Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ಪತ್ರಕರ್ತ ಸೋಮಣ್ಣ ಮಾಚಿಮಾಡ ತಮ್ಮ ಜೀವನದಲ್ಲಿ ಆ ಒಬ್ಬರನ್ನು ಬಿಟ್ಟಿರಲು ಸಾಧ್ಯವಾಗುತ್ತಿಲ್ಲವಂತೆ !! ಬಿಗ್ ಬಾಸ್ ನಲ್ಲಿ ತಮ್ಮ ನೋವನ್ನು ಹಂಚಿಕೊಂಡು ಕಣ್ಣೀರಿಟ್ಟಿದ್ಯಾಕೆ..!!

0

ಬಿಗ್ ಬಾಸ್ ಓಟಿಟಿ‌ ಈಗಾಗಲೇ ಶುರುವಾಗಿದ್ದು ಬಿಗ್ ಬಾಸ್ ಅಭಿಮಾನಿಗಳು‌ ವೂಟ್ ನಲ್ಲಿ ಈಗಾಗಲೇ‌ ಬಿಗ್ ಬಾಸ್ ಅನ್ನು ನೋಡಿ ಆನಂದಿಸುತ್ತಿದ್ದಾರೆ. ಇನ್ನು ಈ ಬಾರಿ‌ ನಿರೀಕ್ಷಿಸಿರದ ಸ್ಪರ್ಧಿಗಳನ್ನು ಬಿಗ್ ಬಾಸ್ ಮನೆಯೊಳಗೆ ನೋಡುತ್ತಿದ್ದೇವೆ. ಎಂದಿನಂತೆ ಬಿಗ್ ಬಾಸ್ ಜನರನ್ನು ರಂಜಿಸುವಲ್ಲಿ ಸಫಲವಾಗಿದೆ. ಸ್ಪರ್ಧಿಗಳ ಮನೆಯೊಳಗಿನ‌ ಜಗಳ ಅವರ ಆಟ ಹಾಗು ಬಿಗ್ ಬಾಸ್ ಮನೆಯೊಳಗಿನ ಅವರ‌ ಜೀವನವನ್ನು ನೋಡಿ ಆನಂದಿಸುತ್ತಿದ್ದಾರೆ ಬಿಗ್ ಬಾಸ್ ಅಭಿಮಾನಿಗಳು.

ಎಂದಿನಂತೆ‌ ಗಾಸಿಪ್ ಗಳು ಟಾಸ್ಕ್ ಗಳು ಹಗ್ಗ ಜಗ್ಗಾಟಗಳು ಗದ್ದಲಗಳು ತಮಾಷೆಗಳು ಎಲ್ಲವೂ ಶುರುವಾಗಿದೆ. ಪ್ರತಿಬಾರಿಯ ಬಿಗ್ ಬಾಸ್ ನಂತೆ ಈ ಬಾರಿಯ ಬಿಗ್ ಬಾಸ್ ನಲ್ಲಿಯೂ ಸ್ಪರ್ಧಿಗಳ ಮನದಾಳದ ನೋವನ್ನು ಹಂಚಿಕೊಳ್ಳಲು ಅವಕಾಶವನ್ನು ನೀಡಲಾಗಿತ್ತು.

ಇದರಲ್ಲಿ ಬಿಗ್ ಬಾಸ್ ಸ್ಪರ್ಧಿಗಳು ತಮ್ಮ ಜೀವನದಲ್ಲಿನ ನೋವುಗಳನ್ನು ಹಂಚಿಕೊಂಡರು. ಅದರಂತೆ ಪತ್ರಕರ್ತ ಸೋಮಣ್ಣ ಮಾಚಿಮಾಡ ಅವರೂ ಸಹ ತಮ್ಮ ಜೀವನದಲ್ಲಿನ ನೋವನ್ನು ಬಿಗ್ ಬಾಸ್ ನಲ್ಲಿ ಹಂಚಿಕೊಂಡರು. ಸೆಲೆಬ್ರೆಟಿಗಳ ಸಂದರ್ಶನ ಮಾಡುತ್ತಾ ಎಲ್ಲರಿಗೂ ಪರಿಚಯವಾಗಿರುವ ಇವರ‌ ನೋವನ್ನು ಕೇಳಿ ಎಲ್ಲರ ಕಣ್ಣುಗಳು ತೇವಗೊಂಡವು.

