ಕನ್ನಡದ ಜನಪ್ರಿಯ ನಟ ಶಶಿಕುಮಾರ್ ಅವರು ಡಿಸೆಂಬರ್ 2 1965 ರಂದು ಬೆಂಗಳೂರಿನಲ್ಲಿ ಜನಿಸಿದರು. ಇವರು 1990 ಮತ್ತು 2000 ರ ಸಮಯದಲ್ಲಿ ಟಾಪ್ ಲೀಡಿಂಗ್ ನಟರಾಗಿ ಮಿಂಚಿದವರು. ಇವರಿಗೆ ಸಾಕಷ್ಟು ಮಹಿಳೆಯ ಅಭಿಮಾನಿಗಳು ಇದ್ದಾರೆ ಎಂದು ಹೇಳಬಹುದು. ಇನ್ನೂ ಶಶಿಕುಮಾರ್ ಅವರು ಕನ್ನಡದಲ್ಲಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿ ಒಳ್ಳೆಯ ಗುರುತನ್ನು ಸಾಧಿಸಿಕೊಂಡಿದ್ದಾರೆ.
ಮೊದಲು ಶಶಿಕುಮಾರ್ ಅವರು 1988 ರಲ್ಲಿ ಚಿರಂಜೀವಿ ಸುಧಾಕರ್ ಎನ್ನುವ ಚಿತ್ರದ ಮೂಲಕ ವಿಲನ್ ಪಾತ್ರದಲ್ಲಿ ನಟಿಸಿ ಸಿನಿಮಾ ರಂಗಕ್ಕೆ ಎಂಟ್ರಿ ನೀಡಿದರು. ತದನಂತರ ಯುದ್ಧಕಾಂಡ, ಇಂದ್ರ, ಸಿ ಬಿ ಐ ಶಂಕರ್, ಚಾಲೆಂಜ್, ಗೋಪಾಲಕೃಷ್ಣ, ಕೊಲ್ಲೂರು ಕಳ್ಳ, ಕಿತ್ತೂರಿನ ಹುಲಿ, ಆತ್ಮಬಂಧನ, ಮಲ್ಲಿಗೆ ಹೂವೆ, ಬಾ ನನ್ನ ಪ್ರೀತಿಸು, ಅಣ್ಣ, ಸಮ್ಮಿಲನ, ದೋಣಿಸಾಗಲಿ, ಸ್ನೇಹಲೋಕ, ಮಾಸ್ತಿ, ಬಂಧುಬಳಗ, ಲಿಫ್ಟ್ ಕೊಡ್ಲಾ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ, ಗಲಾಟೆ, ಪವರ್, ಕುರುಕ್ಷೇತ್ರ ಇನ್ನೂ ಸಾಕಷ್ಟು ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ.
ಶಶಿಕುಮಾರ್ ಅವರ ಜೀವನದಲ್ಲಿ ಒಂದು ದೊಡ್ಡ ದುರಂತ ನಡೆದಿತ್ತು. ಹೌದು ಶಶಿಕುಮಾರ್ ಅವರು ರಸ್ತೆಯಲ್ಲಿ ಚಲಿಸುವಾಗ ರಸ್ತೆಯ ಅಪಘಾತದಲ್ಲಿ ಪೆಟ್ಟು ಬಿದ್ದಿತ್ತು. ಇವರ ಮುಖ ಕೂಡ ಗುರುತೇ ಸಿಗದಷ್ಟು ತುಂಬಾನೇ ಬದಲಾಗಿತ್ತು. ಇದರಿಂದ ಇವರಿಗೆ ಸಿನಿಮಾಗಳಲ್ಲಿ ನಟಿಸುವುದಕ್ಕೆ ಅಷ್ಟಾಗಿ ಅವಕಾಶಗಳು ಬರಲಿಲ್ಲ.
ತದನಂತರ ಸ್ವಲ್ಪ ವರ್ಷಗಳ ಬಳಿಕ ಮತ್ತೆ ರೆಡಿಯಾಗಿ ಸಿನಿಮಾಗಳಲ್ಲಿ ನಟಿಸುವುದಕ್ಕೆ ಶುರು ಮಾಡಿದರು. ಇವರು ಕೊನೆಯದಾಗಿ ನಟಿಸಿದ ಸಿನಿಮಾ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿನಯದ ಕುರುಕ್ಷೇತ್ರ. ಇದಾದ ಮೇಲೆ ಇವರು ಯಾವ ಸಿನಿಮಾದಲ್ಲೂ ನಟಿಸಿಲ್ಲ. ಇದರ ಜೊತೆಗೆ ಶಶಿಕುಮಾರ್ ಅವರು ರಾಜಕೀಯ ಕ್ಷೇತ್ರದಲ್ಲಿ ಕೂಡ ತೊಡಗಿಸಿಕೊಂಡಿದ್ದರು.
ಇನ್ನು ಶಶಿಕುಮಾರ್ ಅವರು ಜೂನ್ 11 1993 ರಂದು ಸರಸ್ವತಿ ಅವರನ್ನು ವಿವಾಹ ಮಾಡಿಕೊಂಡಿದ್ದಾರೆ. ಇವರಿಗೆ ಐಶ್ವರ್ಯ ಶಶಿಕುಮಾರ್ ಮತ್ತು ಅಕ್ಷತ್ ಶಶಿಕುಮಾರ್ ಎನ್ನುವ ಇಬ್ಬರು ಮಕ್ಕಳಿದ್ದಾರೆ. ಇದರಲ್ಲಿ ಐಶ್ವರ್ಯ ಶಶಿಕುಮಾರ್ ಅವರಿಗೆ ಮದುವೆ ಕೂಡ ಆಗಿದೆ. ಇಲ್ಲಿ ನೀವು ನಟ ಶಶಿಕುಮಾರ್ ಅವರ ಮದುವೆಯ ಕೆಲ ಅಪರೂಪದ ಕ್ಷಣಗಳನ್ನು ನೋಡಬಹುದು…..