ಡಾ ರಾಜ್ ಕುಮಾರ್ ಮತ್ತು ಪಾರ್ವತಮ್ಮ ರಾಜ್ ಕುಮಾರ್ ಅವರಿಗೆ ರಾಘವೇಂದ್ರ ರಾಜ್ ಕುಮಾರ್ ಅವರು ಎರಡನೆಯ ಮಗ ಆಗಬೇಕು. ಇನ್ನು ಇವರಿಗೆ ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ಪೂರ್ಣಿಮಾ, ಲಕ್ಷ್ಮಿ ಎನ್ನುವ ಸಹೋದರರು ಸಹೋದರಿಯರು ಇದ್ದಾರೆ. ಇನ್ನು ಇದರಲ್ಲಿ ಪುನೀತ್ ರಾಜ್ ಕುಮಾರ್ ಅವರು ಹೃದಯಾಘಾತದಿಂದ ಅಕ್ಟೋಬರ್ 29 2021 ರಂದು ಅಕಾಲಿಕ ಮರಣವನ್ನು ಹೊಂದಿದ್ದಾರೆ.
ನಟ ರಾಘವೇಂದ್ರ ರಾಜ್ ಕುಮಾರ್ ಅವರು ಆಗಸ್ಟ್ 15 1965 ರಂದು ಜನಿಸಿದ್ದಾರೆ. ಇನ್ನೂ ಇವರು ಬಾಲನಟರಾಗಿ 1974 ರಲ್ಲಿ ಬಿಡುಗಡೆಯಾದ ಶ್ರೀ ಶ್ರೀನಿವಾಸ ಕಲ್ಯಾಣ ಚಿತ್ರದ ಮೂಲಕ ತೆರೆಮೇಲೆ ಕಾಣಿಸಿದರು. ಇದಾದ ಮೇಲೆ ದಾರಿ ತಪ್ಪಿದ ಮಗ ಚಿತ್ರದಲ್ಲಿ ಕೂಡ ಬಾಲ ನಟರಾಗಿ ಅಭಿನಯಿಸಿದ್ದಾರೆ. ಇದಾದ ಮೇಲೆ 1988 ರಲ್ಲಿ ಬಿಡುಗಡೆಯಾದ ಚಿರಂಜೀವಿ ಸುಧಾಕರ್ ಎನ್ನುವ ಚಿತ್ರದ ಮೂಲಕ ಇವರು ಹೀರೋ ಆಗಿ ಬೆಳ್ಳಿತೆರೆಯ ಮೇಲೆ ಕಾಣಿಸಿದರು.
ತದನಂತರ ಇವರು ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಇದರ ಜೊತೆಗೆ ಇವರು ಸಾಕಷ್ಟು ಚಿತ್ರಗಳ ಹಾಡುಗಳನ್ನು ಸಹ ಹಾಡಿದ್ದಾರೆ. ಹಾಗೆಯೇ ಶ್ರುತಿ ಸೇರಿದಾಗ, ಜಾಕಿ, ಅಣ್ಣಾಬಾಂಡ್, ಯಾರೇ ಕೂಗಾಡಲಿ, ರನ್ ಆ್ಯಂಟನಿ ಚಿತ್ರಗಳನ್ನು ನಿರ್ಮಾಣ ಸಹ ಮಾಡಿದ್ದಾರೆ. ಇನ್ನೂ ನಟ ರಾಘವೇಂದ್ರ ರಾಜ್ ಕುಮಾರ್ ಅವರು ಮಂಗಳ ರಾಘವೇಂದ್ರ ಅವರನ್ನು ವಿವಾಹ ಮಾಡಿಕೊಂಡಿದ್ದಾರೆ.
ಇನ್ನೂ ಇವರಿಗೆ ಯುವ ರಾಜ್ ಕುಮಾರ್ ಮತ್ತು ವಿನಯ್ ರಾಜ್ ಕುಮಾರ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. ಪ್ರಸ್ತುತ ಇವರಿಬ್ಬರು ಕನ್ನಡ ಚಿತ್ರರಂಗದಲ್ಲಿ ನಟಿಸುತ್ತಾ ಸಕ್ರಿಯರಾಗಿದ್ದಾರೆ. ಇನ್ನೂ ಯುವ ರಾಜ್ ಕುಮಾರ್ ಅವರು ಯುವ ರಣಧೀರ ಕಂಠೀರವ ಎನ್ನುವ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ಹಾಗೆಯೇ ವಿನಯ್ ರಾಜ್ ಕುಮಾರ್ ಅವರು ಅನುರಾಗದ ಅಲೆಗಳು, ಆಕಸ್ಮಿಕ, ಒಡಹುಟ್ಟಿದವರು, ಹೃದಯ ಹೃದಯ, ಸಿದ್ಧಾರ್ಥ, ರನ್ ಆ್ಯಂಟನಿ, ಅನಂತು ವರ್ಸಸ್ ನುಸ್ರತ್ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇನ್ನು ಇಲ್ಲಿ ನೀವು ನಟ ರಾಘವೇಂದ್ರ ರಾಜ್ ಕುಮಾರ್ ಮತ್ತು ಮಂಗಳಾ ಅವರ ಮದುವೆಯ ಕೆಲ ಅಪರೂಪದ ಕ್ಷಣಗಳನ್ನು ನೋಡಬಹುದು…..