ನೀ ತಂದ ಕಾಣಿಕೆಯಲ್ಲಿ ಡಾ. ವಿಷ್ಣುವರ್ಧನ್ ಜೊತೆ ಜಯಪ್ರದಾ ನಟಿಸಬೇಕಿತ್ತು., ಆದರೆ ಯಾಕೆ ಆ ಸಿನಿಮಾದಲ್ಲಿ ನಟಿಸಲಿಲ್ಲ ಗೊತ್ತೇ ?? ಆ ಒಂದು ಕಾರಣಕ್ಕೆ ಮಾತ್ರ !!
ದ್ವಾರಕೀಶ್ ಅವರ ನಿರ್ದೇಶನದಲ್ಲಿ ಸಾಕಷ್ಟು ಒಳ್ಳೆಯ ಸಿನಿಮಾಗಳು ಬಂದಿವೆ. ಇನ್ನು ಒಂದು ಹಳೆಯ ಹಿಂದಿನ ಸಿನಿಮಾವನ್ನು ನೋಡಿ ಅದನ್ನು ಹೇಗಾದರೂ ಕನ್ನಡದಲ್ಲಿ ಮಾಡಬೇಕು ಎಂದು ಅದರ ಹಕ್ಕುಗಳನ್ನು ಪಡೆದುಕೊಂಡು ದ್ವಾರಕೀಶ್ ಅವರು ಸಿನಿಮಾವನ್ನು ಮಾಡುವುದಕ್ಕೆ ಸಜ್ಜಾದರು. ಇನ್ನೂ ಈ ಸಿನಿಮಾದಲ್ಲಿ ಹೀರೋ ಯಾರು ಎಂದು ಯೋಚನೆ ಮಾಡುತ್ತಿರುವ ಸಮಯದಲ್ಲಿ ತನ್ನ ಆಪ್ತ ಆಗಿರುವ ವಿಷ್ಣುವರ್ಧನ್ ಅವರು ನೆನಪಾದರು.
ಈ ಸಿನಿಮಾಗೆ ಕರೆಕ್ಟಾಗಿ ಸಾಹಸಿಂಹ ವಿಷ್ಣುವರ್ಧನ್ ಅವರು ಸೂಟ್ ಆಗುತ್ತಾರೆ ಎಂದು ಹೇಳಿ ಅವರನ್ನು ಕೇಳಿದಾಗ ವಿಷ್ಣುವರ್ಧನ್ ಅವರು ಹಿಂದೆ ಮುಂದೆ ನೋಡದೆ ದ್ವಾರಕೀಶ್ ಅವರ ಮೇಲೆ ಇರುವ ಅಪಾರವಾದ ನಂಬಿಕೆಯ ಮೇಲೆ ಈ ಸಿನಿಮಾವನ್ನು ಮಾಡುವುದಕ್ಕೆ ಒಪ್ಪಿಕೊಂಡರು. ಇನ್ನು ಅದು ಯಾವ ಸಿನಿಮಾ ಎಂದರೆ ನೀ ತಂದ ಕಾಣಿಕೆ.
ಇನ್ನು ಈ ಸಿನಿಮಾಗೆ ಹೀರೋಯಿನ್ ಆಗಿ ಜಯಪ್ರದಾ ಅವರನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಹೇಳಿ ದ್ವಾರಕೀಶ್ ಅವರು ತಾವು ಕೇಳಿದ ಹಣವನ್ನು ನೀಡುವುದಕ್ಕೆ ರೆಡಿ ಇದ್ದರು. ಆದರೆ ಆಗಾಗಲೇ ಜಯಪ್ರದಾ ಅವರು ಮಲಯಾಳಂ ಸಿನಿಮಾ ಒಂದನ್ನು ಒಪ್ಪಿಕೊಂಡಿದ್ದರು. ಹೀಗಾಗಿ ಈ ಮಲೆಯಾಳಂ ಸಿನಿಮಾ ಮುಗಿದ ಕೂಡಲೇ ತಾವು ನೀ ತಂದ ಕಾಣಿಕೆ ಸಿನಿಮಾದಲ್ಲಿ ನಟಿಸುತ್ತೇನೆ ಎಂದು ಹೇಳಿದ್ದರು.
ಹಾಗಾಗಿ ಇದಕ್ಕೆ ಮೂರು ತಿಂಗಳು ಸಮಯವನ್ನು ಕೇಳಿದ್ದರು. ಆದರೆ ದ್ವಾರಕೀಶ್ ಅವರು ವಿಷ್ಣುವರ್ಧನ್ ಅವರನ್ನು ಕಾಯಿಸುವುದಕ್ಕೆ ಆಗುವುದಿಲ್ಲ ಒಂದು ಹೀರೋಯಿನ್ ಗೋಸ್ಕರ ಇಡೀ ಚಿತ್ರತಂಡ ಕಾಯುವುದು ಅಷ್ಟು ಉತ್ತಮವಲ್ಲ ಎಂದು ಹೇಳಿ ಆ ಸಿನಿಮಾ ಗೆ ಖ್ಯಾತ ನಟಿ ಜಯಸುಧಾ ಅವರನ್ನು ಹೀರೋಯಿನ್ ಆಗಿ ಹಾಕಿ ಸಿನಿಮಾವನ್ನು ನಿರ್ದೇಶನ ಮಾಡಿದರು.
ಇನ್ನೂ ಅದೇನಾಯಿತು ಗೊತ್ತಿಲ್ಲ ಈ ಸಿನಿಮಾವನ್ನು ಅಭಿಮಾನಿಗಳು ಅಷ್ಟಾಗಿ ನೋಡಲಿಲ್ಲ. ಇದರಿಂದ ದ್ವಾರಕೇಶ್ ಅವರಿಗೆ ತುಂಬಾನೇ ಬೇಸರವಾಯಿತು. ಕೆಲವೊಂದು ಸಿನಿಮಾಗಳು ಕಥೆ ಇದ್ದರೂ ಒಳ್ಳೆಯ ಸಂದೇಶವಿ ಇದ್ದರೂ ಕೂಡ ಹೀಗೆ ಆಗುತ್ತದೆ. ಇದರಿಂದ ನಾನು ಬುದ್ಧಿ ಕಲಿತೆ ಇಂದು ಹೇಳಿದರು. ಇದಾದ ಮೇಲೆ ವಿಷ್ಣುವರ್ಧನ್ ಮತ್ತು ಜಯಪ್ರದಾ ಅವರು ಸಾಕಷ್ಟು ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ್ದಾರೆ. ಆದರೆ ದ್ವಾರಕೀಶ್ ಅವರ ನಿರ್ದೇಶನದಲ್ಲಿ ಜಯಪ್ರದಾ ಅವರು ನಟಿಸಲಿಲ್ಲ ಎನ್ನುವ ಚಿಕ್ಕ ಬೇಸರವಿದೆ ಎಂದು ಹೇಳಿದ್ದಾರೆ……