ಪಡ್ಡೆ ಹುಡುಗರ ಹಾಟ್ ಫೇವರೇಟ್ ಅತ್ಯುತ್ತಮ ನಟಿ ಸೌಂದರ್ಯವತಿ ಎಂದೇ ಕರೆಸಿಕೊಳ್ಳುವ ನಟಿ ತಮನ್ನಾ ಭಾಟಿಯ ಅವರ ಸಿನಿ ಜರ್ನಿ ಹೇಗಯ್ತು ಗೊತ್ತೇ ?ಯಾರ ಮಗಳು ಗೊತ್ತೇ ??
ತಮನ್ನಾ ಭಾಟಿಯ ಎಂದರೆ ಯಾರಿಗೆ ತಿಳಿದಿಲ್ಲ ಹೇಳಿ. ನಟನೆಯಲ್ಲಿಯೂ ಸೈ ಡ್ಯಾನ್ಸ್ ನಲ್ಲಿಯೂ ಸೈ. ತಮ್ಮ ಮುದ್ದು ಮುಖದಿಂದಲೇ ಅಪಾರ ಅಭಿಮಾನಿಗಳನ್ನು ಸಂಪಾದಿಸಿರುವ ಇವರು ಅತ್ಯುತ್ತಮ ನಟಿ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. 1989 ಡಿಸೆಂಬರ್ 21 ರಂದು ಸಂತೋಷ್ ಹಾಗೂ ರಜಿನಿ ಭಾಟಿಯಾ ದಂಪತಿಗಳಿಗೆ ಜನಿಸಿದ ಇವರು.
ಚಿಕ್ಕಂದಿನಿಂದಲೇ ತಾನೊಬ್ಬ ನಟಿಯಾಗಬೇಕೆಂಬ ಕನಸು ಕಂಡಿದ್ದರು. ಇವರ ತಂದೆ ವಜ್ರದ ವ್ಯಾಪಾರಿಯಾಗಿದ್ದರು. ಆದ್ದರಿಂದ ಕಷ್ಟ ಎಂಬುದು ತಮನ್ನಾ ಅವರಿಗೆ ಅಷ್ಟಾಗಿ ತಿಳಿಯಲಿಲ್ಲ. ಆದರೆ ತಾನೊಬ್ಬ ನಟಿಯಾಗಬೇಕೆಂಬ ಕನಸು ಕಂಡಿದ್ದ ಇವರು ಒಮ್ಮೆ ವೇದಿಕೆಯ ಮೇಲೆ ತಮ್ಮ ಪ್ರತಿಭೆಯನ್ನು ತೋರಿಸುತ್ತಿದ್ದರು. ಆಗ ಒಬ್ಬ ನಿರ್ದೇಶಕನ ಕಣ್ಣಿಗೆ ಬಿದ್ದ ಇವರು ನಟಿಸಿದ ಮೊದಲ ಸಿನಿಮಾ ಚಾಂದ್ ಸಾ ರೋಷನ್ ಚೆಹರಾ ಎಂಬ ಸಿನಿಮಾದಲ್ಲಿ.
ಆದರೆ ಬಾಕ್ಸ್ ಆಫೀಸಿನಲ್ಲಿ ಈ ಸಿನಿಮಾ ಸೋತು ಸುಣ್ಣವಾಯಿತು. ಅಗ ತೆಲುಗಿನಲ್ಲಿ ಅವಕಾಶ ಗಿಟ್ಟಿಸಿಕೊಂಡ ಇವರು ನಟಿಸಿದ ಮುಂದಿನ ಚಿತ್ರ ತೆಲುಗಿನ ಶ್ರೀ. ಆದರೆ ಈ ಸಿನಿಮಾವೂ ಸಹ ಸೋತು ಹೋಯಿತು. ಆಗ ತಮಿಳಿನಲ್ಲಿ ಮತ್ತೆ ಕೇಡಿ ಚಿತ್ರದಲ್ಲಿ ನಟಿಸಿದ ಇವರ ಪಾತ್ರಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತಪಡಿಸಿದರು. ನಂತರ ಹ್ಯಾಪಿಡೇಸ್ ಊಸರವಳ್ಳಿ ಇನ್ನು ಮುಂತಾದ ಚಿತ್ರಗಳಲ್ಲಿ ನಟಿಸಿದ ಇವರು ಅಪಾರ ಅಭಿಮಾನಿಗಳನ್ನೇ ಪಡೆದರು.
