Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ನಿಮಗೆ ಬೀಳುವ ದೇವರ ಕನಸುಗಳು ಏನನ್ನು ಸೂಚಿಸುತ್ತದೆ, ಇದರಿಂದ ಒಳ್ಳೆಯದಾ ಅಥವಾ ಕೆಟ್ಟದ ಮೊದಲ ಬಾರಿಗೆ ತಿಳಿದುಕೊಳ್ಳಿ !!

0

ಎಲ್ಲರಿಗೂ ಪ್ರತಿದಿನ ರಾತ್ರಿ ಮಲಗಿದ್ದಾಗ ಯಾವುದಾದರೂ ಒಂದು ರೀತಿಯ ಕನಸುಗಳು ಬಂದೇ ಬರುತ್ತವೆ. ಕೆಲವೊಂದು ಮಾರನೆಯ ದಿನ ಅದು ನೆನಪಿಗೆ ಬರುತ್ತದೆ ಮತ್ತೊಂದು ನೆನಪಿಗೆ ಕೂಡ ಇರುವುದಿಲ್ಲ. ಇನ್ನೂ ಕೆಲವರಿಗೆ ಕನಸಿನಲ್ಲಿ ದೇವರ ಕನಸು ಬಂದರೆ ಅದು ಅಶುಭ ಕೂಡ ಆಗಿರುತ್ತದೆ.

ಹೌದು ಕನಸಿನಲ್ಲಿ ದೇವರ ಕನಸುಗಳು ಬಂದರೆ ಕೆಲ ಸೂಚನೆಗಳನ್ನು ತೋರಿಸುತ್ತದೆ. ಹಾಗಾದರೆ ಬನ್ನಿ ರಾತ್ರಿ ಸಮಯದಲ್ಲಿ ನಾವು ಮಲಗಿದ್ದಾಗ ದೇವರು ಕನಸುಗಳು ಬಂದರೆ ಏನನ್ನು ಸೂಚಿಸುತ್ತದೆ ಎಂದು ಇಲ್ಲಿ ತಿಳಿದುಕೊಳ್ಳೋಣ..

ಈಶ್ವರನನ್ನು ಲಯಕಾರಕ ಎಂದೂ ಹೇಳುತ್ತಾರೆ ಅಂದರೆ ಒಬ್ಬ ಮನುಷ್ಯ ಸತ್ತಮೇಲೆ ಶಿವನ ಪಾದಕ್ಕೆ ಸೇರುವುದು. ಹೀಗಾಗಿ ಕನಸಿನಲ್ಲಿ ಶಿವನು ಬಂದರೆ ನಿಮ್ಮ ಕಷ್ಟಗಳು ತೊಂದರೆಗಳು ಅತಿಬೇಗ ನಿವಾರಣೆಯಾಗುತ್ತದೆ ಎಂದು ಸೂಚಿಸುತ್ತದೆ ಜೊತೆಗೆ ಐಶ್ವರ್ಯ ಸಂಪತ್ತು ಕೂಡ ಲಭಿಸುತ್ತದೆ ಎಂದು ಹೇಳುತ್ತದೆ.

ದುರ್ಗಾದೇವಿ ಅಸುರ ಸಂಹಾರದ ವೇಳೆಯಲ್ಲಿ ಚಂಡಿಯಾಗಿ ತದನಂತರ ಸೌಮ್ಯ ರೂಪದಲ್ಲಿ ಇರುವುದು ಈ ದೇವಿಯ ಲಕ್ಷಣಗಳಾಗಿರುತ್ತವೆ. ಇನ್ನೂ ದುರ್ಗಾ ದೇವಿ ಕನಸಿನಲ್ಲಿ ಕೆಂಪು ವಸ್ತ್ರವನ್ನು ಧರಿಸಿ ಬಂದರೆ ನಿಮಗೆ ಶುಭವನ್ನು ಸೂಚಿಸುತ್ತದೆ ಅಂದರೆ ನಿಮ್ಮ ಕೆಲಸಗಳು ನಿಂತು ಹೋಗಿದ್ದರೆ ಅದು ಸುಗಮವಾಗಿ ಆಗಿ ಸಂಪತ್ತನ್ನು ಒದಗಿಸುತ್ತದೆ. ಒಂದು ವೇಳೆ ದುರ್ಗಾದೇವಿ ಜೊತೆಗೆ ಗರ್ಜಿಸುವ ಸಿಂಹ ಕೂಡ ಬಂದರೆ ನಿಮಗೆ ಮುಂದೆ ಕಷ್ಟಗಳು ಬರುವ ಸಾಧ್ಯತೆಗಳಿವೆ ಎಂದು ಸೂಚಿಸುತ್ತದೆ.

