ನವರಸ ನಾಯಕ ಜಗ್ಗೇಶ್ ಅವರಿಗೆ ಇಬ್ಬರು ಮಕ್ಕಳು ಗುರುರಾಜ್ ಜಗ್ಗೇಶ್ ಮತ್ತು ಯತಿರಾಜ್ ಜಗ್ಗೇಶ್. ಇದರಲ್ಲಿ ಗುರುರಾಜ್ ಅವರು ನೆದರ್ಲ್ಯಾಂಡ್ ದೇಶದ ಕ್ಯಾಟಿ ಪೈಲೆ ಎನ್ನುವ ವಿದೇಶಿಯ ಹುಡುಗಿಯನ್ನು ಏಪ್ರಿಲ್ 24 2014 ರಂದು ವಿವಾಹ ಮಾಡಿಕೊಂಡಿದ್ದಾರೆ. ಇನ್ನೂ ಇವರಿಗೆ ಅರ್ಜುನ್ ಎನ್ನುವ ಮುದ್ದಾದ ಮಗ ಕೂಡ ಇದ್ದಾನೆ.
ಜಗ್ಗೇಶ್ ಅವರು ಯಾವಾಗಲೂ ತಮ್ಮ ಮೊಮ್ಮಗನ ಜೊತೆ ಹೆಚ್ಚು ಕಾಲವನ್ನು ಕಳೆಯುತ್ತಾರೆ. ಇನ್ನು ಇವರ ಮೊಮ್ಮಗ ಅರ್ಜುನ್ ಕರಾಟೆಯನ್ನು ಕಲಿತಿದ್ದು ಒಂದೇ ಏಟಿಗೆ ಹೆಂಚನ್ನು ಪುಡಿಪುಡಿ ಮಾಡಿದ್ದಾನೆ. ಅದರ ವಿಡಿಯೋ ಇಲ್ಲಿದೆ ನೋಡಿ.
ಇನ್ನು ಜಗ್ಗೇಶ್ ಅವರು ಮಾರ್ಚ್ 17 1963 ರಂದು ಮಾಯಸಂದ್ರದಲ್ಲಿ ಜನಿಸಿದರು. ಇವರ ತಂದೆಯ ಹೆಸರು ಶಿವಲಿಂಗಪ್ಪ ಮತ್ತು ತಾಯಿಯ ಹೆಸರು ನಂಜಮ್ಮ. ಇವರಿಗೆ ನಟ ಕೋಮಲ್, ಮಹಾದೇವಿ ಮತ್ತು ವಿಜಯಲಕ್ಷ್ಮಿ ಎನ್ನುವ ಸಹೋದರ ಮತ್ತು ಸಹೋದರಿಯರು ಇದ್ದಾರೆ.
ಜಗ್ಗೇಶ್ ಅವರು ಕೇವಲ ನಟ ಮಾತ್ರರಲ್ಲ ಸಿನಿಮಾ ನಿರ್ಮಾಪಕ ಮತ್ತು ನಿರ್ದೇಶಕರು ಕೂಡ ಹೌದು. ಇದರ ಜೊತೆಗೆ ಇವರು ಭಾರತೀಯ ಜನತಾ ಪಾರ್ಟಿಯಲ್ಲಿ ಮೆಂಬರ್ ಆಗಿ ರಾಜಕೀಯ ಕ್ಷೇತ್ರದಲ್ಲೂ ಕೂಡ ತೊಡಗಿಸಿಕೊಂಡಿದ್ದಾರೆ. ಜಗ್ಗೇಶ್ ಅವರು 1982 ರಲ್ಲಿ ಇಬ್ಬನಿ ಕರಗಿತು ಎನ್ನುವ ಚಿತ್ರದ ಮೂಲಕ ತಮ್ಮ ಸಿನಿಮಾ ಕೆರಿಯರ್ ಅನ್ನು ಶುರು ಮಾಡಿಕೊಂಡರು.
ತದನಂತರ ಹೊಸ ನೀರು, ಯುದ್ಧಕಾಂಡ, ಸಿಂಧೂರ ತಿಲಕ, ಮೇಘಮಂದಾರ, ಅಳಿಯ ಅಲ್ಲ ಮಗಳ ಗಂಡ, ಜೋಡಿ, ಮೇಕಪ್, ಆಗೋದೆಲ್ಲಾ ಒಳ್ಳೇದಕ್ಕೆ, ತೆನಾಲಿರಾಮ, ಲಿಫ್ಟ್ ಕೊಡ್ಲಾ, ಸಾಫ್ಟ್ ವೇರ್ ಗಂಡ, ನೀರ್ ದೋಸೆ, ಪ್ರೀಮಿಯರ್ ಪದ್ಮಿನಿ, ಕಾಳಿದಾಸ ಕನ್ನಡ ಮೇಷ್ಟ್ರು ಹೀಗೆ ಇನ್ನೂ ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿದ್ದಾರೆ.
ಅದರಲ್ಲೂ ಇವರು ಹೆಚ್ಚಾಗಿ ಕಾಮಿಡಿ ಸಿನಿಮಾಗಳಲ್ಲಿ ನಟಿಸಿದ್ದಾರೆ ಎಂದು ಹೇಳಬಹುದು. ಇನ್ನು ಇವರು ಗುರು ಮತ್ತು ಮೇಲುಕೋಟೆ ಮಂಜ ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. ಹಾಗೆಯೇ ಸಾಕಷ್ಟು ರಿಯಾಲಿಟಿ ಶೋಗಳಿಗೆ ಜಡ್ಜ್ ಕೂಡ ಆಗಿದ್ದಾರೆ. ಇನ್ನು ಜಗ್ಗೇಶ್ ಅವರು 1984 ರಲ್ಲಿ ಪರಿಮಳ ಎನ್ನುವವರನ್ನು ವಿವಾಹ ಮಾಡಿಕೊಂಡಿದ್ದಾರೆ…..