ಕನ್ನಡದ ಜನಪ್ರಿಯ ನಟರಲ್ಲಿ ನಟ ವಿಜಯ ರಾಘವೇಂದ್ರ ಅವರು ಒಂದು ಉನ್ನತ ಸ್ಥಾನವನ್ನು ಗಳಿಸಿದ್ದಾರೆ. ಇವರು ಮೇ 26 1979 ರಂದು ಬೆಂಗಳೂರಿನಲ್ಲಿ ಜನಿಸಿದರು. ಇವರ ತಂದೆಯ ಹೆಸರು ಎಸ್ ಎ ಚಿನ್ನೇಗೌಡ ಮತ್ತು ತಾಯಿಯ ಹೆಸರು ಜಯಮ್ಮ. ವಿಜಯ ರಾಘವೇಂದ್ರ ಅವರ ತಂದೆ ಎಸ್ ಎ ಚಿನ್ನೇಗೌಡ ಅವರು ಪಾರ್ವತಮ್ಮ ರಾಜ್ ಕುಮಾರ್ ಅವರಿಗೆ ಸ್ವಂತ ಸಹೋದರ ಆಗಬೇಕು.
ಹಾಗಾಗಿ ಇವರು ಡಾ ರಾಜ್ ಕುಮಾರ್ ಅವರಿಗೆ ಸಂಬಂಧಿಕರು ಆಗಬೇಕು. ಇನ್ನು ವಿಜಯ ರಾಘವೇಂದ್ರ ಅವರಿಗೆ ನಟ ಶ್ರೀಮುರಳಿ ಅವರು ಸ್ವಂತ ಸಹೋದರ ಆಗಬೇಕು ಎನ್ನುವ ವಿಷಯ ಎಲ್ಲರಿಗೂ ಗೊತ್ತೇ ಇದೆ. ನಟ ವಿಜಯ ರಾಘವೇಂದ್ರ ಅವರು ಸ್ಪಂದನಾ ಎನ್ನುವವರನ್ನು ಆಗಸ್ಟ್ 26 2007 ರಂದು ವಿವಾಹ ಮಾಡಿಕೊಂಡಿದ್ದಾರೆ.
ಇನ್ನು ವಿಜಯ್ ರಾಘವೇಂದ್ರ ಅವರು ಚಿನ್ನಾರಿಮುತ್ತ ಎನ್ನುವ ಹೆಸರಿನಲ್ಲಿಯೇ ಜನಪ್ರಿಯರಾಗಿದ್ದಾರೆ. ಇನ್ನು ಸಿನಿಮಾ ವಿಷಯಕ್ಕೆ ಬಂದರೆ ವಿಜಯ್ ರಾಘವೇಂದ್ರ ಅವರು 1982 ರಲ್ಲಿ ಚಲಿಸುವ ಮೋಡಗಳು ಎನ್ನುವ ಚಿತ್ರದ ಮೂಲಕ ಬಾಲ ನಟರಾಗಿ ತೆರೆಯ ಮೇಲೆ ಕಾಣಿಸಿದರು.
ಇದಾದ ಮೇಲೆ ಅರಳಿದ ಹೂವುಗಳು, ಜಗ ಮೆಚ್ಚಿದ ಹುಡುಗ, ಕೊಲ್ಲೂರು ಶ್ರೀಮೂಕಾಂಬಿಕಾ, ಚಿನ್ನಾರಿ ಮುತ್ತ, ಕೊಟ್ರೇಶಿ ಕನಸು ಇನ್ನೂ ಕೆಲ ಚಿತ್ರಗಳಲ್ಲಿ ಬಾಲನಟರಾಗಿ ಅಭಿನಯಿಸಿ 2002 ರಲ್ಲಿ ನಿನಗಾಗಿ ಚಿತ್ರದ ಮೂಲಕ ಹೀರೋ ಆಗಿ ತೆರೆಯ ಮೇಲೆ ಕಾಣಿಸಿಕೊಂಡರು. ತದನಂತರ ವಿಜಯ್ ರಾಘವೇಂದ್ರ ಅವರು ಸಾಕಷ್ಟು ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ.
ಹಾಗೆ ಇವರು ಕೆಲ ಸಿನಿಮಾಗಳಿಗೆ ಹಾಡುಗಳನ್ನು ಹಾಡಿ ಗಾಯನದಲ್ಲಿ ಕೂಡ ಸೈ ಎನಿಸಿಕೊಂಡಿದ್ದಾರೆ. ಇದರ ಜೊತೆಗೆ ಇವರು ಬಿಗ್ ಬಾಸ್ ಕನ್ನಡ ಸೀಸನ್ ಒಂದರಲ್ಲಿ ಕೂಡ ಭಾಗವಹಿಸಿ ಅದರಲ್ಲಿ ವಿನ್ನರ್ ಕೂಡ ಆಗಿದ್ದರು. ಹಾಗೆಯೇ ಸಾಕಷ್ಟು ರಿಯಾಲಿಟಿ ಶೋಗಳಿಗೆ ಜಡ್ಜ್ ಕೂಡ ಆಗಿದ್ದರು. ಇನ್ನು ವಿಜಯ ರಾಘವೇಂದ್ರ ಅವರಿಗೆ ಒಬ್ಬ ಮಗ ಮತ್ತು ಮಗಳು ಕೂಡ ಇದ್ದಾರೆ. ಇಲ್ಲಿ ನೀವು ವಿಜಯ ರಾಘವೇಂದ್ರ ಅವರ ಮುದ್ದಾದ ಮಗಳಿನ ಕೆಲ ಸುಂದರ ಫೋಟೋಗಳನ್ನು ನೋಡಬಹುದು…..