ಕನ್ನಡದ ಜನಪ್ರಿಯ ನಟ ದಿಗಂತ್ ಅವರು ಖ್ಯಾತ ನಟಿ ಐಂದ್ರಿತಾ ರೇ ಅವರನ್ನು ಡಿಸೆಂಬರ್ 12 2018 ರಂದು ವಿವಾಹ ಮಾಡಿಕೊಂಡರು. ಇವರಿಬ್ಬರು ಕನ್ನಡ ಸಿನಿಮಾದ ದೊಡ್ಡ ನಟ ನಟಿಯರಾಗಿದ್ದು ಹತ್ತು ವರ್ಷಗಳ ಕಾಲ ಪ್ರೀತಿಸಿ ನಂತರ ಮನೆಯವರನ್ನು ಒಪ್ಪಿಸಿ ವಿವಾಹ ಮಾಡಿಕೊಂಡಿದ್ದಾರೆ. ದಿಗಂತ್ ಮತ್ತು ಐಂದ್ರಿತಾ ಅವರು ಇರುವ ಮನೆ ಹೇಗಿದೆ ಎಂದು ನೀವು ಇಲ್ಲಿ ಕೆಲ ದೃಶ್ಯಗಳನ್ನು ನೋಡಬಹುದು.
ಇನ್ನು ದಿಗಂತ್ ಡಿಸೆಂಬರ್ 28 1983 ರಂದು ಸಾಗರದಲ್ಲಿ ಜನಿಸಿದರು. ಇವರ ತಂದೆಯ ಹೆಸರು ಶ್ರೀ ಕೃಷ್ಣಮೂರ್ತಿ ಮತ್ತು ತಾಯಿಯ ಹೆಸರು ಮಲ್ಲಿಕಾ ಕೃಷ್ಣಮೂರ್ತಿ ಎಂದು. ಇವರಿಗೆ ಆಕಾಶ್ ಎನ್ನುವ ಸಹೋದರ ಕೂಡ ಇದ್ದಾರೆ. ದಿಗಂತ್ ಅವರು ಬೆಂಗಳೂರಿನಲ್ಲಿರುವ ಶ್ರೀ ಭಗವಾನ್ ಮಹಾವೀರ್ ಜೈನ್ ಕಾಲೇಜಿನಲ್ಲಿ ಬಿಕಾಂ ಪದವಿಯನ್ನು ಮಾಡಿ ಮುಗಿಸಿದ್ದಾರೆ.
ಇದಾದ ಮೇಲೆ ಇವರು 2006 ರಲ್ಲಿ ತಮ್ಮ ಸಿನಿಮಾ ಕೆರಿಯರ್ ಶುರು ಮಾಡಿಕೊಳ್ಳುತ್ತಾರೆ. ಇವರನ್ನು ಎಲ್ಲರೂ ದಿಗಂತ್ ಎನ್ನುವ ಬದಲು ದೂದ್ ಪೇಡಾ ಎಂದೇ ಕರೆಯುತ್ತಾರೆ. ದಿಗಂತ್ ಅವರು 2006 ರಲ್ಲಿ ಮಿಸ್ ಕ್ಯಾಲಿಫೋರ್ನಿಯಾ ಎನ್ನುವ ಕನ್ನಡ ಚಿತ್ರದ ಮೂಲಕ ಮೊದಲನೆಯದಾಗಿ ತಮ್ಮ ಸಿನಿಮಾ ಕೆರಿಯರ್ ಅನ್ನು ಶುರು ಮಾಡಿದರು. ಇವರು ಕೆಲ ತೆಲುಗು ಮತ್ತು ಹಿಂದಿ ಭಾಷೆಗಳ ಚಿತ್ರಗಳಲ್ಲಿ ಕೂಡ ನಟಿಸಿದ್ದಾರೆ.
ಮುಂಗಾರು ಮಳೆ, ಗಾಳಿಪಟ, ಮನಸಾರೆ, ಪಂಚರಂಗಿ, ಲೈಫು ಇಷ್ಟೇನೇ, ಪಾರಿಜಾತ, ಬರ್ಫಿ, ಚೌಕ, ಯುವರತ್ನ ಇನ್ನೂ ಸಾಕಷ್ಟು ಕನ್ನಡ ಸಿನಿಮಾಗಳು ಇವರನ್ನು ಹೆಚ್ಚು ಜನಪ್ರಿಯರನ್ನಾಗಿ ಮಾಡಿಸಿತು. ಇನ್ನೂ ಐಂದ್ರಿತಾ ರೇ ಅವರು ಏಪ್ರಿಲ್ 16 1985 ರಲ್ಲಿ ಉದಯ್ ಪುರ್ ನಲ್ಲಿ ಜನಿಸಿದ್ದಾರೆ. ಇವರ ತಂದೆಯ ಹೆಸರು ಎ.ಕೆ ರೇ ಮತ್ತು ತಾಯಿಯ ಹೆಸರು ಸುನೀತಾ ರೇ.
ಇವರು ಬೆಂಗಳೂರಿನಲ್ಲಿ ಇರುವ ಬಿ.ಆರ್ ಅಂಬೇಡ್ಕರ್ ಡೆಂಟಲ್ ಕಾಲೇಜ್ ನಲ್ಲಿ ತಮ್ಮ ಡಿಗ್ರಿ ಪದವಿಯನ್ನು ಮಾಡಿ ಮುಗಿಸಿದ್ದಾರೆ. ತದನಂತರ ಮಾಡಲಾಗಿ ಕೆಲ ಟಿವಿ ಅಡ್ವರ್ಟೈಸ್ಮೆಂಟ್ ಗಳಲ್ಲಿ ನಟಿಸಿದ್ದಾರೆ. ತದನಂತರ 2008 ರಲ್ಲಿ ಮೆರವಣಿಗೆ ಚಿತ್ರದ ಮೂಲಕ ಮೊದಲನೆಯದಾಗಿ ತಮ್ಮ ಸಿನಿಮಾ ಕೆರಿಯರ್ ಅನ್ನು ಶುರು ಮಾಡಿದರು. ಹೀಗೆ ಐಂದ್ರಿತಾ ರೇ ಅವರು ಕನ್ನಡದಲ್ಲಿ ಸುಮಾರು 30 ಕ್ಕಿಂತ ಹೆಚ್ಚು ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ….