ಕನ್ನಡದ ಜನಪ್ರಿಯ ನಟ ಮತ್ತು ಪಂಚಭಾಷಾ ನಟ ಆಗಿರುವ ರಮೇಶ್ ಅರವಿಂದ್ ಅವರು ಸೆಪ್ಟೆಂಬರ್ 10 1964 ರಂದು ಕುಂಭಕೋಣಂನಲ್ಲಿ ಜನಿಸಿದ್ದಾರೆ. ಇವರ ತಂದೆಯ ಹೆಸರು ಗೋವಿಂದಚಾರಿ ಅರವಿಂದ್ ಮತ್ತು ತಾಯಿಯ ಹೆಸರು ಸರೋಜಾ ಅರವಿಂದ್. ಇವರು ಕನ್ನಡ ತಮಿಳು ತೆಲುಗು ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ನಟಿಸಿ ಪಂಚಭಾಷಾ ನಟರಾಗಿ ಗುರುತಿಸಿಕೊಂಡಿದ್ದಾರೆ.
ರಮೇಶ್ ಅರವಿಂದ್ ಅವರು 1986 ರಲ್ಲಿ ಸುಂದರ ಸ್ವಪ್ನಗಳು ಎನ್ನುವ ಕನ್ನಡ ಚಿತ್ರದ ಮೂಲಕ ಮೊದಲನೆಯದಾಗಿ ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದರು. ಇದಾದ ಮೇಲೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರು 80, 90ಮತ್ತು 2000ರ ಸಮಯದಲ್ಲಿ ಟಾಪ್ ಲೀಡಿಂಗ್ ನಟರಾಗಿ ಗುರುತಿಸಿಕೊಂಡಿದ್ದಾರೆ.
ಇವರು ಕೇವಲ ನಟ ಮಾತ್ರರಲ್ಲ ರಾಮ ಶಾಮ ಭಾಮ, ಸತ್ಯವಾನ್ ಸಾವಿತ್ರಿ, ಆಕ್ಸಿಡೆಂಟ್, ವೆಂಕಟ ಇನ್ ಸಂಕಟ, ನಮ್ಮಣ್ಣ ಡಾನ್, ಉತ್ತಮ ವಿಲನ್, ಸುಂದರಾಂಗ ಜಾಣ, 100, ಬಟರ್ ಫ್ಲೈ ಎನ್ನುವ ಕನ್ನಡ ಚಿತ್ರಗಳನ್ನು ನಿರ್ದೇಶನ ಸಹ ಮಾಡಿದ್ದಾರೆ.
ಇನ್ನು ರಮೇಶ್ ಅರವಿಂದ್ ಅವರ ನೂರನೆಯ ಕನ್ನಡ ಚಿತ್ರವು ಪುಷ್ಪಕ ವಿಮಾನ. ರಮೇಶ್ ಅರವಿಂದ್ ಅವರು ಒಟ್ಟು ಕನ್ನಡದಲ್ಲಿ 100 ಕ್ಕಿಂತ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ, 30 ಕ್ಕಿಂತ ಹೆಚ್ಚು ಚಿತ್ರಗಳನ್ನು ತಮಿಳಿನಲ್ಲಿ, 10 ಕ್ಕಿಂತ ಹೆಚ್ಚು ಚಿತ್ರಗಳನ್ನು ತೆಲುಗಿನಲ್ಲಿ ಮತ್ತು 2 ಹಿಂದಿ ಚಿತ್ರಗಳಲ್ಲಿ ನಟಿಸಿದ್ದಾರೆ. ರಮೇಶ್ ಅರವಿಂದ್ ಅವರು ತಮ್ಮ 34 ವರ್ಷದ ಸಿನಿಮಾ ಜೀವನ ಅವಧಿಯಲ್ಲಿ ಎಲ್ಲಾ ಭಾಷೆಗಳಲ್ಲಿ ಸೇರಿ ಸುಮಾರು 140 ಕ್ಕಿಂತ ಹೆಚ್ಚು ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ.
ರಮೇಶ್ ಅರವಿಂದ್ ಅವರು ಪ್ರೀತಿಯಿಂದ ರಮೇಶ್, ರಾಜ ರಾಣಿ ರಮೇಶ್, ವೀಕೆಂಡ್ ವಿತ್ ರಮೇಶ್, ಕನ್ನಡದ ಕೋಟ್ಯಾಧಿಪತಿ ಎನ್ನುವ ದೊಡ್ಡ ಕಾರ್ಯಕ್ರಮಗಳನ್ನು ಕೂಡ ನಿರೂಪಣೆ ಮಾಡಿದ್ದಾರೆ. ಹಾಗೆಯೇ ನಂದಿನಿ ಎನ್ನುವ ಕನ್ನಡ ಸೀರಿಯಲ್ ಅನ್ನು ನಿರ್ಮಾಣ ಸಹ ಮಾಡಿದ್ದಾರೆ. ಪ್ರಸ್ತುತ ಇವರು ಸುಂದರಿ ಎಂಬ ಧಾರಾವಾಹಿಯನ್ನು ನಿರ್ಮಾಣ ಮಾಡುತ್ತಿದ್ದಾರೆ.
ಇನ್ನು ರಮೇಶ್ ಅರವಿಂದ್ ಅವರು 1991 ರಂದು ಅರ್ಚನಾ ಅರವಿಂದ್ ಅವರನ್ನು ವಿವಾಹ ಮಾಡಿಕೊಂಡಿದ್ದಾರೆ. ಇವರಿಗೆ ನಿಹಾರಿಕಾ ಅರವಿಂದ್ ಮತ್ತು ಅರ್ಜುನ್ ಅರವಿಂದ್ ಎನ್ನುವ ಇಬ್ಬರು ಮಕ್ಕಳಿದ್ದಾರೆ. ಇದರಲ್ಲಿ ನಿಹಾರಿಕ ಅರವಿಂದ್ ಅವರಿಗೆ ಈಗಾಗಲೇ ಮದುವೆ ಕೂಡ ಆಗಿದೆ. ನಟ ರಮೇಶ್ ಅರವಿಂದ್ ಅವರ ಮದುವೆಯ ಕೆಲ ಸುಂದರ ಕ್ಷಣಗಳನ್ನು ಇಲ್ಲಿ ನೀವು ನೋಡಬಹುದು…..