ನಮ್ಮ ಕನ್ನಡ ಚಿತ್ರರಂಗದಲ್ಲಿ ಆಗ ನಟಿಸಿದ್ದ ಕೆಲ ನಟ ನಟಿಯರು ಈಗ ಏನು ಮಾಡುತ್ತಿದ್ದಾರೆ ಎಂದು ತಿಳಿದುಕೊಳ್ಳೋಣ ಬನ್ನಿ..
ಮಾಸ್ಟರ್ ರೋಹಿತ್ ಅವರು ಪಲ್ಲವಿ ಅನುಪಲ್ಲವಿ ಹೀಗೆ ಇನ್ನೂ ಸಾಕಷ್ಟು ಚಿತ್ರಗಳಲ್ಲಿ ಬಾಲನಟರಾಗಿ ಅಭಿನಯಿಸಿದ್ದಾರೆ. ಆದರೆ ಪ್ರಸ್ತುತ ಇವರು ಹಲವು ಕಂಪನಿಗಳನ್ನು ಶುರುಮಾಡಿ ದೊಡ್ಡ ಉದ್ಯಮಿಯಾಗಿದ್ದಾರೆ.
ಬೇಬಿ ಶಾಲಿನಿ ಅವರು ಮಲಯಾಳಂ ಮತ್ತು ತಮಿಳು ಭಾಷೆಗಳಲ್ಲಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಅದಕ್ಕೂ ಮುನ್ನ ಇವರು ಹೆಚ್ಚಾಗಿ ಬಾಲನಟಿಯಾಗಿ ಕೂಡ ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ. ಇವರು ನಟ ಅಜಿತ್ ಕುಮಾರ್ ಅವರನ್ನು ಮದುವೆಯಾದ ಮೇಲೆ ಸಿನಿಮಾ ರಂಗದಿಂದ ದೂರ ಇದ್ದಾರೆ.
ಮಾಸ್ಟರ್ ಮಂಜುನಾಥ್ ಅವರು ಡಿಸೆಂಬರ್ 23 1976 ರಂದು ಜನಿಸಿದ್ದಾರೆ. ಇವರು ಅಜಿತ್ ಚಿತ್ರದ ಮೂಲಕ ಬಾಲ ನಟರಾಗಿ ತೆರೆಯ ಮೇಲೆ ಕಾಣಿಸಿಕೊಂಡರು. ಇದಾದ ಮೇಲೂ ಕೂಡ ಇವರು ಸಾಕಷ್ಟು ಚಿತ್ರಗಳಲ್ಲಿ ನಟರಾಗಿ ಅಭಿನಯ ಮಾಡಿದ್ದಾರೆ. ಇನ್ನೂ ಇವರು ಸ್ವತಃ ಸ್ವಂತ ಕಂಪನಿಯನ್ನು ನಡೆಸುತ್ತಿದ್ದಾರೆ.
ಬೇಬಿ ರೇಖಾ ಅವರು ತಮಿಳು ತೆಲುಗು ಮತ್ತು ಕನ್ನಡ ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ. ಇವರು ಕೂಡ ಬಾಲನಟಿಯಾಗಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಈಗ ಇವರು ಕೆಲ ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಬೇಬಿ ಶ್ಯಾಮಿಲಿ ಅವರು ಬಾಲನಟಿಯಾಗಿ ಚಿತ್ರಗಳಲ್ಲಿ ನಟಿಸಿ ಸಕತ್ ಫೇಮಸ್ ಆದರು. ಆದರೆ ಇವರು ನಾಯಕಿ ನಟಿಯಕ್ಕಿಂತ ಬಾಲನಟಿಯಾಗಿ ಸಾಕಷ್ಟು ಪ್ರಖ್ಯಾತಿಯನ್ನು ಗಳಿಸಿದ್ದರು. ಈಗ ಇವರಿಗೆ ಸಾಕಷ್ಟು ಅವಕಾಶಗಳು ಸಿಗದಿದ್ದ ಕಾರಣ ಸಿಂಗಪೂರ್ ನಲ್ಲಿ ಒಂದು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಮಾಸ್ಟರ್ ಆನಂದ್ ಅವರು ಕೂಡ ಸಾಕಷ್ಟು ಚಿತ್ರಗಳಲ್ಲಿ ಬಾಲನಟರಾಗಿ ಅಭಿನಯಿಸಿ ತದನಂತರ ಕೂಡ ಸಿನಿಮಾಗಳಲ್ಲಿ ಸಹಾಯಕ ನಟರಾಗಿ ಅಭಿನಯ ಮಾಡಿದ್ದಾರೆ. ಈಗ ಇವರು ಪ್ರಸ್ತುತ ನಿರೂಪಣೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಬೇಬಿ ನಿವೇದಿತಾ ಅವರು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಮಗಳು. ಇವರು ಒಂದು ಚಿತ್ರದಲ್ಲಿ ಬಾಲ ನಟಿಯಾಗಿ ಅಭಿನಯಿಸಿ ಪ್ರಸ್ತುತ ಸಿನಿಮಾಗಳ ನಿರ್ಮಾಣವನ್ನು ಮಾಡುತ್ತಿದ್ದಾರೆ.
ಮಾಸ್ಟರ್ ಸಂಜಯ್ ಅವರು ಬಾಲನಟರಾಗಿ ಮತ್ತು ನಾಯಕ ನಟರಾಗಿ ಕೂಡ ಈಗಲೂ ಸಿನಿಮಾ ರಂಗದಲ್ಲಿ ಸಕ್ರಿಯರಾಗಿದ್ದಾರೆ.
ಬೇಬಿ ಕೀರ್ತನಾ ಅವರು ಕೆಲ ಚಿತ್ರಗಳಲ್ಲಿ ಬಾಲನಟಿಯಾಗಿ ನಟಿಸಿದ್ದು ಈಗ ಯು.ಪಿ.ಎಸ್.ಸಿ ಪರೀಕ್ಷೆಯಲ್ಲಿ 137ನೇ ರ್ಯಾಂಕ್ ಅನ್ನು ಪಡೆದು ಈಗ ಐಎಎಸ್ ಆಫೀಸರ್ ಆಗಿ ಕೆಲಸ ಮಾಡುತ್ತಿದ್ದಾರೆ…..