ನಟ ಮತ್ತು ರಾಜಕೀಯ ವ್ಯಕ್ತಿ ಆಗಿರುವ ನಿಖಿಲ್ ಕುಮಾರಸ್ವಾಮಿ ಮತ್ತು ತಮ್ಮ ಪತ್ನಿ ರೇವತಿ ಇಬ್ಬರೂ ತಮ್ಮ ಮಗನಿಗೆ ನಾಮಕರಣ ಮಾಡಿದ್ದಾರೆ. ಹೌದು ತಮ್ಮ ಮಗನ ನಾಮಕರಣಕ್ಕೆ ಸಾಕಷ್ಟು ಗಣ್ಯವ್ಯಕ್ತಿಗಳು, ಕಲಾವಿದರು, ಬಂಧು ಮಿತ್ರರು, ಸ್ನೇಹಿತರು ಆಗಮನ ಮಾಡಿ ಮಗುವಿಗೆ ಆಶೀರ್ವಾದವನ್ನು ಮಾಡಿದ್ದಾರೆ.
ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ಅವರು ತಮ್ಮ ಮಗನಿಗೆ ಅವ್ಯಾನ್ ದೇವ್ ಎನ್ನುವ ಹೆಸರನ್ನು ಇಟ್ಟು ನಾಮಕರಣ ಮಾಡಿದ್ದಾರೆ. ಇನ್ನು ನಿಖಿಲ್ ಕುಮಾರಸ್ವಾಮಿ ಅವರು ಜನವರಿ 22 1990 ರಂದು ಜನಿಸಿದ್ದಾರೆ. ಇವರು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಮತ್ತು ಅನಿತಾ ಕುಮಾರಸ್ವಾಮಿ ಅವರ ಮಗ.
ದೇವೇಗೌಡ ಮತ್ತು ಚೆನ್ನಮ್ಮ ದೇವೇಗೌಡ ಅವರು ನಿಖಿಲ್ ಕುಮಾರಸ್ವಾಮಿ ಅವರಿಗೆ ಅಜ್ಜಿ ತಾತ ಆಗಬೇಕು. ನಿಖಿಲ್ ಕುಮಾರಸ್ವಾಮಿ ಅವರು ರಾಜಕೀಯ ಜೊತೆಗೆ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಕೆಲ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇವರು 2016 ರಲ್ಲಿ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಬಿಡುಗಡೆಯಾದ ಜಾಗ್ವಾರ್ ಚಿತ್ರದ ಮೂಲಕ ಮೊದಲನೆಯದಾಗಿ ಬೆಳ್ಳಿತೆರೆಯ ಮೇಲೆ ಕಾಲಿಟ್ಟರು.
ತದನಂತರ ರಚಿತಾ ರಾಮ್ ಅವರ ಜೊತೆಗೆ ಸೀತಾರಾಮ ಕಲ್ಯಾಣ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿನಯದ ಕುರುಕ್ಷೇತ್ರ ಮತ್ತು ರೈಡರ್ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇನ್ನೂ ಇವರ ಹೊಸ ಸಿನಿಮಾ ಯದುವೀರ ಚಿತ್ರವು ಸದ್ಯ ಶೂಟಿಂಗ್ ಕೆಲಸದಲ್ಲಿ ತೊಡಗಿದೆ. ನಿಕಲ್ ಕುಮಾರಸ್ವಾಮಿ ಅವರು ರೇವತಿ ಅವರನ್ನು ಫೆಬ್ರವರಿ 10 2020 ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದರು.
ತದನಂತರ ಏಪ್ರಿಲ್ 17 2020 ರಂದು ರಾಮನಗರದಲ್ಲಿರುವ ಜನಪದ ಲೋಕದಲ್ಲಿ ವಿವಾಹ ಮಾಡಿಕೊಂಡರು. ಇನ್ನು ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ಅವರ ಮಗ ಸೆಪ್ಟೆಂಬರ್ 24 2021 ರಂದು ಜನಿಸಿದನು. ಇಲ್ಲಿ ನೀವು ನಿಖಿಲ್ ಕುಮಾರಸ್ವಾಮಿ ಅವರ ಮಗನ ನಾಮಕರಣದ ವೀಡಿಯೋವನ್ನು ನೋಡಬಹುದು…..