ಕಿರುತೆರೆಯ ಜೋಡಿ ಚಂದನ್ ಮತ್ತು ಕವಿತಾ ಗೌಡ ಅವರು ಇತ್ತೀಚೆಗಷ್ಟೇ ಹೊಸ ಮನೆಯನ್ನು ಕೊಂಡುಕೊಂಡಿದ್ದಾರೆ. ಇದರ ಸಲುವಾಗಿ ಹೊಸ ಮನೆಯ ಗೃಹಪ್ರವೇಶವನ್ನು ತುಂಬಾ ಅದ್ಧೂರಿಯಾಗಿ ಮಾಡಿದ್ದಾರೆ. ಇನ್ನು ಈ ಗೃಹ ಪ್ರವೇಶ ಕಾರ್ಯಕ್ರಮಕ್ಕೆ ಅಕುಲ್ ಬಾಲಾಜಿ, ಘಾನಾ ಭಟ್, ಜೀವಿತ, ಕೇಶವ ಗೌಡ ಇನ್ನೂ ಸಾಕಷ್ಟು ಕಲಾವಿದರು ಆಗಮನ ಮಾಡಿ ಶುಭಾಶಯಗಳನ್ನು ತಿಳಿಸಿದ್ದಾರೆ.
ಇನ್ನು ಚಂದನ್ ಕುಮಾರ್ ಮತ್ತು ಕವಿತಾ ಗೌಡ ಅವರು ಇಬ್ಬರು ಪ್ರೀತಿಸಿ ಮೇ 14 2021 ರಂದು ವಿವಾಹ ಮಾಡಿಕೊಂಡರು. ಚಂದನ್ ಕುಮಾರ್ ಅವರು ಸೆಪ್ಟೆಂಬರ್ 11 1985 ರಲ್ಲಿ ಜನಿಸಿದ್ದಾರೆ. ಇವರು ಪ್ಯಾಟೆ ಮಂದಿ ಕಾಡಿಗೆ ಬಂದ್ರು ಎನ್ನುವ ಶೋನಲ್ಲಿ ಕಂಟೆಸ್ಟೆಂಟ್ ಆಗಿ ಭಾಗವಹಿಸಿದ್ದರು. ಇದಾದ ಮೇಲೆ ರಾಧಾ ಕಲ್ಯಾಣ ಮತ್ತು ಲಕ್ಷ್ಮಿ ಬಾರಮ್ಮ ಧಾರಾವಾಹಿಯಲ್ಲಿ ನಟಿಸಿ ತುಂಬಾನೇ ಜನಪ್ರಿಯರಾದರು.
ಇವರು ಕೇವಲ ಕನ್ನಡ ಧಾರಾವಾಹಿಗಳಲ್ಲಿ ಮಾತ್ರವಲ್ಲ ತೆಲುಗಿನಲ್ಲಿ ಸರ್ವಮಂಗಳ ಮಾಂಗಲ್ಯೇ ಮತ್ತು ಸಾವಿತ್ರಮ್ಮ ಗಾರಿ ಅಬ್ಬಾಯಿ ಎನ್ನುವ ಧಾರಾವಾಹಿಗಳಲ್ಲೂ ಕೂಡ ನಟಿಸಿದ್ದಾರೆ. ಇನ್ನು ಪ್ರಸ್ತುತ ಚಂದನ್ ಅವರು ಕನ್ನಡದಲ್ಲಿ ಮರಳಿ ಮನಸಾಗಿದೆ ಮತ್ತು ತೆಲುಗಿನಲ್ಲಿ ಶ್ರೀಮತಿ ಶ್ರೀನಿವಾಸ ಎನ್ನುವ ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ.
ಹಾಗೆಯೇ ಇವರು ಕಲರ್ಸ್ ಕನ್ನಡ ವಾಹಿನಿಯ ದೊಡ್ಡ ರಿಯಾಲಿಟಿ ಶೋ ಆಗಿರುವ ಬಿಗ್ ಬಾಸ್ ಸೀಸನ್ 3 ರಲ್ಲೂ ಕೂಡ ಕಂಟೆಸ್ಟೆಂಟ್ ಆಗಿ ಮನೆಗೆ ಪ್ರವೇಶ ಮಾಡಿದ್ದರು. ಇನ್ನು ಬೆಳ್ಳಿತೆರೆಗೆ ಬಂದರೆ 2011 ರಲ್ಲಿ ಲೈಫು ಇಷ್ಟೇನೆ ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟರು. ಇದಾದ ಮೇಲೆ ಪರಿಣಯ, ಕಟ್ಟೆ, ಎರಡೊಂದ್ಲ ಮೂರು, ಲವ್ ಯೂ ಆಲಿಯಾ, ಬೆಂಗಳೂರು 560023, ಪ್ರೇಮಬರಹ, ಶ್ರೀಕೃಷ್ಣ ಅಟ್ ಜಿಮೈಲ್ ಡಾಟ್ ಕಾಮ್ ಎನ್ನುವ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಹಾಗೆಯೇ ಕವಿತಾ ಗೌಡ ಅವರು ಜುಲೈ 26 1992 ರಂದು ಬೆಂಗಳೂರಿನಲ್ಲಿ ಜನಿಸಿದ್ದಾರೆ. ಇವರು ಮೊದಲು ತಮಿಳಿನ ಮಹಾಭಾರತಂ ಧಾರಾವಾಹಿಯ ಮುಖಾಂತರ ಕಿರುತೆರೆಗೆ ಕಾಲಿಟ್ಟರು. ಇನ್ನು ನಮ್ಮ ಕನ್ನಡದಲ್ಲಿ ಲಕ್ಷ್ಮಿ ಬಾರಮ್ಮ ಧಾರಾವಾಹಿಯ ಮುಖಾಂತರ ಸಕ್ಕತ್ ಜನಪ್ರಿಯರಾದರು. ಇದಾದ ಮೇಲೆ ವಿದ್ಯಾ ವಿನಾಯಕ ಎನ್ನುವ ಧಾರಾವಾಹಿಯಲ್ಲಿ ನಟಿಸಿದ್ದಾರೆ.
ಇದರ ಜತೆಗೆ ಕೆಲ ತೆಲುಗು ಧಾರಾವಾಹಿಗಳಲ್ಲೂ ಕೂಡ ಅಭಿನಯಿಸಿದ್ದಾರೆ. ಇನ್ನೂ ಇವರು 2016 ರಲ್ಲಿ ಬಿಡುಗಡೆಯಾದ ಶ್ರೀನಿವಾಸ ಕಲ್ಯಾಣ ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟರು. ಇದಾದ ಮೇಲೆ ಫಸ್ಟ್ ಲವ್, ಗುಬ್ಬಿ ಮೇಲೆ ಬ್ರಹ್ಮಾಸ್ತ್ರ, ಬೀರ್ಬಲ್ ಟ್ರಯಾಲಜಿ, ಗೋವಿಂದ ಗೋವಿಂದ, ಹುಟ್ಟುಹಬ್ಬದ ಶುಭಾಶಯಗಳು ಎನ್ನುವ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ….