ಸ್ನೇಹಿತರೆ ಕರಾಟೆ ಕಿಂಗ್ ಶಂಕರ್ ನಾಗ್ ಅವರ 1954 ರಲ್ಲಿ ಹೊನ್ನಾವರದ ಮಲ್ಲಾಪುರ ಎಂಬ ಪುಟ್ಟ ಹಳ್ಳಿಯಲ್ಲಿ ಜನಿಸಿದರು. ಇನ್ನು ಗಿರೀಶ್ ಕಾರ್ನಾಡ್ ಅವರ ಒಂದಾನೊಂದು ಕಾಲದಲ್ಲಿ ಚಿತ್ರಗಳನ್ನು ಮಾಡುವ ಮೂಲಕ ಬಣ್ಣದಲೋಕಕ್ಕೆ ಪಾದರ್ಪಣೆ ಮಾಡುತ್ತಾರೆ. ಅಷ್ಟೇ ಅಲ್ಲದೆ ಈ ಚಿತ್ರದ ಅಭಿನಯಕ್ಕಾಗಿ ಶಂಕರ್ ನಾಗ್ ಅವರಿಗೆ ರಾಷ್ಟ್ರಮಟ್ಟದ ಪ್ರಶಸ್ತಿಗಳು ಕೂಡ ಲಭಿಸಿತು. ಈ ಮೂಲಕ ಅತಿ ಕಡಿಮೆ ಸಮಯದಲ್ಲೆ ಕನ್ನಡ ಚಿತ್ರರಂಗದ ಪ್ರತಿಭಾವಂತ ನಟ ಎನಿಸಿಕೊಳ್ಳುತ್ತಾರೆ ನಟ ಶಂಕರ್ ನಾಗ್.
ಅಷ್ಟಲ್ಲದೆ ಕ್ರಿಯಾಶೀಲ ನಟ ಮಾತು ನಿರ್ದೇಶಕರಾಗಿದ್ದ ಶಂಕರ್ ನಾಗ್ ಅವರು ಕನ್ನಡ ಚಿತ್ರರಂಗದಲ್ಲಿ ಹೊಸ ಹೊಸ ಪ್ರಯತ್ನಗಳ ಮೂಲಕ ಹೊಸತನವನ್ನು ತಂದಿದ್ದರು. ಹೀಗಾಗಿ ಶಂಕರನಾಗ್ ಅವರು ಇಂದು ನಮ್ಮೊಂದಿಗಿಲ್ಲ ಎಂಬ ಸಂಗತಿಯನ್ನು ಅರಗಿಸಿಕೊಳ್ಳುವುದಕ್ಕೆ ಅಭಿಮಾನಿಗಳಿಗೆ ಬಹಳ ನೋವಾಗುತ್ತದೆ. ಇನ್ನು 12 ವರ್ಷಗಳ ಕಾಲ ಸಿನಿಮಾರಂಗದಲ್ಲಿ ಸಕ್ರಿಯರಾಗಿದ್ದ ನಟ ಶಂಕರ್ ನಾಗ್ ಅವರು ಅದಾಗಲೇ ಸುಮಾರು 90 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದರು.
ಅಷ್ಟೇ ಅಲ್ಲದೆ ತಮ್ಮ ಅವಧಿಯಲ್ಲಿ ನಾಟಕ ಮತ್ತು ರಂಗಭೂಮಿಗಳಿಗೆ ಹೆಚ್ಚು ಪ್ರೋತ್ಸಾಹ ನೀಡಿ ಗಮನ ಸೆಳೆದಿದ್ದರು. ಅಂತೆಯೇ ಆರ್ ಕೆ ನಾರಾಯಣ್ ಅವರ ಮಾಲ್ಗುಡಿ ಡೇಸ್ ಧಾರಾವಾಹಿಯನ್ನು ನಿರ್ದೇಶಿಸಿ ಭಾರತೀಯ ಕಿರುತೆರೆ ಲೋಕದಲ್ಲಿ ಹೊಸ ದಾಖಲೆ ಸೃಷ್ಟಿಸಿದ್ದರು. ಈ ಮೂಲಕ ದೇಶಾದ್ಯಂತ ಮನೆಮಾತಾಗಿದ್ದರು ನಟ ಶಂಕರ್ ನಾಗ್. ಇನ್ನು ಇಂತಹ ನಟ ಶಂಕರ್ ನಾಗ್ ಅವರು ಸೆಪ್ಟೆಂಬರ್ 30 1990 ರಂದು ದಾವಣಗೆರೆಯ ಆನಗೂಡು ಗ್ರಾಮದ ಬಳಿ ಕಾರು ಅಪಘಾತದಿಂದ ಸಾವಿಗೀಡಾದರು.
