ಖ್ಯಾತ ಹಿರಿಯ ನಟ ಆಗಿದ್ದ ಕಲ್ಯಾಣ್ ಕುಮಾರ್ ಅವರು ಜುಲೈ 21 1928 ರಂದು ಬೆಂಗಳೂರಿನಲ್ಲಿ ಜನಿಸಿದ್ದಾರೆ. ಇವರನ್ನು ಸಂಪತ್ ಕುಮಾರ್, ಚೊಕ್ಕಣ್ಣ, ವೆಂಕಟರಂಗ ಎನ್ನುವ ಹೆಸರುಗಳಲ್ಲಿ ಕರೆಯುತ್ತಿದ್ದರು. ಇವರು ಕನ್ನಡ ಮತ್ತು ತಮಿಳು ಭಾಷೆಗಳಲ್ಲಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ.
ಇವರು 1960 ಮತ್ತು 1970 ರ ಸಮಯದಲ್ಲಿ ಟಾಪ್ ನಟರಾಗಿದ್ದರೂ ಇವರ ಜೊತೆಗೆ ರಾಜ್ ಕುಮಾರ್ ಮತ್ತು ಉದಯಕುಮಾರ್ ಅವರು ಕೂಡ ಟಾಪ್ ಲೀಡಿಂಗ್ ನಟರಾಗಿ ಮಿಂಚಿದ್ದರು. ಕಲ್ಯಾಣ್ ಕುಮಾರ್, ರಾಜಕುಮಾರ್ ಮತ್ತು ಉದಯಕುಮಾರ್ ಅವರನ್ನು ಕುಮಾರ ತ್ರಯರು ಎಂದೇ ಕರೆಯುತ್ತಿದ್ದರು.
ಕಲ್ಯಾಣ್ ಕುಮಾರ್ ಅವರ ಪೋಷಕರಿಗೆ ಇವರು ವೈದ್ಯಕೀಯರು ಆಗಬೇಕೆನ್ನುವ ಆಸೆ ಇತ್ತು. ಆದರೆ ಇವರಿಗೆ ನಟನೆಯ ಮೇಲೆ ಆಸಕ್ತಿ ಇದ್ದ ಕಾರಣ ಕಲ್ಯಾಣ್ ಕುಮಾರ್ ಅವರು ಸಿನಿಮಾಗಳಲ್ಲಿ ನಟಿಸಿದ್ದರು. ಇದಕ್ಕಾಗಿ ಇವರು ಮುಂಬೈಗೆ ತೆರಳಿದರು.
ಇನ್ನೂ ಕಲ್ಯಾಣ್ ಕುಮಾರ್ ಅವರು 1954 ರಲ್ಲಿ ನಟಶೇಖರ ಎಂಬ ಕನ್ನಡ ಚಿತ್ರದ ಮೂಲಕ ತಮ್ಮ ಸಿನಿಮಾ ಕೆರಿಯರ್ ಶುರು ಮಾಡಿಕೊಂಡರು. ಇದಾದ ಮೇಲೆ ಇವರು ಸಾಕಷ್ಟು ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ. ಇನ್ನು ಇವರು ಕೊನೆಯದಾಗಿ ನಟಿಸಿದ ಚಿತ್ರ ಸಂಭ್ರಮ. ಇದು 1999 ರಲ್ಲಿ ಬಿಡುಗಡೆಯಾಯಿತು. ಕಲ್ಯಾಣ್ ಕುಮಾರ್ ಅವರು ಆಗಸ್ಟ್ 1 1999 ರಂದು ಕೆಲ ಆರೋಗ್ಯ ಸಮಸ್ಯೆಗಳಿಂದ ನಿಧನರಾದರು.
ಇವರು ರೇವತಿ ಅವರನ್ನು ವಿವಾಹ ಮಾಡಿಕೊಂಡಿದ್ದರು. ಇವರ ಕೂಡ ತೀರಿಕೊಂಡಿದ್ದಾರೆ. ಇನ್ನೂ ಕಲ್ಯಾಣ್ ಕುಮಾರ್ ಮತ್ತು ರೇವತಿ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಒಬ್ಬರು ಭರತ್ ಕಲ್ಯಾಣ್ ಮತ್ತೊಬ್ಬರು ದೀಪಕ್ ಕಲ್ಯಾಣ್. ಭರತ್ ಕಲ್ಯಾಣ್ ಅವರು ಜುಲೈ 21 1983 ರಂದು ಜನಿಸಿದ್ದಾರೆ.
ಇವರು 2010 ರಲ್ಲಿ ಬಿಡುಗಡೆಯಾದ ಕನ್ನಡದ ಯಕ್ಕಾ ಚಿತ್ರದಲ್ಲಿ ಅಭಿನಯ ಮಾಡಿದ್ದಾರೆ. ಇದರ ಜೊತೆಗೆ ತಮಿಳು ಮತ್ತು ಬೇರೆ ಭಾಷೆಯ ಧಾರಾವಾಹಿಗಳಲ್ಲಿ ಕೂಡ ನಟಿಸುತ್ತಿದ್ದಾರೆ. ಇವರು ನಟ ಎಂದು ಸಾಕಷ್ಟು ಜನರಿಗೆ ತಿಳಿದೇ ಇಲ್ಲ…..