ಜನಪ್ರಿಯ ಖ್ಯಾತ ಖಳ ನಟ ಟೈಗರ್ ಪ್ರಭಾಕರ್ ಅವರ ಮಗ ವಿನೋದ್ ಪ್ರಭಾಕರ್ ಅವರು ಥೇಟ್ ನೋಡಲು ತಮ್ಮ ತಂದೆಯ ರೀತಿ ಇದ್ದಾರೆ. ಇವರು ಡಿಸೆಂಬರ್ 3 1980 ರಂದು ಜನಿಸಿದ್ದಾರೆ. ಇನ್ನೂ ವಿನೋದ್ ಪ್ರಭಾಕರ್ ಅವರ ತಾಯಿಯ ಹೆಸರು ಮೇರಿ ಆಲ್ಫೋನ್ಸಾ ಎಂದು.
ಹಾಗೆಯೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಟೈಗರ್ ಪ್ರಭಾಕರ್ ಅವರು ದಕ್ಷಿಣ ಭಾರತದ ಖ್ಯಾತ ಖಳ ನಾಯಕರಾಗಿ ಗುರುತಿಸಿಕೊಂಡಿದ್ದು ಇವರು ವಿವಿಧ ಭಾಷೆಗಳಲ್ಲಿ ವಿಲನ್ ಪಾತ್ರಗಳಲ್ಲಿ ನಟಿಸಿ ತುಂಬಾ ಜನಪ್ರಿಯರಾಗಿದ್ದರು. ಇನ್ನೂ ವಿನೋದ್ ಪ್ರಭಾಕರ್ ಅವರು 2002 ರಲ್ಲಿ ಸತ್ಯ ಅವರ ನಿರ್ದೇಶನದ ದಿಲ್ ರಂಗೀಲಾ ಚಿತ್ರದಲ್ಲಿ ಮೊದಲನೆಯದಾಗಿ ನಟಿಸಿ ಸಿನಿಮಾ ರಂಗಕ್ಕೆ ಕಾಲಿಟ್ಟರು.
ಇದಾದ ಮೇಲೆ ಸೃಷ್ಟಿ, ಮಹಾನಗರ, ಸರ್ಕಲ್ ರೌಡಿ, ವಿಐಪಿ 5, ನವಗ್ರಹ, ಗಜೇಂದ್ರ, ಬೆಳ್ಳಿ, ಟೈಸನ್, ಗಡಿಪಾರ್, ಹೋರಿ, ವೈರಿ, ಮರಿ ಟೈಗರ್, ಯಜಮಾನ, ರಗಡ್, ಶ್ಯಾಡೋ, ರಾಬರ್ಟ್, ವರದ ಇನ್ನೂ ಕೆಲ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇನ್ನೂ ಫೆಬ್ರವರಿ 18 2022 ರಂದು ವಿನೋದ್ ಪ್ರಭಾಕರ್ ಅವರ ವರದ ಚಿತ್ರವು ಬಿಡುಗಡೆಯಾಗಿದೆ. ಈ ಚಿತ್ರವನ್ನು ಉದಯ್ ಪ್ರಕಾಶ್ ಅವರು ನಿರ್ದೇಶಿಸಿದ್ದಾರೆ.
ಹಾಗೆಯೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿನಯದ ನವಗ್ರಹ ಚಿತ್ರದಲ್ಲಿ ನಟಿಸಿ ವಿನೋದ್ ಪ್ರಭಾಕರ್ ಅವರು ಸಕತ್ ಫೇಮಸ್ ಆದರು. ವಿನೋದ್ ಪ್ರಭಾಕರ್ ಅವರು ದರ್ಶನ್ ಅವರ ಜೊತೆಗೆ ಮೊತ್ತ 3 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇನ್ನೂ ವಿನೋದ್ ಪ್ರಭಾಕರ್ ಅವರು ನಿಶಾ ಎನ್ನುವವರನ್ನು ಜುಲೈ 2 2014 ರಲ್ಲಿ ವಿವಾಹ ಮಾಡಿಕೊಂಡಿದ್ದಾರೆ. ಇವರಿಬ್ಬರು 15 ವರ್ಷಗಳ ಕಾಲ ಪ್ರೀತಿಸಿ ಮನೆಯವರನ್ನು ಒಪ್ಪಿಸಿ ವಿವಾಹವಾಗಿದ್ದಾರೆ.
ಹಾಗೆಯೇ ನಿಶಾ ಅವರು ಹೈದರಾಬಾದ್ ನ ತೆಲುಗು ಕುಟುಂಬಕ್ಕೆ ಸೇರಿದ್ದು ರಿಟೈರ್ಡ್ ಆರ್ಮಿ ಅಧಿಕಾರಿಯ ಮಗಳು. ನಿಶಾ ಅವರು ಯಾವುದೋ ಒಂದು ಕೆಲಸಕ್ಕೆ ಬೆಂಗಳೂರಿಗೆ ಬಂದಿದ್ದಾಗ ಅಲ್ಲಿ ವಿನೋದ್ ಪ್ರಭಾಕರ್ ಅವರನ್ನು ಕಂಡರು. ನಿಶಾ ಅವರೇ ಮೊದಲು ವಿನೋದ್ ಅವರಿಗೆ ಪ್ರಪೋಸ್ ಮಾಡಿದ್ದರಂತೆ. ಇನ್ನೂ ಇಲ್ಲಿ ನೀವು ನಟ ವಿನೋದ್ ಪ್ರಭಾಕರ್ ಅವರ ಮನೆ ಹೇಗಿದೆ ಎಂದು ನೋಡಬಹುದು…..