ಕನ್ನಡದ ಖ್ಯಾತ ನಟ ಪ್ರಜ್ವಲ್ ದೇವರಾಜ್ ಅವರು ಡೈನಮಿಕ್ ಸ್ಟಾರ್ ದೇವರಾಜ್ ಮತ್ತು ಚಂದ್ರಕಲಾ ಅವರ ಮಗ. ಇವರ ತಂದೆ ಆಗ ಸಾಕಷ್ಟು ಚಿತ್ರಗಳಲ್ಲಿ ನಾಯಕ ನಟರಾಗಿ ಅಭಿನಯಿಸಿದ್ದಾರೆ. ಆದರೆ ಈಗ ಇವರು ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಪ್ರಜ್ವಲ್ ದೇವರಾಜ್ ಅವರು ಜುಲೈ 4 1987 ರಂದು ಬೆಂಗಳೂರಿನಲ್ಲಿ ಜನಿಸಿದರು. ಇವರಿಗೆ ಪ್ರಣಮ್ ದೇವರಾಜ್ ಎನ್ನುವ ಸಹೋದರ ಕೂಡ ಇದ್ದಾರೆ.
ಪ್ರಜ್ವಲ್ ದೇವರಾಜ್ ಅವರು ಬೆಂಗಳೂರಿನಲ್ಲಿರುವ ಜೈನ್ ಯೂನಿವರ್ಸಿಟಿ ಸೆಂಟರ್ ಫಾರ್ ಮ್ಯಾನೇಜ್ ಮೆಂಟ್ ಸ್ಟಡೀಸ್ ಎನ್ನುವ ಕಾಲೇಜ್ ನಲ್ಲಿ ತಮ್ಮ ಡಿಗ್ರಿ ಪದವಿಯನ್ನು ಮಾಡಿ ಮುಗಿಸಿದ್ದಾರೆ. ಇನ್ನು ಪ್ರಜ್ವಲ್ ಅವರು 2007 ರಲ್ಲಿ ಸಿಕ್ಸರ್ ಎನ್ನುವ ಚಿತ್ರದ ಮೂಲಕ ತಮ್ಮ ಸಿನಿಮಾ ಕೆರಿಯರ್ ಅನ್ನು ಶುರು ಮಾಡಿಕೊಂಡರು.
ಇದಾದ ಮೇಲೆ ಗೆಳೆಯ, ಗಂಗೆ ಬಾರೆ ತುಂಗೆ ಬಾರೆ, ಮೆರವಣಿಗೆ, ಜೀವ, ಗುಲಾಮ, ಕೆಂಚ, ನನ್ನವನು, ಕೋಟೆ, ಮುರಳಿ ಮೀಟ್ಸ್ ಮೀರಾ, ಮಿಸ್ಟರ್ ಡೂಪ್ಲಿಕೇಟ್, ಭದ್ರಾ, ಸಾಗರ್, ಗೋಕುಲ, ಕೃಷ್ಣ, ಸೂಪರ್ ಶಾಸ್ತ್ರಿ, ಗಲಾಟೆ, ಜಿದ್ದಿ, ಅಂಗಾರಕ, ಸವಾಲ್, ಜಂಬೂಸವಾರಿ, ನೀನಾದೇನಾ, ಮೃಗಶಿರಾ, ಅರ್ಜುನ, ಮಾದ ಮತ್ತು ಮಾನಸಿ, ಭುಜಂಗ, ಚೌಕ, ಲೈಫ್ ಜೊತೆ ಒಂದ್ ಸೆಲ್ಫಿ, ಜಂಟಲ್ ಮ್ಯಾನ್, ಇನ್ ಸ್ಪೆಕ್ಟರ್ ವಿಕ್ರಂ, ಅರ್ಜುನ್ ಗೌಡ ಎನ್ನುವ ಕನ್ನಡ ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ.
ಇನ್ನು ಪ್ರಜ್ವಲ್ ದೇವರಾಜ್ ಅವರು 2015 ರಲ್ಲಿ ತಮ್ಮ ಸ್ನೇಹಿತೆಯಾಗಿದ್ದ ರಾಗಿಣಿ ಪ್ರಜ್ವಲ್ ಅವರನ್ನು ವಿವಾಹ ಮಾಡಿಕೊಂಡಿದ್ದಾರೆ. ಈಕೆ ದೊಡ್ಡ ಮಾಡೆಲ್ ಮತ್ತು ಕ್ಲಾಸಿಕಲ್ ಡ್ಯಾನ್ಸರ್ ಕೂಡ ಹೌದು. ಇವರು 2020 ರಲ್ಲಿ ರಘು ಸಮರ್ಥ್ ಅವರು ನಿರ್ದೇಶನ ಮಾಡಿದ ಲಾ ಎನ್ನುವ ಚಿತ್ರದಲ್ಲಿ ಅಭಿನಯ ಮಾಡಿದ್ದಾರೆ. ಹಾಗೆಯೇ ಇವರಿಗೆ ತಮ್ಮದೇ ಆದ ಒಂದು ಡಾನ್ಸ್ ಸ್ಕೂಲ್ ಕೂಡ ಇದೆ.
ನಟಿ ರಾಗಿಣಿ ಪ್ರಜ್ವಲ್ ಅವರು ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಸಕ್ರಿಯರಾಗಿ ಇರುತ್ತಾರೆ. ತಮ್ಮ ಪತಿಯ ಜೊತೆ ಇರುವ ಫೋಟೋಗಳನ್ನು ಯಾವಾಗಲೂ ಅಭಿಮಾನಿಗಳಿಗೋಸ್ಕರ ಹಾಕುತ್ತಾ ಇರುತ್ತಾರೆ. ಹಾಗೆಯೇ ಸಾಕಷ್ಟು ಡ್ಯಾನ್ಸ್ ಮಾಡಿರುವ ವೀಡಿಯೋಗಳನ್ನು ಸಹ ಹಂಚಿಕೊಳ್ಳುತ್ತಾರೆ. ನಟ ಪ್ರಜ್ವಲ್ ದೇವರಾಜ್ ಅವರ ಮನೆಯ ಹೊರಾಂಗಣ ಮತ್ತು ಒಳಾಂಗಣ ಹೇಗಿದೆ ಎಂದು ನೀವು ನೋಡಬಹುದು…..