ಹೌದು ಸೋಮಣ್ಣ ಮಾಚಿಮಾಡ ಅವರು ಪತ್ನಿಯಿಂದ ವಿಚ್ಛೇದನ ಪಡೆದುಕೊಂಡು ಬೆಂಗಳೂರಿನಲ್ಲಿ ಒಂಟಿಯಾಗಿ ಜೀವನ ನಡೆಸುತ್ತಿದ್ದಾರೆ . ಪತ್ನಿ ತಮ್ಮೊಟ್ಟಿಗೆ ಇರದ ನೋವು ಸೋಮಣ್ಣ ಮಾಚಿಮಾಡ ಅವರನ್ನು ಅಪಾರವಾಗಿ ಕಾಡುತ್ತಿದೆ. ಪತ್ನಿಯೆಂದರೆ ಈಗಲೂ ಸಹ ಗೌರವ ಪ್ರೀತಿ ಹೊಂದಿರುವ ಸೋಮಣ್ಣ ಅವರು ಪತ್ನಿ ದೂರವಾದ ನೋವಿನಿಂದ ಹೊರಬರಲಾಗುತ್ತಿಲ್ಲ. ನನ್ನ ಹೆಂಡತಿ ಬಹಳ ಒಳ್ಳೆಯವಳು ಅವಳನ್ನು ನಾನೇ ನೋಯಿಸಿಬಿಟ್ಟೆ. ಕೆಲದದ ಒತ್ತಡದಿಂದ ನನಗೆ ಅವಳಿಗೆ ಸರಿಯಾಗಿ ಸಮಯ ನೀಡಲಾಗುತ್ತಿರಲಿಲ್ಲ.

ಕೆಲ ವಿಷಯಗಳಲ್ಲಿ ನಮ್ಮಿಬ್ಬರದ್ದು ವಿರುದ್ಧ ಆಲೋಚನೆಗಳು ಆದ್ದರಿಂದ ಇಬ್ಬರೂ ಒಪ್ಪಿಕೊಂಡೇ ವಿಚ್ಛೇದನ ಪಡೆದುಕೊಂಡೆವು. ಆದರೆ ಅವಳಿಲ್ಲದೆ ನಾನು ಅನುಭವಿಸುತ್ತಿರುವ ನೋವು ಅಷ್ಟಿಷ್ಟಲ್ಲ ಸಂಜೆಯಾದರೆ ಸಾಕು ಲೋಕಲ್ ಬಾರ್ ಗೆ ಹೋಗಿ ಕುಡಿಯುತ್ತೇನೆ. ನನ್ನ ಹೆಂಡತಿ ದೂರವಾದ ನಂತರ‌‌ ನಾನು ನನ್ನ ಕುಟುಂಬವನ್ನು‌ ಕಳೆದುಕೊಂಡೆ.‌ ಸ್ನೇಹಿತರನ್ನೂ ದೂರಮಾಡಿಕೊಂಡೆ. ಬಿಗ್ ಬಾಸ್ ಗೆ ಬರುತ್ತಿರುವ ವಿಷಯವನ್ನು ನಾನು ಮೊದಲಿಗೆ ನನ್ನ‌ ಹೆಂಡತಿಯ ಬಳಿ ಹೇಳಿದೆ.

ಅದಕ್ಕೆ ಅವಳು ನೀನು ತುಂಬಾ ಒಳ್ಳೆಯವನು ನಿನಗೆ ನನ್ನ‌ ಬೆಂಬಲ ಯಾವಾಗಲೂ ಇರುತ್ತದೆ ಎಂದು‌ ಹೇಳಿದಳು ಎಂದು ಹೇಳಿಕೊಂಡು ಎಲ್ಲರ ಮುಂದೆ ಕಣ್ಣೀರಿಟ್ಟರು ಸೋಮಣ್ಣ ಮಾಚಿಮಾಡ. ಇನ್ನು ಮರು ಮದುವೆ ಬಗ್ಗೆಯೂ ಮಾತನಾಡಿದ ಇವರು ನನ್ನ‌ ಜೀವನದಲ್ಲಿ ಅವಳೇ ಮೊದಲು ಅವಳೇ ಕೊನೆಯವಳು ಎಂದು ಹೇಳಿದರು. ಇದನ್ನು ಕೇಳಿ ಮಿಕ್ಕ ಸ್ಪರ್ಧಿಗಳು ಸೋಮಣ್ಣ ಅವರಿಗೆ ಸಮಾಧಾನ ಮಾಡಿದರು…..

Hindustan Prime
Hindustan Prime WhatsApp Group

Get real time updates directly on you device, subscribe now.

Leave A Reply