Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ನಮ್ಮ ಸ್ಯಾಂಡಲ್ ವುಡ್ ನ ನಟರು ಚಿಕ್ಕವಯಸ್ಸಿನಲ್ಲಿ ಹೇಗಿದ್ದರು ಗೊತ್ತಾ ?? ಎಲ್ಲರ ಫೋಟೋಸ್ ವಿಡಿಯೋ ಇಲ್ಲಿದೆ ನೋಡಿ !!

0

ನಮ್ಮ ಸ್ಯಾಂಡಲ್ ವುಡ್ ನ ಕೆಲ ಸ್ಟಾರ್ ನಟರು ಬಾಲ್ಯದಲ್ಲಿ ಇದ್ದಾಗ ಹೇಗಿದ್ದರೂ ಎನ್ನುವ ಫೋಟೋಗಳನ್ನು ನಾವು ಇಲ್ಲಿ ನೋಡೋಣ ಬನ್ನಿ..

ನಟ ಕೋಮಲ್ ಅವರು ಜುಲೈ 4 1973 ರಂದು ಮಾಯಾಸಂದ್ರದಲ್ಲಿ ಜನಿಸಿದರು. ಇವರು 1992 ರಲ್ಲಿ ಬಿಡುಗಡೆಯಾದ ಸೂಪರ್ ನನ್ಮಗ ಚಿತ್ರದಲ್ಲಿ ಮೊದಲನೆಯದಾಗಿ ನಟಿಸಿ ತೆರೆಯ ಮೇಲೆ ಕಾಣಿಸಿಕೊಂಡರು. ಇವರು ಸುಮಾರು 100 ಕ್ಕಿಂತ ಹೆಚ್ಚು ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ.

ನಟ ರಕ್ಷಿತ್ ಶೆಟ್ಟಿ ಅವರು ಜೂನ್ 6 1983 ರಂದು ಉಡುಪಿಯಲ್ಲಿ ಜನಿಸಿದ್ದಾರೆ. ಇವರು ತಮ್ಮ ಸಿನಿಮಾ ಕೆರಿಯರ್ ಅನ್ನು 2010 ರಲ್ಲಿ ಬಿಡುಗಡೆಯಾದ ನಮ್ ಏರಿಯಾಲ್ ಒಂದಿನಾ ಚಿತ್ರದ ಮೂಲಕ ಶುರು ಮಾಡಿಕೊಂಡರು. ಇವರು ಇಲ್ಲಿಯವರೆಗೂ 13 ಕನ್ನಡ ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ.

ನಟ ಸತೀಶ್ ನೀನಾಸಂ ಅವರು ಜೂನ್ 20 ರಂದು ಜನಿಸಿದ್ದಾರೆ. ಇವರು 2008 ರಲ್ಲಿ ಬಿಡುಗಡೆಯಾದ ಮಾದೇಶ ಚಿತ್ರದ ಮೂಲಕ ತೆರೆಯ ಮೇಲೆ ಮೊದಲನೆಯದಾಗಿ ತೆರೆಯ ಮೇಲೆ ಕಾಣಿಸಿಕೊಂಡರು. ಇವರು ಸುಮಾರು 20ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ.

 

ನಟ ಜಗ್ಗೇಶ್ ಅವರು ಮಾರ್ಚ್ 17 1963 ರಂದು ಮಾಯಸಂದ್ರದಲ್ಲಿ ಜನಿಸಿದರು. ಇವರು 1982 ರಲ್ಲಿ ಬಿಡುಗಡೆಯಾದ ಇಬ್ಬನಿ ಕರಗಿತು ಎನ್ನುವ ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟರು.

ನಟ ಶ್ರೀಮುರಳಿ ಅವರು ಡಿಸೆಂಬರ್ 17 1981 ರಂದು ಜನಿಸಿದ್ದಾರೆ. ಇವರು ಚಂದ್ರ ಚಕೋರಿ ಎನ್ನುವ ಚಿತ್ರದ ಮೂಲಕ ಮೊದಲನೆಯದಾಗಿ ತಮ್ಮ ಸಿನಿಮಾ ಕೆರಿಯರ್ ಅನ್ನು ಶುರು ಮಾಡಿಕೊಂಡರು.

ನಟ ವಿಜಯ ರಾಘವೇಂದ್ರ ಅವರು ಮೇ 26 1979 ರಂದು ಜನಿಸಿದ್ದಾರೆ. ಇವರು ಚಲಿಸುವ ಮೋಡಗಳು ಚಿತ್ರದ ಮೂಲಕ ಬಾಲನಟರಾಗಿ ತೆರೆಯ ಮೇಲೆ ಕಾಣಿಸಿ ತದನಂತರ ನಿನಗಾಗಿ ಚಿತ್ರದ ಮೂಲಕ ಹೀರೋ ಆಗಿ ಎಂಟ್ರಿ ನೀಡಿದರು.

ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಮೇ 30 1961 ರಂದು ಜನಿಸಿದ್ದಾರೆ. ಇವರು 1971 ರಲ್ಲಿ ಕುಲಗೌರವ ಚಿತ್ರದ ಮೂಲಕ ಬಾಲ ನಟರಾಗಿ ತೆರೆಮೇಲೆ ಕಾಣಿಸಿದರು. ತದನಂತರ ಖದೀಮ ಕಳ್ಳರು ಚಿತ್ರದ ಮೂಲಕ ಹೀರೋ ಆಗಿ ಪ್ರವೇಶ ಮಾಡಿದರು.

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಜುಲೈ 12 1962 ರಂದು ಜನಿಸಿದ್ದಾರೆ. ಇವರು 1974 ರಲ್ಲಿ ಬಿಡುಗಡೆಯಾದ ಶ್ರೀ ಶ್ರೀನಿವಾಸ ಕಲ್ಯಾಣ ಚಿತ್ರದ ಮೂಲಕ ಬಾಲನಟರಾಗಿ ತೆರೆಯ ಮೇಲೆ ಕಾಣಿಸಿದರು. ತದನಂತರ ಆನಂದ್ ಚಿತ್ರದ ಮೂಲಕ ಹೀರೋ ಆಗಿ ಪ್ರವೇಶ ಮಾಡಿದರು.

ಸಾಹಸ ಸಿಂಹ ವಿಷ್ಣುವರ್ಧನ್ ಅವರು ಸೆಪ್ಟೆಂಬರ್ 18 1950 ರಂದು ಮೈಸೂರಿನಲ್ಲಿ ಜನಿಸಿದ್ದರು. ಇವರು ಕೆಲ ಆರೋಗ್ಯ ಸಮಸ್ಯೆಗಳಿಂದ ಡಿಸೆಂಬರ್ 30 2009 ರಂದು ವಿಧಿವಶರಾದರು. ವಿಷ್ಣುವರ್ಧನ್ ಅವರು 1972 ರಲ್ಲಿ ವಂಶವೃಕ್ಷ ಚಿತ್ರದ ಮೂಲಕ ತಮ್ಮ ಸಿನಿಮಾ ಕೆರಿಯರ್ ಅನ್ನು ಶುರು ಮಾಡಿಕೊಂಡಿದ್ದರು.

ನಟ ಅನಂತ್ ನಾಗ್ ಅವರು ಸೆಪ್ಟೆಂಬರ್ 4 1948 ರಂದು ಶಿರಳಿಯಲ್ಲಿ ಜನಿಸಿದರು. ಇವರು 1973 ರಲ್ಲಿ ಸಂಕಲ್ಪ ಎನ್ನುವ ಚಿತ್ರದ ಮೂಲಕ ತಮ್ಮ ಸಿನಿಮಾ ಪಯಣವನ್ನು ಶುರು ಮಾಡಿದರು.

ನಟ ಶಂಕರ್ ನಾಗ್ ಅವರು ನವೆಂಬರ್ 9 1954 ರಂದು ಹೊನ್ನಾವರದಲ್ಲಿ ಜನಿಸಿದ್ದರು. ಇವರು ಸೆಪ್ಟೆಂಬರ್ 30 1990 ರಂದು ಇಹಲೋಕಕ್ಕೆ ತ್ಯಜಿಸಿದರು. ಇನ್ನೂ ಶಂಕರ್ ನಾಗ್ ಅವರು ಸರ್ವಸಾಕ್ಷಿ ಎನ್ನುವ ಚಿತ್ರದ ಮೂಲಕ ತಮ್ಮ ಸಿನಿಮಾ ಪಯಣವನ್ನು ಶುರು ಮಾಡಿದ್ದರು.

ನಟ ಉಪೇಂದ್ರ ಅವರು ಸೆಪ್ಟೆಂಬರ್ 18 1968 ರಂದು ಜನಿಸಿದ್ದಾರೆ. ಇವರು 1989 ರಂದು ಅನಂತನ ಅವಾಂತರ ಎನ್ನುವ ಚಿತ್ರದ ಮೂಲಕ ಮೊದಲನೆಯದಾಗಿ ಬೆಳ್ಳಿತೆರೆಯ ಮೇಲೆ ಕಾಣಿಸಿಕೊಂಡರು.

