ನೀವೇನಾದರೂ ಸ್ನಾನದ ಬಳಿಕ ಇಂತಹ ತಪ್ಪುಗಳನ್ನು ಮಾಡಿದರೆ ಕಷ್ಟ ನಿಮಗೆ ಕಟ್ಟಿಟ್ಟ ಬುತ್ತಿ* ಸ್ನೇಹಿತರೆ ಹಿಂದೂ ಧರ್ಮದಲ್ಲಿ
ಸ್ನೇಹಿತರೆ ಹಿಂದೂ ಧರ್ಮದಲ್ಲಿ ಪ್ರತಿಯೊಂದು ಆಚರಣೆಗಳಿಗೂ ಒಂದೊಂದು ಕಾರಣಗಳಿವೆ. ಪುರಾತನ ಕಾಲದಿಂದ ಹಿಂದೂ ಧರ್ಮದಲ್ಲಿ ಆಚರಿಸಿಕೊಂಡು ಬಂದ ಆಚರಣೆಗಳು ಪದ್ಧತಿಗಳು ಪ್ರತಿಯೊಂದಕ್ಕೂ ಹಿರಿಯರು ಅವರದೇ ಆದ ನಿಯಮಾವಳಿಗಳನ್ನು ಮಾಡಿಟ್ಟಿದ್ದಾರೆ. ಅದರಲ್ಲೂ ಕೆಲವು ನಿಯಮಗಳು ಈಗಲೂ ನಮ್ಮ ಜೀವನಕ್ಕೆ ಅಪ್ಲೈ ಆಗುವಂಥವು. ನಾವು ಅವುಗಳನ್ನು ಏನಾದರೂ ತಪ್ಪಿದರೆ ನಮಗೆ ಜೀವನದಲ್ಲಿ ಸಂಕಷ್ಟಗಳು ತೊಂದರೆಗಳು ಎದುರಾಗಬಹುದು.
ಹಿರಿಯರು ಮಾಡಿಟ್ಟಿರುವ ಕೆಲವು ಸಂಪ್ರದಾಯಗಳಲ್ಲಿ ಸ್ನಾನವಾದ ನಂತರ ನಾವು ಮಾಡಲೇಬಾರದ ಕೆಲವು ವಿಷಯಗಳು ಇವೆ. ತಪ್ಪಿಯೂ ನೀವು ಇಂತಹ ತಪ್ಪುಗಳನ್ನು ಮಾಡಿದರೆ ಖಂಡಿತವಾಗಿಯೂ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗಾದ್ರೆ ಸ್ನಾನ ಮಾಡಿದ ನಂತರ ಮಾಡಬಾರದ ಆ ತಪ್ಪುಗಳು ಯಾವವು? ನೋಡೋಣ ಬನ್ನಿ.
ಮೊದಲನೆಯದಾಗಿ ಸ್ನಾನವಾದ ನಂತರ ಬಕೆಟ್ ಅಥವಾ ಟಬ್ ನಲ್ಲಿ ಸೋಪಿನ ನೀರನ್ನು ಹಾಗೆಯೇ ಬಿಟ್ಟು ಬರಬಾರದು. ಬಾತ್ ರೂಮ್ ನಲ್ಲಿ ಸ್ನಾನ ಮಾಡಿದ ನಂತರ ಇರುವ ಸೋಪಿನ ನೀರು ಹಾಗೆಯೇ ಉಳಿಯದಂತೆ ಬಚ್ಚಲು ಮನೆಯನ್ನು ನೀರಿಂದ ಸ್ವಚ್ಛಗೊಳಿಸಿ ಬನ್ನಿ ಇಲ್ಲವಾದರೆ ಮನೆಯಲ್ಲಿಯೂ ಸಾಕಷ್ಟು ಸಂಕಷ್ಟಗಳನ್ನ ಎದುರಿಸಬೇಕಾಗಬಹುದು. ಇನ್ನು ಮುಂದಿನದು, ಯಾವಾಗಲೂ ಸ್ನಾನವಾದ ಬಳಿಕ ಬಟ್ಟೆಯನ್ನು ತೊಳೆಯಬಾರದು ಇದು ನಮ್ಮನ್ನ ಸ್ನಾನವಾದ ಬಳಿಕವೂ ಅಶುಚಿಯಾಗಿಯೇ.
ಇಡುತ್ತದೆ ಎನ್ನುವ ನಂಬಿಕೆ ಇದೆ ಹಾಗಾಗಿ ಮನೆಯ ಯಾವುದೇ ಕೆಲಸವಿದ್ದರೂ ಸ್ನಾನಕ್ಕೂ ಮೊದಲು ಮುಗಿಸಿ. ಸ್ನಾನವಾದ ನಂತರ ಮನೆಯ ಸ್ವಚ್ಛತೆಯ ಕೆಲಸಗಳನ್ನು ಮಾಡುವುದು ಸರಿಯಲ್ಲ ಇದು ದಾರಿದ್ರ್ಯಕ್ಕೆ ದಾರಿ ಮಾಡಿ ಕೊಡುತ್ತದೆ. ಹಾಗಾಗಿ ಸ್ನಾನ ಮಾಡುವುದಕ್ಕೂ ಮೊದಲು ಬಟ್ಟೆಗಳನ್ನು ಕೂಡ ತೊಳೆದು ಹಾಕಿ ಬಳಿಕ ನೀವು ಸ್ನಾನ ಮಾಡಿದರೆ ಅದು ಮನೆಗೂ ಶ್ರೇಯಸ್ಸು.
