ನಟ ಮಂಜುನಾಥ್ ಅವರು ಮಾಸ್ಟರ್ ಮಂಜುನಾಥ್ ಎಂದೆ ಫೇಮಸ್ ಆಗಿದ್ದಾರೆ. ಏಕೆಂದರೆ ಇವರು ಬಾಲ ನಟರಾಗಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಆಗಲೇ ಒಂದು ಗುರುತನ್ನು ಸಾಧಿಸಿಕೊಂಡವರು. ಹಾಗಾಗಿ ಇವರನ್ನು ಎಲ್ಲರೂ ಹೆಚ್ಚಾಗಿ ಮಾಸ್ಟರ್ ಮಂಜುನಾಥ್ ಎಂದು ಕರೆಯುತ್ತಾರೆ. ಇನ್ನು ಮಂಜುನಾಥ್ ಅವರು ಡಿಸೆಂಬರ್ 23 1976 ರಂದು ಜನಿಸಿದ್ದಾರೆ.
ಇವರು ಮೈಸೂರು ಮತ್ತು ಬೆಂಗಳೂರು ಯೂನಿವರ್ಸಿಟಿಯಲ್ಲಿ ಇಂಗ್ಲಿಷ್ನಲ್ಲಿ ಬಿಎ ಮತ್ತು ಎಂಎ ಪದವಿಯನ್ನು ಮಾಡಿ ಮುಗಿಸಿದ್ದಾರೆ. ಇದಾದ ಮೇಲೆ ಇವರು ಸಿನಿಮಾ ಅಟೋಗ್ರಾಫಿಯಲ್ಲಿ ಡಿಪ್ಲೋಮಾ ಪದವಿಯನ್ನು ಸಹ ಮಾಡಿ ಮುಗಿಸಿದ್ದಾರೆ. ಇನ್ನು ಇವರು ಕೇವಲ ಚಿಕ್ಕ ವಯಸ್ಸಿನಲ್ಲಿಯೇ ಸಿನಿಮಾ ರಂಗಕ್ಕೆ ಕಾಲಿಟ್ಟರು. ಹೌದು 1982 ರಲ್ಲಿ ಅಜಿತ್ ಎನ್ನುವ ಕನ್ನಡ ಚಿತ್ರದ ಮೂಲಕ ಇವರು ಬಾಲ ನಟರಾಗಿ ತಮ ಸಿನಿಮಾ ಕರಿಯರನ್ನು ಶುರು ಮಾಡಿಕೊಂಡರು.
ಇದಾದ ಮೇಲೆ ಇವರು ಸಾಕಷ್ಟು ಕನ್ನಡ ಚಿತ್ರಗಳಲ್ಲಿ ಬಾಲ ನಟರಾಗಿ ಅಭಿನಯಿಸಿದ್ದಾರೆ. ಇವರು ಕೇವಲ ಕನ್ನಡದಲ್ಲಿ ಮಾತ್ರವಲ್ಲ ಹಿಂದಿ ಇಂಗ್ಲಿಷ್ ತೆಲುಗು ಭಾಷೆಗಳ ಚಿತ್ರಗಳಲ್ಲೂ ಕೂಡ ಅಭಿನಯ ಮಾಡಿದ್ದಾರೆ. ಹಾಗೆಯೇ ಬೆಳೆದು ದೊಡ್ಡವರಾದ ಮೇಲೂ ಕೂಡ ಲೀಡ್ ರೋಲ್ನಲ್ಲಿ ಕೂಡ ಕೆಲ ಸಿನಿಮಾಗಳಲ್ಲಿ ಅಭಿನಯ ಮಾಡಿದ್ದಾರೆ ಎಂದು ಹೇಳಬಹುದು.
ಹೌದು ಇವರು ಕನ್ನಡದಲ್ಲಿ ಅಜಿತ್, ಮುತ್ತಿನಂತ ಅತ್ತಿಗೆ, ಟೋನಿ, ಜಗ್ಗು, ಹೊಸ ತೀರ್ಪು, ಬ್ಯಾಂಕರ್ ಮರಗಯ್ಯ, ನೋಡಿ ಸ್ವಾಮಿ ನಾವಿರೋದು ಹೀಗೆ, ರಕ್ತ ತಿಲಕ, ನಗ ಬೇಕಮ್ಮ ನಗಬೇಕು, ಅವಳ ಅಂತರಂಗ, ಯುದ್ಧಕಾಂಡ, ಲವ್ ಮಾಡಿ ನೋಡು, ನರಸಿಂಹ, ಶಿವಶಂಕರ್, ರಾಮಾಚಾರಿ ಹೀಗೆ ಇನ್ನು ಸಾಕಷ್ಟು ಕನ್ನಡ ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ.
ಇವರು ಎಲ್ಲ ಭಾಷೆಗಳಲ್ಲಿ ಸೇರಿ ಸುಮಾರು 68 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಹಾಗೆ ಇವರಿಗೆ ಆರು ಇಂಟರ್ನ್ಯಾಷನಲ್ ಒಂದು ನ್ಯಾಷನಲ್ ಮತ್ತು ಒಂದು ರಾಜ್ಯದ ಪ್ರಶಸ್ತಿ ದೊರಕಿದೆ. ಇನ್ನು ಪ್ರಸ್ತುತ ಮಂಜುನಾಥ್ ಅವರು ಬೆಂಗಳೂರಿನ ಮತ್ತು ಮೈಸೂರಿನ ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಪ್ರಾಜೆಕ್ಟ್ ನಲ್ಲಿ ಪಿಆರ್ ಪ್ರೊಫೆಷನಲ್ ಆಗಿ ಕೆಲಸ ಮಾಡುತ್ತಿದ್ದಾರೆ.
ಹಾಗೆಯೇ ಮಂಜುನಾಥ್ ಅವರು ಅಥ್ಲೆಟ್ ಆಗಿರುವ ಸ್ವರ್ಣ ರೇಖಾ ಎನ್ನುವವರನ್ನು ವಿವಾಹ ಮಾಡಿಕೊಂಡಿದ್ದಾರೆ. ಇವರ ಪತ್ನಿ ಸ್ಪ್ರಿಂಟರ್ ಮತ್ತು ಲಾಂಗ್ ಜಂಪರ್ ಆಗಿ ಗುರುತಿಸಿಕೊಂಡಿದ್ದಾರೆ. ಇಲ್ಲಿ ನೀವು ನಟ ಮಂಜುನಾಥ್ ಅವರ ಕುಟುಂಬದ ಕೆಲ ಸುಂದರ ದೃಶ್ಯಗಳನ್ನು ನೋಡಬಹುದು…..