Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಪರೋಪಕಾರದ ಪಣತೊಟ್ಟು ಸ್ವಾರ್ಥವಿಲ್ಲದೆ ಸಮಾಜದ ಹಾಗೂ ಜನಗಳ ಉದ್ಧಾರಕ್ಕಾಗಿ‌ ಹಗಲಿರುಳು ಶ್ರಮಿಸುತ್ತಿರುವ ಇವರು ಮಾಡುತ್ತಿರುವ‌ ಕೆಲಸ ನೋಡಿ !!

0

ಹೆಣ್ಣೊಂದು‌ ಕಲಿತರೆ ಶಾಲೆಯೊಂದು‌ ತೆರೆದಂತೆ‌ ಎಂಬ ಮಾತು ಎಲ್ಲರಿಗೂ ತಿಳಿದಿದೆ. ಹೆಣ್ಣು ಗಂಡಿಗಿಂತ ಯಾವುದರಲ್ಲಿಯೂ ಸಹ ಕಡಿಮೆಯಿಲ್ಲ ಎಂಬಂತೆ ಎಲ್ಲಾ‌ ಕ್ಷೇತ್ರದಲ್ಲಿಯೂ ಸಹ‌ ಹೆಣ್ಣು ಮಿಂಚುತ್ತಿದ್ದಾಳೆ. ಹೆಣ್ಣು ಮನಸ್ಸು‌ ಮಾಡಿದರೆ ಏನಾದರೂ ಮಾಡಾಬಲ್ಲಳು ಎಂಬುದಕ್ಕೆ ಹಲವು ಸಾಧಕಿಯರ ಉದಾಹರಣೆಗಳು ನಮ್ಮ ಕಣ್ಣ ಮುಂ‍ದೆ ಬರುತ್ತವೆ. ಇದೀಗ ಈ ಸಾಲಿಗೆ ಮತ್ತೊಬ್ಬರ ಹೆಸರು ಕೇಳಿ ಬರುತ್ತಿದೆ.

ಆಕೆ‌ ಮತ್ಯಾರು ಅಲ್ಲ ಬೆಂಗಳೂರು ಗ್ರಾಮಾಂತರದ ದೊಡ್ಡಬಳ್ಳಾಪುರದ ದೊಡ್ಡರಾಯಪ್ಪನ‌ಹಳ್ಳಿಯಲ್ಲಿ ಹುಟ್ಟಿ ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಮುಗಿಸಿ ಈಗ ತಮ್ಮ ಸಮಾಜ ಮುಖಿ ಕಾರ್ಯಗಳಿಂದ ಹೆಸರಾಗಿರುವ ಸುನೀತಾ ಮಂಜುನಾಥ್. ಸುನೀತಾ ಮಂಜುನಾಥ್‌ ಅವರ ಹೆಸರು ಕೇಳಿದರೆ ಅದೆಷ್ಟೋ ಜನ ಎದ್ದು ನಿಲ್ಲುತ್ತಾರೆ. ನಿಮಗೆ ಇದು ಅಚ್ಚರಿ ಎನಿಸಬಹುದು.

ಆದರೆ ಇದು ಅವರ ಮೇಲಿನ‌ ಭಯದಿಂದಲ್ಲ ಬದಲಾಗಿ ಮರ್ಯಾದೆ ಹಾಗೂ ಗೌರವದಿಂದ. ಇಷ್ಟಕ್ಕೂ ಜನ ಇವರನ್ನು ಪ್ರೀತಿಸಲು ಗೌರವಿಸಲು‌ ಕಾರಣ ಒಂದಲ್ಲ ಎರಡಲ್ಲಾ. ಇವರು ಜನರಿಗೆ ಮಾಡಿರುವ ಉಪಕಾರಗಳ ಸಾಲು‌ ಹೇಳುತ್ತಾ ಹೋದರೆ ಸಮಯ ಸಾಲುವುದಿಲ್ಲ.ಇಂಜಿನಿಯರಿಂಗ್ ಮುಗಿಸಿದ ಸುನೀತಾ ಅವರಿಗೆ ನಾನು ಕಷ್ಟದಲ್ಲಿರುವವರಿಗೆ ಸಹಾಯ ಮಾಡಬೇಕು ಸಮಾಜಕ್ಕೆ ನನ್ನಿಂದಾಗುವ ಒಳ್ಳೆಯ ಕೊಡುಗೆಗಳನ್ನು ನೀಡಬೇಕು.

