Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ನಟ ನೆನಪಿರಲಿ ಪ್ರೇಮ್ ಮನೆ ಹೇಗಿದೆ ಗೊತ್ತಾ? ಮೊದಲ ಬಾರಿಗೆ ತೋರಿಸುತ್ತೇವ ನೋಡಿ!

0

ಕನ್ನಡದ ಜನಪ್ರಿಯ ನಟ ನೆನಪಿರಲಿ ಪ್ರೇಮ್ ಅವರ ಪೂರ್ತಿಯ ಹೆಸರು ಪ್ರೇಮ್ ಕುಮಾರ್. ಇವರು ತಮ್ಮ ನೆನಪಿರಲಿ ಚಿತ್ರದ ಮೂಲಕ ತುಂಬಾನೆ ಫೇಮಸ್ ಆದರು. ಹಾಗಾಗಿ ಇವರಿಗೆ ನೆನಪಿರಲಿ ಪ್ರೇಮ್ ಎನ್ನುವ ಹೆಸರು ಬಂದಿತು. ಇನ್ನು ಇವರು ಏಪ್ರಿಲ್ 18 1976 ರಂದು ಜನಿಸಿದ್ದಾರೆ. ಈಗ ಇವರಿಗೆ 46 ವರ್ಷಗಳಾಗಿವೆ.

ಪ್ರೇಮ್ ಅವರು ಚಿಕ್ಕ ವಯಸ್ಸಿನಲ್ಲಿದ್ದಾಗ ಸಾಕಷ್ಟು ಸಿನಿಮಾಗಳನ್ನು ಥಿಯೇಟರ್ ಗೆ ಹೋಗಿ ನೋಡುತ್ತಿದ್ದರಂತೆ. ಅಂದರೆ ಒಂದು ವರ್ಷಕ್ಕೆ ಸುಮಾರು 150 ರಿಂದ 200 ಸಿನಿಮಾಗಳನ್ನು ನೋಡುತ್ತಿದ್ದರಂತೆ. ಇದನ್ನು ನೋಡಿದರೆ ಪ್ರೇಮ್ ಅವರಿಗೆ ಸಿನಿಮಾ ಮತ್ತು ನಟನೆ ಎಂದರೆ ಎಷ್ಟು ಹುಚ್ಚು ಮತ್ತು ಆಸಕ್ತಿ ಇದೆ ಎಂದು ಗೊತ್ತಾಗುತ್ತದೆ.

 

ತದನಂತರ ಪ್ರೇಮ್ ಅವರು ಮನ್ವಂತರ ಎನ್ನುವ ಧಾರಾವಾಹಿಯಲ್ಲಿ ಮೊದಲನೆಯದಾಗಿ ನಟಿಸಿದರು. ಇದರಲ್ಲಿ ಇವರಿಗೆ ಒಂದು ಎಪಿಸೋಡ್ ಗೆ 300 ರೂ.ಗಳು ದೊರಕುತ್ತಿತ್ತು. ಇದಾದ ಮೇಲೆ ಅರ್ಧ ಸತ್ಯ ಎನ್ನುವ ಧಾರಾವಾಹಿಯಲ್ಲೂ ಕೂಡ ಒಂದು ಎಪಿಸೋಡ್ ನಲ್ಲಿ ಅಭಿನಯ ಮಾಡಿದ್ದಾರೆ. ಇದಾದ ಮೇಲೆ 2004 ರಲ್ಲಿ ಪ್ರಾಣ ಎನ್ನುವ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟರು.

ತದನಂತರ ನೆನಪಿರಲಿ, ಜೊತೆ ಜೊತೆಯಲಿ, ಪಲ್ಲಕ್ಕಿ, ಗುಣವಂತ, ಹೊಂಗನಸು, ಗೌತಮ್, ಸವಿ ಸವಿ ನೆನಪು, ಜೊತೆಗಾರ, ಚೆಲುವೆಯೇ ನಿನ್ನ ನೋಡಲು, ಎರಡನೆ ಮದುವೆ, ಐಯಾಮ್ ಸಾರಿ ಮತ್ತೆ ಬನ್ನಿ ಪ್ರೀತ್ಸೋಣ, ಧನ್ ಧನಾ ಧನ್,

ಚಾರ್ಮಿನಾರ್, ಚಂದ್ರ, ಶತ್ರು, ಅತಿ ಅಪರೂಪ, ಫೇರ್ & ಲವ್ಲಿ, ಮಳೆ, ರಿಂಗ್ ರೋಡ್, ಮಸ್ತ್ ಮೊಹಬತ್, ಚೌಕ, ದಳಪತಿ, ಲೈಫ್ ಜೊತೆ ಒಂದ್ ಸೆಲ್ಫಿ, ಯಜಮಾನ, ಪ್ರೇಮಂ ಪೂಜ್ಯಂ ಎನ್ನುವ ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ.

ಹೀಗೆ ಪ್ರೇಮ್ ಅವರು ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಇನ್ನೂ ಪ್ರೇಮ್ ಅವರು ಜ್ಯೋತಿ ಎನ್ನುವವರನ್ನು ಪ್ರೀತಿಸಿ ವಿವಾಹ ಮಾಡಿಕೊಂಡಿದ್ದಾರೆ. ಇವರಿಗೆ ಒಬ್ಬ ಮಗ ಮತ್ತು ಒಬ್ಬಳು ಮಗಳು ಇದ್ದಾರೆ. ಹಾಗೆಯೇ ನೆನಪಿರಲಿ ಪ್ರೇಮ್ ಅವರ ಮನೆ ಹೇಗಿದೆ ಎಂದು ಇಲ್ಲಿರುವ ಕೆಲ ಚಿತ್ರಗಳಿಂದ ನೋಡಬಹುದು.

Leave A Reply