ಶಿವರಾಜಕುಮಾರ್ ಮತ್ತು ನಟ ಜಗ್ಗೇಶ್ ಅವರೊಂದಿಗೆ ಅಭಿನಯಿಸಿದ ನಟಿ ಚಾರುಲತಾ ಈಗ ಎಲ್ಲಿದ್ದಾರೆ ಏನು ಮಾಡುತ್ತಿದ್ದಾರೆ? ಮೊದಲಬಾರಿಗೆ ತಿಳಿದುಕೊಳ್ಳಿ!@
ಜನಪ್ರಿಯ ನಟಿ ಚಾರುಲತಾ ಇವರ ಮೊದಲಿನ ಹೆಸರು ಸೋನಿಯಾ ಸಿಂಗ್ ವಾಲಿಯ ಎಂದು. ತದನಂತರ ಚಾರುಲತಾ ಎನ್ನುವ ಹೆಸರಿಗೆ ಬದಲಾಯಿಸಿಕೊಂಡರು. ಇವರು ಏಪ್ರಿಲ್ 27 ರಂದು ಪಂಜಾಬ್ ನಲ್ಲಿ ಜನಿಸಿದ್ದಾರೆ. ಇವರು ಕನ್ನಡ ತಮಿಳು ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಸಾಕಷ್ಟು ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ. ಇವರು ಹುಟ್ಟಿದ್ದು ಪಂಜಾಬ್ ನಲ್ಲೇ ಆದರೆ ಬೆಳೆದಿದ್ದು ಮಾತ್ರ ಕೇರಳಾದಲ್ಲಿ.
ಮೊದಲು ಇವರು ಮಾಡೆಲಿಂಗ್ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರು ತದನಂತರ ನಟಿಯಾಗಿ ಸಿನಿಮಾದಲ್ಲಿ ಕಾಣಿಸಿಕೊಂಡರು. ಹೌದು ಇವರು ಕೇರಳದಲ್ಲಿ ಸಾಕಷ್ಟು ಅಡ್ವರ್ಟೈಸ್ ಮೆಂಟ್ ಗಳಲ್ಲಿ ಚಿಕ್ಕ ವಯಸ್ಸಿನಲ್ಲೇ ಕಾಣಿಸಿಕೊಂಡಿದ್ದಾರೆ.
ಇನ್ನೂ ಸಿನಿಮಾ ರಂಗಕ್ಕೆ ಬಂದರೆ ಕನ್ನಡದಲ್ಲಿ 1997 ರಲ್ಲಿ ಖ್ಯಾತ ನಿರ್ದೇಶಕರಾದ ವಿ ಮನೋಹರ್ ಅವರ ನಿರ್ದೇಶನದ ಓ ಮಲ್ಲಿಗೆ ಚಿತ್ರದ ಮೂಲಕ ಮೊದಲನೆಯದಾಗಿ ಬೆಳ್ಳಿ ತೆರೆಯ ಮೇಲೆ ಕಾಣಿಸಿಕೊಂಡರು.
ಇದಾದ ಮೇಲೆ ಜೋಡಿಹಕ್ಕಿ, ಅಂತರ್ಗಾಮಿ, ಸಿಂಹದ ಗುರಿ, ಮಾತಿನ ಮಲ್ಲ, ಸುವ್ವಿ ಸುವ್ವಾಲಿ, ಜೈ ದೇವ್, ಹಬ್ಬ, ಅಂಡರ್ ವರ್ಲ್ಡ್, ಹೃದಯಾಂಜಲಿ, ಇದು ಎಂಥಾ ಪ್ರೇಮವಯ್ಯಾ, ಮಿಸ್ಟರ್ ಎಕ್ಸ್, ಎಕೆ 47,
ಟುವಿ ಟುವಿ ಟುವಿ, ಆಶಾ ನನ್ನ ಮದುವೆ ಅಂತೆ, ಬೂಟ್ನಿಕೆ, ಮದುವೆ, ನಾಗದೇವತೆ, ಭೂಮಿ, ಈ ನನ್ನ ಜೀವ, ಮಿಂಚು, ನಕ್ಸಲೈಟ್, ನೀಲಾಂಬರಿ, ಪಲ್ಲವಿ ಇಲ್ಲದ ಚರಣ, ತಬ್ಬಲಿ, ಮಹಾವೀರ ಮಾಚಿದೇವ, ಚಕ್ರವರ್ತಿ ಎನ್ನುವ ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಚಾರುಲತಾ ಅವರು 2009 ರ ನಂತರ ಕೆಲ ವರ್ಷಗಳ ಗ್ಯಾಪ್ ತೆಗೆದುಕೊಂಡು ಮತ್ತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿನಯದ ಚಕ್ರವರ್ತಿ ಸಿನಿಮಾದಲ್ಲಿ ಪೋಷಕ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಇನ್ನು ಚಕ್ರವರ್ತಿ ಸಿನಿಮಾ ಆದ ಮೇಲೆ ಚಾರುಲತಾ ಅವರು ಯಾವ ಸಿನಿಮಾದಲ್ಲಿ ಕೂಡ ನಟಿಸಲಿಲ್ಲ. ಪ್ರಸ್ತುತ ಚಾರುಲತಾ ಅವರು ಈಗ ಹೇಗಿದ್ದಾರೆ ಎಂದು ನೀವು ಇಲ್ಲಿ ನೋಡಬಹುದು…..