Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ನವರಸ ನಾಯಕ ಜಗ್ಗೇಶ್ ಮತ್ತು ಪರಿಮಳಾ ಜಗ್ಗೇಶ್ ಅವರ ಮದುವೆಯ ಅಪರೂಪದ ಕ್ಷಣಗಳು..!!

0

ನವರಸ ನಾಯಕ ಎಂದೇ ಹೆಸರನ್ನು ಸಂಪಾದನೆ ಮಾಡಿಕೊಂಡಿರುವ ಜಗ್ಗೇಶ್ ಅವರು ಮಾರ್ಚ್ 17 1963 ರಂದು ಮಾಯಸಂದ್ರದಲ್ಲಿ ಜನಿಸಿದ್ದಾರೆ. ಇವರಿಗೆ ಈಗ 59 ವರ್ಷಗಳು ಆಗಿವೆ. ಜಗ್ಗೇಶ್ ಅವರ ತಂದೆಯ ಹೆಸರು ಶಿವಲಿಂಗಪ್ಪ ಮತ್ತು ತಾಯಿಯ ಹೆಸರು ನಂಜಮ್ಮ. ಇನ್ನೂ ಇವರಿಗೆ ಹಾಸ್ಯ ನಟ ಕೋಮಲ್ ಅವರು ಸಹೋದರ ಆಗಬೇಕು.

ಹಾಗೆಯೇ ಮಹಾದೇವಿ ಮತ್ತು ವಿಜಯಲಕ್ಷ್ಮಿ ಎನ್ನುವವರು ಸಹೋದರಿಯರು ಕೂಡ ಇದ್ದಾರೆ. ಇನ್ನು ಜಗ್ಗೇಶ್ ಅವರು ಕೇವಲ ನಟನೆಯಲ್ಲಿ ಮಾತ್ರ ಅಲ್ಲ ಕೆಲ ಸಿನಿಮಾಗಳನ್ನು ನಿರ್ದೇಶನ ಕೂಡ ಮಾಡಿದ್ದಾರೆ. ಹಾಗೆಯೇ ಇವರು ರಾಜಕೀಯ ಕ್ಷೇತ್ರದಲ್ಲೂ ಕೂಡ ತೊಡಗಿಸಿಕೊಂಡಿದ್ದರು.

ಜಗ್ಗೇಶ್ ಅವರು ತಮ್ಮ ಸಿನಿಮಾ ಕೆರಿಯರ್ ಅನ್ನು ಇಬ್ಬನಿ ಕರಗಿತು ಎನ್ನುವ ಚಿತ್ರದ ಮೂಲಕ ಶುರು ಮಾಡಿಕೊಂಡರು. ಇದು 1982 ರಂದು ಬಿಡುಗಡೆಯಾಯಿತು. ತದನಂತರ ಇವರು ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಇದರ ಜೊತೆಗೆ ಜಗ್ಗೇಶ್ ಅವರು ಗುರು ಮತ್ತು ಮೇಲುಕೋಟೆ ಮಂಜ ಚಿತ್ರಗಳನ್ನು ನಿರ್ದೇಶನ ಸಹ ಮಾಡಿದ್ದಾರೆ.

ಹಾಗೆಯೇ ಸಾಕಷ್ಟು ರಿಯಾಲಿಟಿ ಶೋಗಳಿಗೆ ಮತ್ತು ಕಾರ್ಯಕ್ರಮಗಳಿಗೆ ಜಡ್ಜ್ ಕೂಡ ಆಗಿದ್ದರು. ಇನ್ನು ಜಗ್ಗೇಶ್ ಅವರು ಪರಿಮಳ ಎನ್ನುವವರನ್ನು 1984 ರಲ್ಲಿ ವಿವಾಹ ಮಾಡಿಕೊಂಡಿದ್ದಾರೆ. ಇವರದ್ದು ಲವ್ ಮ್ಯಾರೇಜ್ ಅಂದರೆ ಪರಿಮಳ ಅವರ ಮನೆಯವರ ವಿರುದ್ಧವಾಗಿ ಇಬ್ಬರೂ ಸಿಂಪಲ್ ಆಗಿ ದೇವಸ್ಥಾನದಲ್ಲಿ ಮದುವೆ ಮಾಡಿಕೊಂಡಿದ್ದಾರೆ.

ಜಗ್ಗೇಶ್ ಅವರು ಮದುವೆಯಾದ ಸಮಯದಲ್ಲಿ ಅವರಿಗೆ ಕೇವಲ 19 ವರ್ಷಗಳು ಇದ್ದವು ಮತ್ತು ಪರಿಮಳ ಅವರಿಗೆ ಕೇವಲ 14 ವರ್ಷಗಳ ಇದ್ದವು. ಅಂದರೆ ಪರಿಮಳ ಅವರು ಒಂಭತ್ತನೆಯ ತರಗತಿಯಲ್ಲಿ ಓದುತ್ತಿದ್ದರು. ಹೀಗೆ ಇವರು ಮದುವೆ ಮಾಡಿಕೊಂಡ ಮೇಲೆ ಸಾಕಷ್ಟು ಕಷ್ಟ ನೋವುಗಳನ್ನು ನೋಡಿ ಈಗ ತುಂಬಾ ಅನ್ಯೋನ್ಯ ದಾಂಪತ್ಯ ಜೀವನವನ್ನು ನಡೆಸುತ್ತಿದ್ದಾರೆ.

ಇವರಿಗೆ ಯತಿರಾಜ್ ಮತ್ತು ಗುರುರಾಜ್ ಎನ್ನುವ ಇಬ್ಬರು ಗಂಡು ಮಕ್ಕಳು ಇದ್ದಾರೆ. ನವರಸ ನಾಯಕ ಜಗ್ಗೇಶ್ ಮತ್ತು ಪರಿಮಳ ಜಗ್ಗೇಶ್ ಅವರ ಮದುವೆಯ ಕೆಲ ಅಪರೂಪದ ಸುಂದರ ದೃಶ್ಯಗಳನ್ನು ನೀವು ಇಲ್ಲಿ ನೋಡಬಹುದು……

Leave A Reply