ಗೋಲ್ಡನ್ ಸ್ಟಾರ್ ಗಣೇಶ್ ಅವರು ಜುಲೈ 2 1980 ರಂದು ನೆಲಮಂಗಲದ ಅಡಕಮರನಹಳ್ಳಿಯಲ್ಲಿ ಜನಿಸಿದ್ದಾರೆ. ಇವರ ತಂದೆಯ ಹೆಸರು ಕಿಶಾನ್ ಬಾಲ್ ಮತ್ತು ತಾಯಿಯ ಹೆಸರು ಸುಲೋಚನಾ ಬಾಲ್. ಇನ್ನು ಗಣೇಶ್ ಅವರು ಮೊದಲು ನಿರೂಪಕರಾಗಿ ಕೆಲಸ ಮಾಡುತ್ತಿದ್ದರು. ತದನಂತರ ಇವರು ಕೆಲ ಧಾರಾವಾಹಿಗಳಲ್ಲಿ ನಟಿಸಿದ ಮೇಲೆ ಬೆಳ್ಳಿತೆರೆಯಲ್ಲಿ ಹೀರೋ ಆಗಿ ಕಾಣಿಸಿಕೊಂಡರು.
ಉದಯ ಟಿವಿ ವಾಹಿನಿಯಲ್ಲಿ ಪ್ರಸಾರವಾಗಿದ್ದ ಕಾಮಿಡಿ ಟೈಮ್ ಗಣೇಶ್ ಎನ್ನುವ ಜನಪ್ರಿಯ ಕಾರ್ಯಕ್ರಮವನ್ನು ಗಣೇಶ್ ಅವರು ಹೋಸ್ಟ್ ಮಾಡಿದ್ದಾರೆ. ಈ ಕಾರ್ಯಕ್ರಮದ ಮುಖಾಂತರ ಇವರು ಸಖತ್ ಫೇಮಸ್ ಆದರು. ತದನಂತರ ಖ್ಯಾತ ನಿರ್ದೇಶಕರಾದ ಬಿ.ಸುರೇಶ್ ಅವರು ಇವರನ್ನು ಗುರುತಿಸಿ 2002 ರಲ್ಲಿ ಬಿಡುಗಡೆಯಾದ ಟಪೋರಿ ಚಿತ್ರದಲ್ಲಿ ಒಂದು ವಿಲನ್ ಪಾತ್ರದಲ್ಲಿ ನಟಿಸುವುದಕ್ಕೆ ಅವಕಾಶವನ್ನು ನೀಡಿದರು.
ಇದಾದ ಮೇಲೆ ಕೆಲ ಚಿತ್ರಗಳಲ್ಲಿ ಇವರು ಸಹಾಯಕ ನಟರಾಗಿ ಅಭಿನಯಿಸಿ 2006 ರಲ್ಲಿ ಬಿಡುಗಡೆಯಾದ ಚೆಲ್ಲಾಟ ಚಿತ್ರದ ಮೂಲಕ ಹೀರೋ ಆಗಿ ತೆರೆಯ ಮೇಲೆ ಕಾಣಿಸಿಕೊಂಡರು. ಇದರಲ್ಲಿ ರೇಖಾ ವೇದವ್ಯಾಸ್ ಅವರು ನಾಯಕಿ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಇದಾದ ಮೇಲೆ ಗಣೇಶ್ ಅವರು ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿದರು. ಇನ್ನೂ ಇವರು ನಟಿಸಿದ ಮುಂಗಾರು ಮಳೆ ಚಿತ್ರ ಬ್ಲಾಕ್ ಬಾಸ್ಟರ್ ಹಿಟ್ ಆಗಿ ಬಾಕ್ಸಾಫೀಸ್ ನಲ್ಲಿ ರೆಕಾರ್ಡ್ ಅನ್ನು ಸಂಪಾದನೆ ಮಾಡಿತು.
ಪ್ರಸ್ತುತ ಗಣೇಶ್ ಅವರು 2021 ರಲ್ಲಿ ಬಿಡುಗಡೆಯಾದ ಸಕತ್ ಎನ್ನುವ ಚಿತ್ರದಲ್ಲಿ ಕೊನೆಯದಾಗಿ ಅಭಿನಯ ಮಾಡಿದ್ದಾರೆ. ಇದಾದ ಮೇಲೆ ಟ್ರಿಬಲ್ ರೈಡಿಂಗ್, ಗಾಳಿಪಟ 2, ದ ಸ್ಟೋರಿ ಆಫ್ ರಾಯಗಡ, ಬಾನದಾರಿಯಲ್ಲಿ ಎನ್ನುವ ಚಿತ್ರಗಳು ತೆರೆಯ ಮೇಲೆ ಬರಲು ಕಾಯುತ್ತಿವೆ. ಗಣೇಶ್ ಅವರು ಮೊದಲು ಕಾಮಿಡಿ ಟೈಂ ಎನ್ನುವ ಕಾರ್ಯಕ್ರಮವನ್ನು ಹೋಸ್ಟ್ ಮಾಡಿದ್ದರು.
ಇನ್ನೂ ಇವರು ಹೀರೋ ಆದ ಮೇಲೂ ಕೂಡ ಸಾಕಷ್ಟು ಶೋಗಳನ್ನು ಹೋಸ್ಟ್ ಮಾಡಿದ್ದಾರೆ. ಪ್ರಸ್ತುತ ಇವರು ಗೋಲ್ಡನ್ ಗ್ಯಾಂಗ್ ಎನ್ನುವ ಕಾರ್ಯಕ್ರಮವನ್ನು ಹೋಸ್ಟ್ ಮಾಡುತ್ತಿದ್ದಾರೆ.
ಗಣೇಶ್ ಅವರು 2008 ರಲ್ಲಿ ಶಿಲ್ಪಾ ಗಣೇಶ್ ಅವರನ್ನು ವಿವಾಹ ಮಾಡಿಕೊಂಡರು. ಇವರಿಗೆ ಚಾರಿತ್ರಿಯಾ ಗಣೇಶ್ ಮತ್ತು ವಿಹಾನ್ ಗಣೇಶ್ ಎನ್ನುವ ಇಬ್ಬರು ಮಕ್ಕಳಿದ್ದಾರೆ. ನಟ ಗೋಲ್ಡನ್ ಸ್ಟಾರ್ ಗಣೇಶ್ ಅವರ ಕುಟುಂಬದ ಕೆಲ ಸುಂದರ ಕ್ಷಣಗಳನ್ನು ಇಲ್ಲಿ ನೋಡಬಹುದು…..