ಕನ್ನಡದ ಜನಪ್ರಿಯ ನಟ ಶಶಿಕುಮಾರ್ ಅವರು ಡಿಸೆಂಬರ್ 2 1965 ರಂದು ಬೆಂಗಳೂರಿನಲ್ಲಿ ಜನಿಸಿದರು. ಇವರು ಆಗಿನ ಕಾಲದ ಬಹು ಬೇಡಿಕೆಯ ನಟರಾಗಿದ್ದರು ಮತ್ತು ಇವರಿಗೆ ಸಾಕಷ್ಟು ಮಹಿಳೆಯ ಅಭಿಮಾನಿಗಳು ಸಹ ಇದ್ದರು. ಇನ್ನು ಶಶಿಕುಮಾರ್ ಅವರು 1988 ರಂದು ರಾಘವೇಂದ್ರ ರಾಜ್ ಕುಮಾರ್ ಅವರ ಅಭಿನಯದ ಚಿರಂಜೀವಿ ಸುಧಾಕರ ಎನ್ನುವ ಚಿತ್ರದಲ್ಲಿ ವಿಲನ್ ಪಾತ್ರದಲ್ಲಿ ನಟಿಸಿ ಮೊದಲನೆಯದಾಗಿ ಬೆಳ್ಳಿತೆರೆಯ ಮೇಲೆ ಕಾಲಿಟ್ಟರು.
ಇದಾದ ಮೇಲೆ 1989 ರಲ್ಲಿ ಬಂದ ಯುದ್ಧಕಾಂಡ ಚಿತ್ರದಲ್ಲಿ ನಟಿಸಿ ತುಂಬಾನೆ ಫೇಮಸ್ ಆದರು. ಈ ಚಿತ್ರದಲ್ಲಿ ರವಿಚಂದ್ರನ್ ಅವರು ನಾಯಕರಾಗಿ ನಟಿಸಿದ್ದಾರೆ. ತದನಂತರ ಇಂದ್ರಜಿತ್, ಸಿಬಿಐ ಶಂಕರ್, ರಾಣಿ ಮಹಾರಾಣಿ, ಯಜಮಾನ, ಪೊಲೀಸನ ಹೆಂಡತಿ, ಎಸ್.ಪಿ ಸಾಂಗ್ಲಿಯಾನ, ರೆಡಿಮೆಡ್ ಗಂಡ, ಮುದ್ದಿನ ಮಾವ, ಕಲ್ಯಾಣ ರೇಖೆ, ಸ್ವಾತಿ, ಭಾಷಾ, ಯಾರಿಗೆ ಸಾಲುತ್ತೆ ಸಂಬಳ, ಬಹಳ ಚೆನ್ನಾಗಿದೆ, ಕನಸುಗಾರ, ಮಾಸ್ತಿ, ಬಂಧು ಬಳಗ, ಪವರ್ ಕುರುಕ್ಷೇತ್ರ ಇನ್ನೂ ಸಾಕಷ್ಟು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಶಶಿಕುಮಾರ್ ಅವರಿಗೆ ತಮ್ಮ ಜೀವನದಲ್ಲಿ ಒಂದು ದೊಡ್ಡ ದುರಂತವು ಕೂಡ ನಡೆದಿದೆ. ಹೌದು ಬೆಂಗಳೂರಿನಲ್ಲಿ ರಸ್ತೆಯಲ್ಲಿ ಕಾರಿನಲ್ಲಿ ಸಂಚರಿಸುವಾಗ ಒಂದು ಆಕ್ಸಿಡೆಂಟ್ ನಲ್ಲಿ ದೊಡ್ಡ ಅಪಘಾತವಾಗಿತ್ತು. ಇದರಿಂದ ಇವರ ಮುಖವು ಕೂಡ ಬದಲಾಯಿತು.
ಇದರಿಂದ ಇವರಿಗೆ ಸಿನಿಮಾಗಳಲ್ಲಿ ನಟಿಸುವುದಕ್ಕೆ ಹೆಚ್ಚಾಗಿ ಅವಕಾಶಗಳು ಸಿಗಲಿಲ್ಲ. ಇವರು ಕೊನೆಯದಾಗಿ ನಟಿಸಿದ್ದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿನಯದ ಕುರುಕ್ಷೇತ್ರ ಚಿತ್ರದಲ್ಲಿ.
ತದನಂತರ ಎಲ್ಲ ಚೇತರಿಕೆ ಆದಮೇಲೆ ಮತ್ತೆ ಸಿನಿಮಾಗಳಿಗೆ ಬಂದು ಪೋಷಕ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಇನ್ನೂ ಶಶಿಕುಮಾರ್ ಅವರು ಕೇವಲ ನಟನೆಯಲ್ಲಿ ಮಾತ್ರವಲ್ಲ ರಾಜಕೀಯ ಕ್ಷೇತ್ರದಲ್ಲೂ ಕೂಡ ತೊಡಗಿಸಿಕೊಂಡಿದ್ದಾರೆ.
ಶಶಿಕುಮಾರ್ ಅವರು 1993 ರಲ್ಲಿ ಸರಸ್ವತಿ ಎನ್ನುವವರನ್ನು ವಿವಾಹ ಮಾಡಿಕೊಂಡಿದ್ದಾರೆ. ಇವರಿಗೆ ಐಶ್ವರ್ಯ ಶಶಿಕುಮಾರ್ ಮತ್ತು ಅಕ್ಷಿತ್ ಶಶಿಕುಮಾರ್ ಎನ್ನುವ ಇಬ್ಬರು ಮಕ್ಕಳಿದ್ದಾರೆ.
ಎದುರಲ್ಲಿ ಐಶ್ವರ್ಯ ಶಶಿಕುಮಾರ್ ಅವರಿಗೆ ಆಗಲೇ ಮದುವೆ ಕೂಡ ಆಗಿದೆ. ಶಶಿಕುಮಾರ್ ಮತ್ತು ಸರಸ್ವತಿ ಅವರ ಮದುವೆಯ ಅಪರೂಪದ ಕೆಲ ಸುಂದರ ದೃಶ್ಯಗಳನ್ನು ನೋಡಬಹುದು….