ಎಂಬ ಹಂಬಲ. ಕೊಂಚವೂ ಸಹ ಸ್ವಾರ್ಥ‌ವಿಲ್ಲದೆ ಇಂದಿಗೂ ಸಹ‌ ಜನರ ಒಳಿತಿಗಾಗಿ ಹಾಗೂ ಸಮಾಜದ ಏಳಿಗೆಗಾಗಿ ಇವರು ಹಾಗೂ ಇವರ ಸುಮನಾ ಫೌಂಡೇಶನ್ ತಂಡ ಶ್ರಮಿಸುತ್ತಿದೆ. ಸುಮನಾ ಫೌಂ‌ಡೇಶನ್ ಸ್ಥಾಪಿಸಿದ ಸುನೀತಾ ಅವರಿಗೆ ಕನಸುಗಳು ನೂರಾರು. ಈ‌‌ ಫೌಂಡೇಶನ್ ನ‌ ಮೂಲಕ ಪ್ರತಿದಿನ ಅದೆಷ್ಟೋ ಜನರ ಬಾಳಿಗೆ ಆಸರೆಯಾಗುತ್ತಿದ್ದಾರೆ. ಹೌದು ಸರ್ಕಾರಿ ಶಾಲೆ ಉಳಿಸಿ ಎಂದು ಪ್ರತಿಯೊಬ್ಬರೂ ಹೇಳುತ್ತಾರೆ ಆದರೆ ಸುನೀತಾ ಅವರು ಅದನ್ನು ಕಾರ್ಯರೂಪಗೊಳಿಸಿದ್ದಾರೆ.

ಹೌದು ಸುನೀತಾ ಅವರು ಈವರೆಗೆ ಅದೆಷ್ಟೋ ಸರ್ಕಾರಿ ಶಾಲೆಗಳಿಗೆ ಮರುಜೀವ ನೀಡುವ ಕೆಲಸ ಮಾಡಿದ್ದಾರೆ ಹಾಗೂ ಇನ್ನೂ 100 ಶಾಲೆಗಳ ನವೀಕರಣದ ಕನಸನ್ನು ಹೊಂದಿದ್ದಾರೆ. ಇನ್ನು ಹಸಿದು‌ ಬಂದವರ ಪಾಲಿಗೆ ಅನ್ನಪೂರ್ಣೇಶ್ವರಿಯೂ ಸಹ ಆಗಿದ್ದಾರೆ. ಹೌದು ತಮ್ಮ ಫೌಂಡೇಶನ್ ನ ಮೂಲಕ ಪ್ರತಿದಿನ ಅದೆಷ್ಟೋ ಜನರ ಹಸಿವನ್ನು ನೀಗಿಸುವ ಕಾರ್ಯದಲ್ಲಿ ಯಶಸ್ವಿಯಾಗಿದ್ದಾರೆ ಸುನೀತಾ ಅವರು.

ಇವರ ಸಾಮಾಜಿಕ ಕಾರ್ಯಗಳು ಇಷ್ಟಕ್ಕೇ‌ ನಿಲ್ಲುವುದಿಲ್ಲ. ಅದೆಷ್ಟೋ ಮಹಿಳೆಯರಿಗೆ ದುಡಿಯಲು ಪ್ರೇರೇಪಿಸಿ ಅವರಿಗೆ ಬೇಕಾದ ತರಬೇತಿ ನೀಡಿ ಅವರನ್ನು ತಮ್ಮ ಕಾಲ ಮೇಲೆ ನಿಲ್ಲುವಂತೆ ಮಾಡಿರುವ ಇವರು ಮನೆಯಿಲ್ಲದವರಿಗೆ ಮನೆಯನ್ನೂ ಸಹ ಕಟ್ಟಿಸಿಕೊಟ್ಟು‌ ಧಾರಾಳತನ‌ ಮೆರೆದಿದ್ದಾರೆ. ಇದರ ಜೊತೆಗೆ ಪ್ರಾಣಿ ಪಕ್ಷಿಗಳ ಮೇಲಿನ ಪ್ರೀತಿಯಿಂದ ದೀಪಾವಳಿಯಂದು ಪಟಾಕಿ ಹೊಡೆಯುವುದನ್ನು ನಿಲ್ಲಿಸಿ ಎಂದು.

