Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ನಮ್ಮ ತಾರೆಯರ ಮನೆಯಲ್ಲಿ ಯುಗಾದಿ ಹಬ್ಬದ ಸಂಭ್ರಮ ಹೇಗಿತ್ತು ಗೊತ್ತಾ?? ಮೊದಲಬಾರಿಗೆ ಇಲ್ಲಿದೆ ನೋಡಿ!!

0

ಯುಗಾದಿ ಹಬ್ಬ ಎಂದರೆ ಪ್ರತಿಯೊಬ್ಬರಿಗೂ ಎಲ್ಲಿಲ್ಲದ ಸಂಭ್ರಮ. ಅದರಲ್ಲೂ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರಿಗೂ ಈ ಹಬ್ಬವೆಂದರೆ ಎಲ್ಲಿಲ್ಲದ ಪ್ರೀತಿ. ಎಣ್ಣೆ ಸ್ನಾನ ಮಾಡಿ ಹೊಸ ಬಟ್ಟೆ ಧರಿಸುವ ಖುಷಿ ಒಂದೆಡೆಯಾದರೆ ಎಲ್ಲರೂ ಸೇರಿ ಹಬ್ಬವನ್ನು ಆಚರಿಸುವ ಖುಷಿ ಇನ್ನೊಂದೆಡೆ.

ಇನ್ನು ಸಂಜೆಯಾಗುತ್ತಿದ್ದಂತೆ ಹೆಣ್ಣು ಮಕ್ಕಳು ಸೀರೆಯುಟ್ಟು ಅಲಂಕಾರ ಮಾಡಿಕೊಂಡು ಬೇವು ಬೆಲ್ಲ‌ ಹಂಚುವ ಸಂಭ್ರಮ ಮಾತಿನಲ್ಲಿ‌ ಹೇಳಲಾಗದು. ಸಾಮಾನ್ಯ ಜನರಿಗಷ್ಟೇ ಅಲ್ಲದೆ ನಮ್ಮ ಸಿನಿ ತಾರೆಯರಿಗೂ ಸಹ ಯುಗಾದಿ ಹಬ್ಬವೆಂದರೆ ಬಲು‌ ಪ್ರೀತಿ. ಈ ಬಾರಿಯೂ ಸಹ ನಮ್ಮ ಸಿನಿ ತಾರೆಯರು ಹಬ್ಬವನ್ನು ಆಚರಿಸಿರುವ ರೀತಿ ಅವರ ಅಭಿಮಾನಿಗಳಲ್ಲಿ ಸಂತಸವನ್ನುಂಟು ಮಾಡಿದೆ.

 

ಇಷ್ಟಕ್ಕೂ ಯಾವ ಯಾವ ಸಿನಿಮಾ ತಾರೆಯರು‌ ಯುಗಾದಿ ಹಬ್ಬವನ್ನು ಸಡಗರದಿಂದ ಆಚರಿಸಿದ್ದಾರೆ ಎಂದು ತಿಳಿಯೋಣ ಬನ್ನಿ. ಮೊದಲಿಗೆ ದಿಗಂತ್ ಮತ್ತು ಐಂದ್ರಿತಾ ರೇ. ಹೌದು ಸ್ಯಾಂಡಲ್ ವುಡ್ ನಲ್ಲಿ ಎಲ್ಲರ ನೆಚ್ಚಿನ ಜೋಡಿಯಾಗಿರುವ ದಿಗಂತ್ ಮತ್ತು ಐಂದ್ರಿತಾ ರೇ ಅವರು ಈ ಬಾರಿಯ ಯುಗಾದಿಯನ್ನು ಬಲು ಸಂಭ್ರಮದಿಂದ ಆಚರಿಸಿದ್ದಾರೆ. .

ಇಷ್ಟೇ ಅಲ್ಲದೆ ಪ್ರಿಯಾಂಕ ಉಪೇಂದ್ರ ಅವರ ಜೋಡಿಯೂ ಸಹ ಯುಗಾದಿ ಹಬ್ಬವನ್ನು ಆಚರಿಸಿರುವ ಫೋಟೋಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಧೃವ ಸರ್ಜಾ ಪ್ರೇರಣಾ ದಂಪತಿಗಳೂ ಸಹ ಇದಕ್ಕೆ‌ ಹೊರತಾಗಿಲ್ಲ.

ಇನ್ನು ಸ್ಯಾಂಡಲ್ ವುಡ್ ನ ರಾಕಿ ಭಾಯ್ ಯಶ್ ಅವರು ತಮ್ಮ ಮಡದಿ ರಾಧಿಕಾ ಪಂಡಿತ್ ಹಾಗೂ ಮಕ್ಕಳೊಡನೆ ಹಬ್ಬದೂಟ ಸವಿಯುತಿರುವ ಫೋಟೋಗಳು ಎಲ್ಲೆಡೆ ಹರಿದಾಡುತ್ತಿವೆ ಇದನ್ನು ನೋಡಿದ ಅಭಿಮಾನಿಗಳು ಖುಷಿ ಪಟ್ಟಿದ್ದಾರೆ.

ಲವ್ ಮಾಕ್ಟೈಲ್ ಎಂಬ ಅದ್ಭುತ ಚಿತ್ರವನ್ನು ನೀಡಿದ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನ‌ ನಾಗರಾಜ್ ಅವರೂ ಸಹ ಭರ್ಜರಿಯಾಗಿ‌ ಹಬ್ಬ ಆಚರಿಸಿದ್ದಾರೆ.

ಏಕ್ ಲವ್ ಯಾ ಚಿತ್ರದ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಪ್ರೇಮ್ ಹಾಗೂ ರಕ್ಷಿತಾ ಅವರು ಹಬ್ಬವನ್ನು ಬಲು ಸಡಗರದಿಂದ ಆಚರಿದ್ದಾರೆ. ಚುಟು ಚುಟು ಬೆಡಗಿ ಆಶಿಕಾ ರಂಗನಾಥ್‌ ಅವರು ತಮ್ಮ ಮನೆಯಲ್ಲಿ ಒಬ್ಬಟ್ಟು ತಯಾರಿಸುತ್ತಿರುವುದನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಇನ್ನು ನಟ ಪ್ರಜ್ಚಲ್ ದೇವರಾಜ್ ರಾಗಿಣಿ ದಂಪತಿಗಳೂ ಈ ಸಾಲಿಗೆ‌ ಸೇರಿಕೊಂಡಿದ್ದಾರೆ.

ಇಷ್ಟೆ ಅಲ್ಲದೆ ಜಗ್ಗೇಶ್ ಹಾಗೂ ಪರಿಮಳ ಜೋಡಿಯೂ ಸಹ ತಾವೇನೂ ಕಡೆಮೆಯಿಲ್ಲ‌ ಎಂಬಂತೆ ಹಬ್ಬ ಆಚರಿಸಿದ್ದಾರೆ. ತಾರೆಯರು ಹಬ್ಬವನ್ನು ಆಚರಿಸುವ ವಿಷಯವೇನೂ ದೊಡ್ಡದಲ್ಲ ಆದರೆ ತಾವು ಹಬ್ಬವನ್ನು ಆಚರಿಸಿ ಆ ಸಂತಸವನ್ನು ಅಭಿಮಾನಿಗಳೊಡನೆ ಹಂಚಿಕೊಳ್ಳುವ ಮನಸ್ಸು ದೊಡ್ಡದು.

ಅದೇನೆ ಇರಲಿ ಯುಗಾದಿ‌ ಸಾರುವ ಸಂದೇಶದಂತೆ ಬೇವು ಬೆಲ್ಲದ ಹಾಗೆ ಜೀವನದಲ್ಲಿ ಏರು ಪೇರು ಎಲ್ಲರಿಗೂ ಸರ್ವೇ ಸಾಮಾನ್ಯ. ಎರಡನ್ನು ಸಮ‌ನಾಗಿ ಸ್ವೀಕರಿಸಬೇಕು. ಆಗಲೇ ಜೀವನಕ್ಕೆ ಒಂದು ಅರ್ಥ ಸಿಗುತ್ತದೆ. ಈ ಯುಗಾದಿ ಎಲ್ಲರ ಬಾಳಲ್ಲಿಯೂ ಹರುಷ ತರಲಿ ಎಂದು ಎಲ್ಲರ ಪರವಾಗಿ ಆಶಿಸುತ್ತೇವೆ…..

Leave A Reply