ನಮ್ಮ ಭಾರತ ದೇಶದಲ್ಲಿ ಅದರಲ್ಲೂ ಹಿಂದೂ ಧರ್ಮದವರಿಗೆ ಯುಗಾದಿ ಹಬ್ಬವು ವರ್ಷದ ಮೊದಲನೇ ಹಬ್ಬವಾಗಿರುತ್ತದೆ. ಅಂದರೆ ಯುಗಾದಿ ಹಬ್ಬವನ್ನು ಹೊಸ ವರ್ಷ ಎಂದು ಕರೆಯುತ್ತೇವೆ. ಇನ್ನು ಎಲ್ಲರ ಮನೆಯಲ್ಲೂ ಯುಗಾದಿ ಹಬ್ಬದ ದಿನದಂದು ಹೊಸ ಬಟ್ಟೆ ಧರಿಸಿಕೊಂಡು ಸಿಹಿ ತಿನಿಸುಗಳನ್ನು ಮಾಡಿ ದೇವರಿಗೆ ನೈವೇದ್ಯ ಇಟ್ಟು ಪೂಜೆ ಮಾಡಿ ಹಬ್ಬವನ್ನು ತುಂಬ ಚೆನ್ನಾಗಿ ಆಚರಣೆ ಮಾಡುತ್ತಾರೆ.
ಇದರಂತೆಯೇ ಯಶ್ ಅವರ ಮನೆಯಲ್ಲೂ ಕೂಡ ಯುಗಾದಿ ಹಬ್ಬದ ಸಂಭ್ರಮ ನಡೆದಿದೆ. ಹೌದು ರಾಧಿಕಾ ಪಂಡಿತ್ ಮತ್ತು ಯಶ್ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಯುಗಾದಿ ಹಬ್ಬದ ಸಂಭ್ರಮದ ಫೋಟೋಗಳನ್ನು ಹಾಕಿ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಯಶ್ ರಾಧಿಕಾ ಮತ್ತು ತಮ್ಮ ಇಬ್ಬರು ಮಕ್ಕಳ ಜೊತೆಗೆ ಊಟವನ್ನು ಮಾಡುತ್ತಾ ಫೋಟೋವನ್ನು ಅಭಿಮಾನಿಗಳಿಗೋಸ್ಕರ ಹಾಕಿ ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು ಎಂದು ತಿಳಿಸಿದ್ದಾರೆ.
ಈ ಫೋಟೋವನ್ನು ನೋಡಿ ಅಭಿಮಾನಿಗಳು ಬಾರಿ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಯಶ್ ಅವರ ಕೆಜಿಎಫ್ 1 ಚಿತ್ರವು ಡಿಸೆಂಬರ್ 21 2018 ರಂದು ಬಿಡುಗಡೆಯಾಗಿತ್ತು. ಈ ಸಿನಿಮಾ ಪ್ಯಾನ್ ಇಂಡಿಯಾ ಚಿತ್ರವಾಗಿದ್ದು ಇದರಿಂದ ಯಶ್ ಅವರು ತುಂಬಾನೇ ಜನಪ್ರಿಯರಾದರು ಮತ್ತು ನಮ್ಮ ಕನ್ನಡ ಇಂಡಸ್ಟ್ರಿ ಕೂಡ ವಿಶ್ವಾದ್ಯಂತ ಗುರುತನ್ನು ಪಡೆದುಕೊಂಡಿತು.
ಇನ್ನು ಈ ಚಿತ್ರವನ್ನು ಪ್ರಶಾಂತ್ ನೀಲ್ ಅವರು ನಿರ್ದೇಶನ ಮಾಡಿದ್ದು ವಿಜಯ್ ಕಿರಂಗದೂರು ಅವರು ನಿರ್ಮಾಣ ಮಾಡಿದ್ದಾರೆ. ಇದರಲ್ಲಿ ಯಶ್, ಶ್ರೀನಿಧಿ ಶೆಟ್ಟಿ, ಅನಂತ್ ನಾಗ್, ಮಾಳವಿಕಾ ಅವಿನಾಶ್, ರಾಮಚಂದ್ರ ರಾಜು, ಅಚ್ಯುತ್ ಕುಮಾರ್ ಇನ್ನೂ ಸಾಕಷ್ಟು ಕಲಾವಿದರು ಅಭಿನಯಿಸಿದ್ದಾರೆ. ಹಾಗೆಯೇ ಕೆಜಿಎಫ್ 2 ಚಿತ್ರವು ಕೂಡ ಇದೇ ತಿಂಗಳು ಏಪ್ರಿಲ್ 14 ರಂದು ಎಲ್ಲಾ ಕಡೆ ಬಿಡುಗಡೆಯಾಗಲಿದೆ.
ಕೆಜಿಎಫ್ 2 ಚಿತ್ರವನ್ನು ನೋಡುವುದಕ್ಕೆ ಸಾಕಷ್ಟು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಏಕೆಂದರೆ ಕೆಜಿಎಫ್ 1 ಚಿತ್ರ ಮತ್ತು ಕೆಜಿಎಫ್ 2 ಚಿತ್ರಗಳ ಮಧ್ಯೆ 4 ವರ್ಷದ ಅಂತರ ತೆಗೆದುಕೊಂಡಿತು. ಹೀಗಾಗಿ ಕೆಜಿಎಫ್ 2 ಚಿತ್ರದ ಕಥೆ ಏನಿರಬಹುದು ಮತ್ತು ಇದರಲ್ಲಿ ಯಶ್ ಅವರು ಹೇಗೆ ಅಭಿನಯಿಸಿದ್ದಾರೆ ಎನ್ನುವ ಕುತೂಹಲ ಎಲ್ಲರಲ್ಲೂ ಹೆಚ್ಚು ಇದೆ…..