕ್ಕಳು ತುಂಬಾ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಇನ್ನೂ ಈ ಧಾರಾವಾಹಿಯನ್ನು ಜೊತೆ ಜೊತೆಯಲ್ಲಿ ನಿರ್ದೇಶನ ಮಾಡುತ್ತಿರುವ ಆರೂರು ಜಗದೀಶ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಜೊತೆ ಜೊತೆಯಲಿ ಧಾರಾವಾಹಿಯ ನಾಯಕ ನಟ ಅನಿರುದ್ಧ್ ಜಟ್ಕರ್ ಅವರಿಗೆ ಆರೂರು ಜಗದೀಶ್ ಅವರು ಒಂದು ದಿನಕ್ಕೆ 35000 ರೂ.ಗಳನ್ನು ನೀಡುತ್ತಿದ್ದರು.
ಈಗ ಅವರೇ ನಿರ್ದೇಶನ ಮಾಡುತ್ತಿರುವ ಪುಟ್ಟಕ್ಕನ ಮಕ್ಕಳು ಸೀರಿಯಲ್ ನ ನಾಯಕಿ ನಟಿ ಉಮಾಶ್ರೀ ಅವರಿಗೆ ಒಂದು ದಿನಕ್ಕೆ 45000 ರೂ.ಗಳನ್ನು ನೀಡುತ್ತಿದ್ದಾರೆ. ಉಮಾಶ್ರೀ ಅವರು ತುಂಬಾ ಸೊಗಸಾಗಿ ನಟನೆ ಮಾಡುತ್ತಾರೆ ಮತ್ತು ಹಿರಿಯ ನಟಿ ಕೂಡ ಹೌದು. ಇವರಿಗೆ ತಕ್ಕಂತೆ ಕಿರುತೆರೆಯಲ್ಲೂ ಕೂಡ ಒಂದು ದಿನಕ್ಕೆ ಇಷ್ಟು ಸಂಭಾವನೆಯನ್ನು ತೆಗೆದುಕೊಳ್ಳುತ್ತಿದ್ದಾರೆ.
ಇನ್ನು ಉಮಾಶ್ರೀ ಅವರು ಮೇ 10 1957 ರಂದು ನೊಣವಿನಕೆರೆಯಲ್ಲಿ ಜನಿಸಿದ್ದಾರೆ. ಇವರು 1984 ರಂದು ಅನುಭವ ಎಂಬ ಚಿತ್ರದ ಮೂಲಕ ಮೊದಲನೆಯದಾಗಿ ಬೆಳ್ಳಿತೆರೆಯ ಮೇಲೆ ಕಾಲಿಟ್ಟರು. ಇದರ ಜೊತೆಗೆ ಇವರು ಸಾಕಷ್ಟು ಶೋಗಳನ್ನು ಕೂಡ ಟೀವಿಯಲ್ಲಿ ನಡೆಸಿಕೊಟ್ಟಿದ್ದಾರೆ. ಇನ್ನೂ ಉಮಾಶ್ರೀ ಅವರಿಗೆ ವಿಜಯ ಕುಮಾರ್ ಮತ್ತು ಗಾಯತ್ರಿ ಎನ್ನುವ ಇಬ್ಬರು ಮಕ್ಕಳು ಕೂಡ ಇದ್ದಾರೆ.
ಪುಟ್ಟಕ್ಕನ ಮಕ್ಕಳು ಧಾರಾವಾಹಿ ಜೀ ಕನ್ನಡದಲ್ಲಿ ಸೋಮವಾರದಿಂದ ಶುಕ್ರವಾರದವರೆಗೂ 7.30 ರಂದು ಪ್ರಸಾರವಾಗುತ್ತದೆ…..