ಇನ್ನು ಶ್ರೀರಾಮನು ತನ್ನ ಇಡೀ ಜೀವನದ ಪೂರ್ತಿ ಶ್ರದ್ಧೆ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ಹೀಗಾಗಿ ರಾತ್ರಿ ಸಮಯದಲ್ಲಿ ಮಲಗಿದ್ದಾಗ ಶ್ರೀರಾಮನು ಕನಸಿನಲ್ಲಿ ಬಂದರೆ ನಿಮಗೆ ಮುಂದೆ ಜವಾಬ್ದಾರಿಗಳು ಹೆಚ್ಚಾಗುತ್ತವೆ ಎಂದು ಸೂಚಿಸುತ್ತದೆ.

ಇನ್ನು ಶ್ರೀಕೃಷ್ಣನು ಸ್ನೇಹಜೀವಿ ಎಂದು ಹೇಳಬಹುದು. ಏಕೆಂದರೆ ಇವರು ಎಲ್ಲರ ಜೊತೆಗೂ ತುಂಬಾ ಪ್ರೀತಿಯಿಂದ ಇದ್ದವರು. ಹಾಗಾಗಿ ಶ್ರೀಕೃಷ್ಣನನ್ನು ಪ್ರೀತಿ ಮಾಡದೇ ಇರುವವರು ಯಾರೂ ಕೂಡ ಇಲ್ಲ. ಇನ್ನೂ ಶ್ರೀಕೃಷ್ಣನು ಕನಸಿನಲ್ಲಿ ಬಂದರೆ ನಿಮ್ಮ ಜೀವನದಲ್ಲಿ ಪ್ರೀತಿಯ ಹೂವುಗಳು ಅರಳುತ್ತಿವೆ ಎಂದು ಅರ್ಥ. ಇದರ ಜೊತೆಗೆ ನಿಮ್ಮ ಜೀವನದಲ್ಲಿ ಯಶಸ್ಸನ್ನು ಕೂಡ ಸಾಧಿಸುತ್ತೀರಾ ಎಂದು ಸೂಚಿಸುತ್ತದೆ.

ನಿಮ್ಮ ಕನಸಿನಲ್ಲಿ ಶ್ರೀಮಹಾಲಕ್ಷ್ಮಿ ಬಂದರೆ ಮಹಾಲಕ್ಷ್ಮಿ ದುಡ್ಡಿನ ಸಂಕೇತದ ದೇವತೆ ಆಗಿರುವುದರಿಂದ ಲಕ್ಷ್ಮಿ ನಿಮ್ಮ ಜೀವನದಲ್ಲಿ ಅಪಾರ ಸಂಪತ್ತನ್ನು ಒದಗಿಸುತ್ತಾಳೆ ಎಂದು ಸೂಚಿಸುತ್ತದೆ.

ಇನ್ನು ಶ್ರೀ ಮಹಾವಿಷ್ಣು ನಿಮ್ಮ ಕನಸಿನಲ್ಲಿ ಬಂದರೆ ನಿಮ್ಮ ಅದೃಷ್ಟ ಬದಲಾಗುತ್ತದೆ ಮತ್ತು ಯಶಸ್ಸನ್ನು ಸಾಧಿಸುತ್ತೀರಾ ಎಂದು ಸೂಚಿಸುತ್ತದೆ…..

Leave A Reply