ತಮಿಳು ತೆಲುಗು ಚಿತ್ರಗಳಲ್ಲಿ ನಟಿಸಿದ ಇವರಿಗೆ ಎಲ್ಲಾ ಕಡೆಯಿಂದಲೂ ಪ್ರಶಂಸೆಗಳು ಕೇಳಿಬಂದವು. ಹೀಗೆ ತಮನ್ನಾ ಅವರ ಸಿನಿ ಜರ್ನಿ ಶುರುವಾಗಿ ಇಲ್ಲಿಯವರೆಗೆ ತಮನ್ನಾ ಅವರು 70 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಬಾಹುಬಲಿ ಮೂಲಕ ಪ್ಯಾನ್ ಇಂಡಿಯಾ ನಟಿಯಾದ ತಮನ್ನಾ ಅವರು ಕನ್ನಡದ ಕೆ ಜಿ ಎಫ್ ನಲ್ಲಿಯೂ ಸಹ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ.
ಈ ಹಿಂದೆ ತಮನ್ನಾ ಅವರ ಹೆಸರು ಹಲವರ ಜೊತೆ ಕೇಳಿಬಂದವು. ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಹಾಗೂ ಪಾಕಿಸ್ತಾನಿ ಕ್ರಿಕೆಟಿಗ ಅಬ್ದುಲ್ ರಜಾಕ್ ಅವರ ಜೊತೆ ಕೇಳಿಬಂದವು ಆದರೆ ಇವನ್ನೆಲ್ಲ ತಮನ್ನಾ ಅಲ್ಲಗಳೆದರು. ಇನ್ನು ನಟನೆಯಷ್ಟೇ ಅಲ್ಲದೆ ಗೋಲ್ಡ್ ಅಂಡ ವೈಟ್ ಎಂಬ ಆಭರಣಗಳ ಅಂಗಡಿಗಳೂ ಸಹ ಇವೆ. ತಮ್ಮ ತಂದೆಯ ಆಸ್ತಿಯನ್ನು ಹೊರತು ಪಡಿಸಿ ತಮನ್ನಾ ಅವರ ಆಸ್ತಿ 120 ಕೋಟಿ. ಬೆಲೆ ಬಾಳುವ.
ದುಬಾರಿ ಕಾರುಗಳನ್ನು ಹೊಂದಿರುವ ತಮಾನ್ನಾ ಅವರಿಗೆ ಈಗಲೂ ಡ್ರೈವಿಂಗ್ ಬರುವುದಿಲ್ಲ. ಇನ್ನು ತಮಗೆ ಕೊಟ್ಟ ಪಾತ್ರಕ್ಕೆ ಅದ್ಭುತವಾಗಿ ನ್ಯಾಯ ಒದಗಿಸುವ ಇವರು ಅದ್ಭುತ ನೃತ್ಯಗಾರ್ತಿಯೂ ಸಹ. ಹುಟ್ಟಿನಿಂದಲೇ ಶ್ರೀಮಂತಿಕೆಯಲ್ಲಿ ಬೆಳೆದ ತಮನ್ನಾ ಅವರು ಚಿತ್ರರಂಗದಲ್ಲಿ ನೆಲೆ ಕಂಡಿರುವುದು ತಮ್ಮ ಪರಿಶ್ರಮದಿಂದ. ಅದೇನೆ ಇರಲಿ ತಮನ್ನಾ ಇನ್ನು ಹೆಚ್ಚೆಚ್ಚು ಚಿತ್ರಗಳಲ್ಲಿ ನಟಿಸಿ ಅಭಿಮಾನಿಗಳನ್ನು ರಂಜಿಸಲಿ ಎಂಬುದೇ ಎಲ್ಲರ ಆಶಯ…..