ನಟ ರಮೇಶ್ ಅರವಿಂದ್ ಅವರು ಸೆಪ್ಟೆಂಬರ್ 10 1964 ರಂದು ಜನಿಸಿದ್ದಾರೆ. ಇವರು 1986 ರಲ್ಲಿ ಸುಂದರ ಸ್ವಪ್ನಗಳು ಚಿತ್ರದ ಮೂಲಕ ತಮ್ಮ ಸಿನಿಮಾ ಪಯಣವನ್ನು ಶುರುಮಾಡಿದರು.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಮಾರ್ಚ್ 17 1975 ರಂದು ಜನಿಸಿದ್ದರು. ಆದರೆ ಹೃದಯಾಘಾತದಿಂದ ಇವರು ಅಕ್ಟೋಬರ್ 29 2021 ರಂದು ವಿಧಿವಶರಾದರು. ಪುನೀತ್ ಅವರು 1976 ರಲ್ಲಿ ಬಿಡುಗಡೆಯಾದ ಪ್ರೇಮದ ಕಾಣಿಕೆ ಚಿತ್ರದಲ್ಲಿ ಬಾಲನಟರಾಗಿ ಮೊದಲನೆಯದಾಗಿ ಅಭಿನಯಿಸಿದ್ದಾರೆ. ತದನಂತರ 2002 ರಲ್ಲಿ ಬಿಡುಗಡೆಯಾದ ಅಪ್ಪು ಚಿತ್ರದ ಮೂಲಕ ಇವರು ಹೀರೋ ಆಗಿ ಎಂಟ್ರಿ ನೀಡಿದರು.

ಕಿಚ್ಚ ಸುದೀಪ್ ಅವರು ಸೆಪ್ಟೆಂಬರ್ 2 1973 ರಂದು ಶಿವಮೊಗ್ಗದಲ್ಲಿ ಜನಿಸಿದ್ದಾರೆ. ಇವರು 1997 ರಲ್ಲಿ ಬಿಡುಗಡೆಯಾದ ತಾಯವ್ವ ಚಿತ್ರದ ಮೂಲಕ ಬೆಳ್ಳಿತೆರೆಯ ಮೇಲೆ ಕಾಣಿಸಿದರು.

ರಾಕಿಂಗ್ ಸ್ಟಾರ್ ಯಶ್ ಅವರು ಜನವರಿ 8 1986 ರಲ್ಲಿ ಜನಿಸಿದ್ದಾರೆ. ಇವರು ಜಂಭದ ಹುಡುಗಿ ಚಿತ್ರದಲ್ಲಿ ಚಿಕ್ಕ ಪಾತ್ರದಲ್ಲಿ ನಟಿಸಿ ತದನಂತರ ರಾಕಿ ಚಿತ್ರದ ಮೂಲಕ ಇವರು ನಟರಾಗಿ ತೆರೆಯ ಮೇಲೆ ಕಾಣಿಸಿಕೊಂಡರು. ಈಗ ಯಶ್ ಅವರು ಪ್ಯಾನ್ ಇಂಡಿಯಾ ನಟರಾಗಿ ತುಂಬಾ ಜನಪ್ರಿಯರಾಗಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಫೆಬ್ರವರಿ 16 1977 ರಲ್ಲಿ ಜನಿಸಿದ್ದಾರೆ. ಇವರು 1997 ರಲ್ಲಿ ಬಿಡುಗಡೆಯಾದ ಮಹಾಭಾರತ ಚಿತ್ರದ ಮೂಲಕ ಬೆಳ್ಳಿತೆರೆಯ ಮೇಲೆ ಕಾಣಿಸಿಕೊಂಡರು.

ನಟ ಧ್ರುವ ಸರ್ಜಾ ಅವರು ಅಕ್ಟೋಬರ್ 6 1988 ರಂದು ಜನಿಸಿದ್ದಾರೆ. ಇವರು 2012 ರಲ್ಲಿ ಬಿಡುಗಡೆಯಾದ ಅದ್ದೂರಿ ಚಿತ್ರದ ಮೂಲಕ ತಮ್ಮ ಸಿನಿಮಾ ಕೆರಿಯರ್ ಅನ್ನು ಶುರು ಮಾಡಿಕೊಂಡರು.

ನಟ ಚಿರು ಸರ್ಜಾ ಅಕ್ಟೋಬರ್ 17 1984 ರಂದು ಬೆಂಗಳೂರಿನಲ್ಲಿ ಜನಿಸಿದ್ದರು. ಆದರೆ ಇವರೂ ಕೂಡ ಹೃದಯಾಘಾತದಿಂದ ಜೂನ್ 7 2020 ರಂದು ವಿಧಿವಶರಾದರು. ಇನ್ನು ಚಿರು ಸರ್ಜಾ ಅವರು 2009 ರಲ್ಲಿ ಬಿಡುಗಡೆಯಾದ ವಾಯುಪುತ್ರ ಚಿತ್ರದ ಮೂಲಕ ತಮ್ಮ ಸಿನಿಮಾ ಪಯಣವನ್ನು ಶುರು ಮಾಡಿಕೊಂಡಿದ್ದರು…..

Leave A Reply