ಇನ್ನು ಸ್ನಾನವಾದ ಬಳಿಕ ಒದ್ದೆ ಬಟ್ಟೆಯನ್ನು ಬಚ್ಚಲು ಮನೆಯಲ್ಲಿಯೇ ಇಟ್ಟು ಬರಬಾರದು. ಇದು ಖಂಡಿತವಾಗಿಯೂ ಶ್ರೇಯಸ್ಸಲಾ ಜೊತೆಗೆ ಮನೆಗೆ ಬರಬೇಕಾದ ಹಣವು ಕೂಡ ಬರುವುದಿಲ್ಲ ಹಾಗಾಗಿ ಒದ್ದೆ ಬಟ್ಟೆಯನ್ನು ಬಚ್ಚಲು ಮನೆಯಲ್ಲಿಯೇ ಇಟ್ಟು ಬರುವುದಕ್ಕಿಂತ ಸ್ನಾನವಾದ ಮೇಲೆ ಅವುಗಳನ್ನು ನಿಮ್ಮ ಜೊತೆಗೆ ಹೊರಗಡೆಗೆ ತೆಗೆದುಕೊಂಡು ಬನ್ನಿ. ಇದು ಮನೆಯಲ್ಲಿರುವ ಹಿರಿಯರಿಗೂ ಕೂಡ ಶ್ರೇಯಸ್ಕರ. ಇನ್ನು ಸ್ನಾನವಾದ ನಂತರ ಸಾಮಾನ್ಯವಾಗಿ ಬಕೆಟ್ ನಲ್ಲಿ ಒಂದು ಚೆಂಬು ನೀರನ್ನ ಹಾಗೆ ಬಿಟ್ಟು ಬರುತ್ತಾರೆ ಇದು ಹಲವರಿಗೆ.
ಅಭ್ಯಾಸವಿರುತ್ತದೆ ಆದರೆ ಹೀಗೆ ನಾವು ಸ್ನಾನ ಮಾಡಿದ ಬಳಿಕ ನೀರನ್ನು ಬಕೆಟ್ ನಲ್ಲಿ ಬಿಟ್ಟು ಬರುವುದು ತಪ್ಪು. ಇದು ಮನೆಯಲ್ಲಿ ಅಶಾಂತಿಗೆ ಕಾರಣವಾಗುತ್ತದೆ ಹಾಗಾಗಿ ಸ್ನಾನವಾದ ಬಳಿಕ ಬಕೆಟ್ ನ ಪೂರ್ತಿ ಖಾಲಿ ಮಾಡಿ ನೀರು ಇರದಂತೆ ಇಟ್ಟು ಬರಬೇಕು ಅಥವಾ ಬಕೆಟ್ ನ ತುಂಬಾ ನೀರನ್ನು ತುಂಬಿಸಿಟ್ಟು ಬರಬೇಕು. ಇನ್ನು ಕೊನೆಯದಾಗಿ ಸಾಮಾನ್ಯವಾಗಿ ಹೆಣ್ಣು ಮಕ್ಕಳಿಗೆ ಈ ಅಭ್ಯಾಸವಿರುತ್ತದೆ ಅದೇನೆಂದರೆ ತಲೆ ಸ್ನಾನವಾದ ಬಳಿಕ ಕೂದಲನ್ನ ಬಾತ್ ರೂಮ್ ನಲ್ಲಿಯೇ ಬಿಟ್ಟು ಬರುತ್ತಾರೆ.
ಇದು ಸ್ವಚ್ಛತೆಯ ದೃಷ್ಟಿಯಿಂದಲೂ ಒಳ್ಳೆಯ ಅಭ್ಯಾಸವಲ್ಲ ಹಾಗೆಯೇ ಇದು ಉತ್ತಮ ಸಂಪ್ರದಾಯವು ಅಲ್ಲ. ಬಾತ್ರೂಮಿನಲ್ಲಿ ಹೀಗೆ ಕೂದಲನ ಬಿಟ್ಟು ಬಂದರೆ ಅದು ಮನೆಯಲ್ಲಿ ಸಂಕಷ್ಟಗಳನ್ನ ತರುತ್ತದೆ. ಹಾಗಾಗಿ ನೀವು ತಲೆ ಸ್ನಾನವಾದ ನಂತರ ಬಿದ್ದಿರುವ ಕೂದಲುಗಳನ್ನು ಬಾತ್ ರೂಂನಿಂದ ಹೆಕ್ಕಿ ತಂದು ಮನೆಯಲ್ಲಿರುವ ಕಸದ ಬುಟ್ಟಿಗೆ ಹಾಕಿ.
ಸ್ನೇಹಿತರೆ ಸ್ನಾನವಾದ ಬಳಿಕ ಇಂತಹ ಕೆಲವು ಬದಲಾವಣೆಗಳನ್ನು ನೀವು ಜೀವನದಲ್ಲಿ ಮಾಡಿಕೊಂಡು ಬಂದರೆ ಜೀವನದಲ್ಲಿ ಸಾಕಷ್ಟು ಆರ್ಥಿಕತೆ ಹಾಗೂ ನೆಮ್ಮದಿ ಉಳಿದುಕೊಳ್ಳುತ್ತದೆ. ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ತಪ್ಪದೇ ನಮಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ ತಿಳಿಸಿ.