ನ್ಯಾಷನಲ್ ಕ್ರಶ್ ನಟಿ ರಶ್ಮಿಕಾ ಮಂದಣ್ಣ ಅವರ ಡ್ಯಾನ್ಸ್ ಪರ್ಫಾರ್ಮೆನ್ಸ್ ಹೇಗಿದೆ ಗೊತ್ತಾ , ಮಸ್ತ್ ಅಂತೀರಾ ನೋಡಿದ್ರೆ !!
ಕಿರಿಕ್ ಪಾರ್ಟಿ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪ್ರವೇಶ ಮಾಡಿರುವ ರಶ್ಮಿಕಾ ಮಂದಣ್ಣ ಅವರು ಈಗ ನ್ಯಾಷನಲ್ ಕ್ರಶ್ ನಟಿಯಾಗಿ ಜನಪ್ರಿಯರಾಗಿದ್ದಾರೆ. ಹೌದು ರಶ್ಮಿಕಾ ಮಂದಣ್ಣ ಅವರು ತಮ್ಮ ಮೊದಲನೆಯ ಚಿತ್ರ ಆಗಿರುವ ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಒಳ್ಳೆಯ ಜನಪ್ರಿಯತೆಯನ್ನು ಸಾಧಿಸಿ ಪ್ರಖ್ಯಾತಿಯನ್ನು ಗಳಿಸಿದರು.
ಇದರಲ್ಲಿ ರಶ್ಮಿಕಾ ಮಂದಣ್ಣ ಅವರು ರಕ್ಷಿತ್ ಶೆಟ್ಟಿ ಅವರ ಜೊತೆಗೆ ಅಭಿನಯಿಸಿದ್ದಾರೆ. ಇನ್ನು ರಶ್ಮಿಕಾ ಮಂದಣ್ಣ ಅವರು ಕೇವಲ ನಟನೆಯಲ್ಲಿ ಮಾತ್ರವಲ್ಲ ಡ್ಯಾನ್ಸ್ ಮಾಡುವುದರಲ್ಲಿ ಕೂಡ ಸೈ ಎನಿಸಿಕೊಂಡಿದ್ದಾರೆ. ಹೌದು ನಟಿ ರಶ್ಮಿಕಾ ಮಂದಣ್ಣ ಅವರು ಸಾಕಷ್ಟು ವೇದಿಕೆಗಳ ಮೇಲೆ ಡ್ಯಾನ್ಸ್ ಪ್ರದರ್ಶನಗಳನ್ನು ನೀಡಿದ್ದಾರೆ. ಅವುಗಳಲ್ಲಿ ರಶ್ಮಿಕಾ ಮಂದಣ್ಣ ಅವರು ಒಂದು ವೇದಿಕೆಯ ಮೇಲೆ ಎಷ್ಟು ಸೊಗಸಾಗಿ ಡ್ಯಾನ್ಸ್ ಪರ್ಫಾಮೆನ್ಸ್ ಕೊಟ್ಟಿದ್ದಾರೆ ಗೊತ್ತಾ.
ಇದನ್ನು ನೋಡಿದರೆ ರಶ್ಮಿಕಾ ಅವರು ತಮ್ಮ ಮೈಕಟ್ಟನ್ನು ಹೇಗೆ ಫಿಟ್ ಆಗಿ ಇಟ್ಟುಕೊಂಡಿದ್ದಾರೆ ಎನ್ನುವ ವಿಷಯ ಗೊತ್ತಾಗುತ್ತದೆ. ಇಲ್ಲಿ ರಶ್ಮಿಕಾ ಮಂದಣ್ಣ ಅವರು ಡ್ಯಾನ್ಸ್ ಪರ್ಫಾಮೆನ್ಸ್ ಮಾಡಿರುವ ವೀಡಿಯೋವನ್ನು ಇಲ್ಲಿ ನೋಡಬಹುದು.
ಇನ್ನು ರಶ್ಮಿಕಾ ಮಂದಣ್ಣ ಅವರು ಏಪ್ರಿಲ್ 5 1996 ರಂದು ವಿರಾಜಪೇಟೆಯಲ್ಲಿ ಜನಿಸಿದ್ದಾರೆ. ಇವರು ಕೂರ್ಗ್ ನಲ್ಲಿ ಎಂಎಸ್ ರಾಮಯ್ಯ ಕಾಲೇಜ್ ನಲ್ಲಿ ತಮ್ಮ ಪದವಿಯನ್ನು ಮಾಡಿ ಮುಗಿಸಿದ್ದಾರೆ. ಇನ್ನೂ ಇವರ ತಂದೆಯ ಹೆಸರು ಮದನ್ ಮಂದಣ್ಣ ಮತ್ತು ತಾಯಿಯ ಹೆಸರು ಸುಮನ್ ಮಂದಣ್ಣ. ಹಾಗೆ ಇವರಿಗೆ ಶಿಮನ್ ಮಂದಣ್ಣ ಎನ್ನುವ ಸ್ವಂತ ತಂಗಿ ಕೂಡ ಇದ್ದಾರೆ.
ಇನ್ನು ರಶ್ಮಿಕಾ ಮಂದಣ್ಣ ಅವರು ಕಿರಿಕ್ ಪಾರ್ಟಿ ಚಿತ್ರ ಆದಮೇಲೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಜೊತೆಗೆ ಅಂಜನಿಪುತ್ರ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಇದಾದ ಮೇಲೆ ಚಮಕ್, ಯಜಮಾನ, ಪೊಗರು ಎನ್ನುವ ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಹಾಗೆಯೇ ತೆಲುಗಿನಲ್ಲಿ ಚಲೋ ಚಿತ್ರದ ಮೂಲಕ ಟಾಲಿವುಡ್ ಗೆ ಪ್ರವೇಶ ಮಾಡಿದರು. ಇದಾದ ಮೇಲೆ ಗೀತಾ ಗೋವಿಂದಂ, ದೇವದಾಸ್, ಡಿಯರ್ ಕಾಮ್ರೇಡ್, ಸರಿಲೇರು ನೀಕ್ಕೆವ್ವರು, ಭೀಷ್ಮ, ಪುಷ್ಪ ಎನ್ನುವ ತೆಲುಗು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇದರ ಜೊತೆಗೆ ಒಂದು ತಮಿಳು ಚಿತ್ರದಲ್ಲೂ ಕೂಡ ಅಭಿನಯಿಸಿದ್ದಾರೆ……