ಮನವಿ ಮಾಡುವುದಲ್ಲದೆ ಜನರಿಗೆ ಮಣ್ಣಿನ‌ ದೀಪಗಳನ್ನೂ ಸಹ ಹಂಚುತ್ತಾರೆ. ಇಷ್ಟೆಲ್ಲಾ ಮಾಡುವ ಇವರು ರೈತರನ್ನೂ ಸಹ ಮರೆತಿಲ್ಲ. ರೈತರು ಬೆಳೆಯುವ ತರಕಾರಿಗಳನ್ನು ನೇರವಾಗಿ ರೈತರಿಂದಲೇ ಖರೀದಿಸಿ ಜನರಿಗೆ ಉಚಿತವಾಗಿ ಅವುಗಳನ್ನು ನೀಡಿದ್ದಾರೆ. ಕೋವಿಡ್ ಸಂಕಷ್ಟದ ಸಮಯದಲ್ಲಿ ಜನರಿಗೆ ಬೇಕಾದ ರೇಷನ್ ಹಾಗೂ ಕಿಟ್ ಗಳನ್ನು ಮನೆಬಾಗಿಲಿಗೆ ಹೋಗಿ ನೀಡಿದ್ದಾರೆ. ಇದಕ್ಕೆಲ್ಲ ನಿಮಗೆ ಯಾರು ಸ್ಫೂರ್ತಿ ಎಂದು‌ ಕೇಳಿದರೆ ನಾವು ಒಬ್ಬ ಮನುಷ್ಯರಾಗಿ ಮತ್ತೊಬ್ಬರ ಕಷ್ಟಗಳನ್ನು ಅರ್ಥ ಮಾಡಿಕೊಳ್ಳಬೇಕು ಇಲ್ಲದಿದ್ದರೆ ನಮ್ಮನು ಮನುಷ್ಯರೆಂದು.

ಕರೆಯುವುದಿಲ್ಲ ಇರುವಷ್ಟು ದಿನ ಕೈಲಾದಷ್ಟು ಒಳ್ಳೆಯದನ್ನು ಮಾಡೋಣ ಎನ್ನುತ್ತಾರೆ. ಇಂತಹ ಪರಿಶುದ್ಧ ಮನಸ್ಸಿರುವ ಇವರ ಕಾರ್ಯಗಳಿಗೆ ಮೆಚ್ಚಿ ಹಲವು ಪ್ರಶಸ್ತಿಗಳನ್ನು ಇವರಿಗೆ ನೀಡಲಾಗಿದೆ. ಇಂದು ಸುನೀತಾ ಮಂಜುನಾಥ್‌ ಅವರ ಜನ್ಮ ದಿನ. ಯಾವುದೇ ಸ್ವಾರ್ಥವಿಲ್ಲದೆ ಪ್ರತಿಯೊಬ್ಬರಿಗೂ ಒಳ್ಳೆಯದನ್ನೇ ಬಯಸುವ ಇವರು ಮತ್ತಷ್ಟು ಎತ್ತರಕ್ಕೆ ಬೆಳೆಯಲಿ ದೇವರು ಇವರಿಗೆ ಇನ್ನು ಹೆಚ್ಚು ಆಯಸ್ಸನ್ನು ನೀಡಲಿ ಎಂದು ಆಶಿಸುತ್ತಾ ಜನ್ಮ ದಿನದ ಶುಭಾಶಯಗಳನ್ನು ತಿಳಿಸೋಣ.

Hindustan Prime
Hindustan Prime WhatsApp Group

Get real time updates directly on you device, subscribe now.

Leave A Reply