ನಟ ದಿಗಂತ್ ಅವರ ಬಲಗಡೆಯ ಕಣ್ಣು ಗಾಯ ಆಗಿರುವುದು ನಿಜ. ಈ ಗಾಯ ಬಾಲಿವುಡ್ ಸಿನಿಮಾದ ಶೂಟಿಂಗ್ ನಲ್ಲಿ ಜರುಗಿತ್ತು. ಆದರೆ ಈಗ ಇದಕ್ಕೆ ಪೂರ್ತಿ ಚಿಕಿತ್ಸೆ ತೆಗೆದುಕೊಂಡು ವಾಸಿಯಾಗಿದೆ ಎಂದು ಹೇಳಿದ್ದಾರೆ. ದಿಗಂತ್ ಅವರಿಗೆ ಸಾಕಷ್ಟು ಹುಡುಗಿಯರ ಅಭಿಮಾನಿಗಳು ಇರುವುದು ನಿಮಗೆಲ್ಲರಿಗೂ ಗೊತ್ತೇ ಇದೆ. ಇವರನ್ನು ಎಲ್ಲರೂ ದೂದ್ ಪೇಡಾ ಎಂದೇ ಕರೆಯುತ್ತಾರೆ.
ಒಮ್ಮೆ ಟಿಕೆಟ್ ಟು ಬಾಲಿವುಡ್ ಎನ್ನುವ ಹಿಂದಿ ಸಿನಿಮಾದಲ್ಲಿ ನಟಿಸಬೇಕಾದರೆ ಶೂಟಿಂಗ್ ವೇಳೆಯಲ್ಲಿ ಅಮೈರಾ ದಸ್ತೂರ್ ಎನ್ನುವ ನಟಿಯಿಂದ ಇವರ ಕಣ್ಣಿಗೆ ಪೆಟ್ಟು ಬಿದ್ದಿದೆ. ಹೌದು ಸಿನಿಮಾದ ಶೂಟಿಂಗ್ ನ ಒಂದು ಸೀನ್ ನಲ್ಲಿ ದಿಗಂತ್ ಅವರಿಗೆ ಅಮೈರಾ ದಸ್ತೂರ್ ಅವರು ಚಪ್ಪಲಿಯನ್ನು ತೂರಬೇಕಿತ್ತು. ಅದರಂತೆಯೇ ಇವರು ದಿಗಂತ್ ಅವರ ಮೇಲೆ ತೂರಿದರು.
ಆದರೆ ಅದು ಅವರ ಬಲಗಣ್ಣಿನ ಮೇಲೆ ಬಿದ್ದು ತೀವ್ರವಾದ ಗಾಯ ಆಗಿತ್ತು. ಇದರಿಂದ ಇವರು ವಿದೇಶದಲ್ಲಿ ಚಿಕಿತ್ಸೆಯನ್ನು ಕೂಡ ತೆಗೆದುಕೊಂಡಿದ್ದರು. ಚಿಕಿತ್ಸೆಯನ್ನು ತೆಗೆದುಕೊಳ್ಳುತ್ತಿರುವ ಸಮಯದಲ್ಲಿ ಇವರೆಗೆ ಇದ್ದ ಸಾಕಷ್ಟು ಸಿನಿಮಾದ ಅವಕಾಶಗಳೆಲ್ಲವೂ ಹೋಯಿತು. ಕೆಲ ಬಾಲಿವುಡ್ ಸಿನಿಮಾಗಳು ಮತ್ತು ಕನ್ನಡ ಸಿನಿಮಾಗಳು ಕೂಡ ಇತ್ತು. ಕಣ್ಣು ಗಾಯಗೊಂಡಾಗ ಚೌಕ ಸಿನಿಮಾದ ಶೂಟಿಂಗ್ ಮುಗಿದಿತ್ತು.
ನಂತರ ಚಿಕಿತ್ಸೆ ತೆಗೆದುಕೊಂಡ ಬಂದಮೇಲೆ ಚೌಕ ಸಿನಿಮಾದ ಪ್ರೆಸ್ ಮೀಟ್ ನಲ್ಲಿ ಇವರು ಯಾರಿಗೂ ಕಾಣಿಸದಂತೆ ಕಣ್ಣಿಗೆ ಕಪ್ಪು ಬಣ್ಣದ ಗ್ಲಾಸ್ ಗಳನ್ನು ಹಾಕಿಕೊಂಡಿದ್ದರು. ನಂತರ ಅಭಿಮಾನಿಗಳು ಅವರ ಕಣ್ಣನ್ನು ನೋಡಿದಾಗ ಇದು ಸಂಪೂರ್ಣವಾಗಿ ವಾಸಿ ಆಗಿಲ್ಲ ಎಂದು ಮಾತನಾಡಿಕೊಂಡರು. ಆದರೆ ದಿಗಂತ್ ಅವರೇ ಸ್ಪಷ್ಟವಾಗಿ ನನ್ನ ಕಣ್ಣು ಈಗ ಚೆನ್ನಾಗಿದೆ ಎಂದು ಹೇಳಿದರು.
ಆದರೂ ಕೂಡ ಅವರ ಕಣ್ಣು ಕ್ಯಾಮೆರಾ ಮುಂದೆ ಬಂದಾಗ ಒಂದು ರೀತಿ ಇರುತ್ತದೆ. ಇನ್ನು ದಿಗಂತ್ ಅವರು ಡಿಸೆಂಬರ್ 28 1983 ರಂದು ಸಾಗರದಲ್ಲಿ ಜನಿಸಿದರು. ಇವರು 2006 ರಲ್ಲಿ ಮಿಸ್ ಕ್ಯಾಲಿಫೋರ್ನಿಯಾ ಚಿತ್ರದ ಮೂಲಕ ಮೊದಲನೆಯದಾಗಿ ಬೆಳ್ಳಿತೆರೆಯ ಮೇಲೆ ಕಾಲಿಟ್ಟರು.
ಇದಾದ ಮೇಲೆ ಮಂಡ್ಯ, ಎಸ್ಸೆಮ್ಮೆಸ್ 6260, ಮುಂಗಾರುಮಳೆ, ಮೀರಾ ಮಾಧವ ರಾಘವ, ಗಾಳಿಪಟ, ಮಸ್ತ್ ಮಜಾ ಮಾಡಿ, ಹೌಸ್ಫುಲ್, ಮನಸಾರೆ, ಮಳೆಬಿಲ್ಲೆ, ಬಿಸಿಲೇ, ಸ್ವಯಂವರ, ಪಂಚರಂಗಿ, ತಾಲಿಬಾನ್, ಮಿಸ್ಟರ್ ಡೂಪ್ಲಿಕೇಟ್, ಲೈಫು ಇಷ್ಟೇನೆ, ಪುತ್ರ, ತಾರೆ, ಕಾಂಚನಾ, ಪಾರಿಜಾತ, ದೇವ್, ಸನ್ ಆಫ್ ಮುದ್ದೇಗೌಡ, ಬರ್ಫಿ, ಶಾರ್ಪ್ ಶೂಟರ್ಸ್ ಪ್ರಪಂಚ, ನಾಗರಹಾವು, ಚೌಕ, ಹ್ಯಾಪಿ ನ್ಯೂ ಇಯರ್, ಕಥೆಯೊಂದು ಶುರುವಾಗಿದೆ, ಸಾಕ್ಷಿ, ಮೂವತ್ತ ನಕ್ಷತ್ರ, ಯುವರತ್ನ ಚಿತ್ರಗಳಲ್ಲಿ ನಟಿಸಿದ್ದಾರೆ…..