ಯಾವುದೇ ಸಿನಿಮಾಗಳನ್ನು ನೋಡಿದರೂ ಕೂಡ ನಟ ಸಾಧುಕೋಕಿಲ ಅವರ ಪಾತ್ರವು ಇದ್ದೇ ಇರುತ್ತದೆ. ಅಷ್ಟರಮಟ್ಟಿಗೆ ಸಾಧುಕೋಕಿಲ ಅವರ ನಟನೆ ತುಂಬಾ ಚೆನ್ನಾಗಿರುತ್ತದೆ. ನಟ ಸಾಧು ಕೋಕಿಲ ಅವರು ಹಾಸ್ಯದ ಪಾತ್ರಗಳನ್ನು ಮಾಡಿ ತುಂಬಾನೇ ಜನಪ್ರಿಯರಾಗಿದ್ದಾರೆ ಎಂದು ಹೇಳಬಹುದು. ಇವರು ಮಾರ್ಚ್ 24 1966 ರಂದು ಬೆಂಗಳೂರಿನಲ್ಲಿ ಜನಿಸಿದರು. ಇವರ ತಂದೆಯ ಹೆಸರು ನಟೇಶ್ ಮತ್ತು ತಾಯಿಯ ಹೆಸರು ಮಂಗಳ.
ಇವರು ಕೇವಲ ನಟ ಮಾತ್ರ ಅಲ್ಲ ಸಂಗೀತ ನಿರ್ದೇಶಕ ನಿರ್ಮಾಪಕ ಮತ್ತು ನಿರ್ದೇಶಕ ಕೂಡ ಹೌದು. ಇವರು ತಮ್ಮ ಶಾಲೆಯ ಶಿಕ್ಷಣವನ್ನು ಬೆಂಗಳೂರಿನ ಸೇಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್ ನಲ್ಲಿ ಮಾಡಿ ಮುಗಿಸಿದ್ದಾರೆ. ಇವರ ಮೊದಲಿನ ಹೆಸರು ಸಹಾಯ ಶೀಲನ್ ಎಂದು. ತದನಂತರ ಸಾಧು ಕೋಕಿಲಾ ಎಂಬ ಹೆಸರನ್ನು ಉಪೇಂದ್ರ ಅವರು ಕೊಟ್ಟರು. ಇನ್ನು ಸಾಧುಕೋಕಿಲ ಅವರು 1992 ರಂದು ಸಾರಿ ಎನ್ನುವ ಚಿತ್ರದ ಮೂಲಕ ಮೊದಲನೆಯದಾಗಿ ಸಿನಿಮಾ ರಂಗಕ್ಕೆ ಕಾಲಿಟ್ಟರು.
ಇದಾದ ಮೇಲೆ ಶ್ ಚಿತ್ರದಲ್ಲಿ ನಟಿಸಿ ಇವರ ಹೆಸರು ಸಾಧು ಕೋಕಿಲ ಆಗಿ ಬದಲಾಯಿತು. ಇದಾದ ಮೇಲೆ ಸಾಕಷ್ಟು ಎಲ್ಲಾ ನಟರ ಸಿನಿಮಾಗಳಲ್ಲಿ ಹಾಸ್ಯದ ಪಾತ್ರಗಳನ್ನು ಮಾಡಿ ಹಾಸ್ಯದ ನಟ ಎಂದೇ ಜನಪ್ರಿಯರಾದರು. ಹಾಗೆಯೇ ಇವರು ಸಾಕಷ್ಟು ಹಾಡುಗಳನ್ನು ಹಾಡುವುದರ ಜೊತೆಗೆ ಹಾಡುಗಳನ್ನು ಕೂಡ ರಚಿಸಿದ್ದಾರೆ. ಹಾಗೆಯೇ ಸಾಕಷ್ಟು ಚಿತ್ರಗಳನ್ನು ನಿರ್ದೇಶನ ಕೂಡ ಮಾಡಿದ್ದಾರೆ.
ರಕ್ತಕಣ್ಣೀರು, ರಾಕ್ಷಸ, ಸುಂಟರಗಾಳಿ, ಅನಾಥರು, ಗಂಗೆ ಬಾರೆ ತುಂಗೆ ಬಾರೆ, ದೇವ್ರು, ಮಿಸ್ಟರ್ ತೀರ್ಥ, ಶೌರ್ಯ, ಪೋಲಿಸ್ ಸ್ಟೋರಿ 3, ಸೂಪರ್ ರಂಗ, ಭಲೇ ಜೋಡಿ ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. ಇನ್ನು ಸಾಧುಕೋಕಿಲ ಅವರು 1993 ರಲ್ಲಿ ಸಲೀನಾ ಎನ್ನುವವರನ್ನು ವಿವಾಹ ಮಾಡಿಕೊಂಡಿದ್ದಾರೆ. ಇವರಿಗೆ ಸೂರಗ್ ಮತ್ತು ಸೃಜನ್ ಎನ್ನುವ ಇಬ್ಬರು ಮಕ್ಕಳು ಕೂಡ ಇದ್ದಾರೆ.
ಸಾಧುಕೋಕಿಲಾ ಅವರು ತಮ್ಮ ಸಿನಿಮಾದ ಕೆರಿಯರ್ ಅನ್ನು ಮೊದಲು ಸಂಗೀತ ನಿರ್ದೇಶಕರಾಗಿ ಶುರು ಮಾಡಿಕೊಂಡರು. ಭಾರತದಲ್ಲಿ ಸಾಧುಕೋಕಿಲಾ ಅವರು ಮೊದಲನೆಯ ವ್ಯಕ್ತಿಯಾಗಿ ತುಂಬ ವೇಗವಾಗಿ ಕೀಬೋರ್ಡನ್ನು ಆಡಿಸುತ್ತಾರೆ. ನಟ ಸಾಧುಕೋಕಿಲ ಅವರ ಕೆಲ ಮದುವೆಯ ಅಪರೂಪದ ಕ್ಷಣಗಳನ್ನು ನೀವು ಇಲ್ಲಿ ನೋಡಬಹುದು…..