ಹೌದು, ಚಂದ್ರಶೇಖರ ಕಂಬಾರರ ಜೋಕುಮಾರ ಸ್ವಾಮಿ ಕಥೆಯನ್ನು ತಾವು ತೆರೆಯಮೇಲೆ ತರಲೇಬೇಕು ಎಂದು ತುಂಬಾನೇ ಶ್ರಮವಹಿಸಿ ಅದಕ್ಕಾಗಿಯೇ ಚಿತ್ರಕಥೆ ಎಲ್ಲವನ್ನು ರೆಡಿ ಮಾಡಿ ಕಲಾವಿದರ ಆಯ್ಕೆಯನ್ನು ಕೂಡ ಸಂಪೂರ್ಣಗೊಳಿಸಿದಂತಹ ಶಂಕರನಾಗ್ ಅವರಿಗೆ ಮಾರನೇ ದಿನ ಎನ್ನುವಾಗ ಹಣಕಾಸಿನ ತೊಂದರೆ ಬಂದಾಗ ತನ್ನಣ್ಣ ಅನಂತನಾಗ್ ಅವರನ್ನು ಕೇಳಿ ಅವರ ಮೂಲಕ ಫೈನಾನ್ಸಿಯರ್ರನ್ನು ಹುಡುಕಿಸಿ ಆ ಸಿನಿಮಾಗೆ ಹಣ ಹೊಂದಿಸುವ ಯೋಜನೆಯನ್ನು ಕೂಡ ಮಾಡಿದ್ದರು.
ಎಲ್ಲಾ ಸರಿಯಾಗಿ ನಾಳೆಯಿಂದಲೇ ಚಿತ್ರೀಕರಣ ಎಂದು ಶಂಕರನಾಗ್ ತುಂಬಾನೇ ಖುಷಿಯಿಂದಿರುತ್ತಾರೆ. ಅವರ ಖುಷಿಯನ್ನು ವಿಧಿಗೆ ಸಹಿಸಲಾಗಲಿಲ್ಲ ಅನಿಸುತ್ತದೆ. ಜೋಕುಮಾರ ಸ್ವಾಮಿ ನಾಟಕ ಸಿನಿಮಾ ಆಗುವ ಮೊದಲೇ ಶಂಕರನಾಗ್ ಇಹಲೋಕ ತ್ಯಜಿಸುತ್ತಾರೆ. ಹೌದು ತಮ್ಮ ಹೆಂಡತಿ ಅರುಂಧತಿ ಮತ್ತು ಮಗಳು ಕಾವ್ಯರೊಟ್ಟಿಗೆ ಶಂಕರ್ ನಾಗ್ ದಾವಣಗೆರೆಯಿಂದ ಧಾರವಾಡಗೆ ಕಾರಿನಲ್ಲಿ ಪಯಣ ಬೆಳೆಸುತ್ತಾರೆ. ಅನಂತ್ನಗ್ ಅವರು ಕೂಡ ಅದೇ ದಿನ ಕರೆ ಮಾಡಿ ರಾತ್ರಿ ಹೊತ್ತು ಪ್ರಯಾಣ ಮಾಡುವುದು ಸರಿಯಲ್ಲ, ಆದಷ್ಟೊ ಎಚ್ಚರಿಕೆಯಿಂದಿರು ಎಂದು ಹೇಳಿರುತ್ತಾರೆ.
ಆದರೆ ವಿಧಿಯ ಕೈವಾಡವೇ ಬೇರೆ ಇತ್ತು ಎನಿಸುತ್ತದೆ. ಕಂಬಿಗಳು ತುಂಬಿದಂತಹ ಲಾರಿಗೆ ಕಾರು ಡಿಕ್ಕಿ ಹೊಡೆದ ಕಾರಣ ಫ್ರಂಟ್ ಸೀಟಿನಲ್ಲಿದ್ದಂತಹ ಶಂಕರ್ ನಾಗ್ ಅವರಿಗೆ ಅಗಾಧವಾದ ಕಾಯಗಳು ಉಂಟಾಗಿ ಕೊನೆಯುಸಿರೆಳೆದರು. ಇನ್ನು ಇಂತಹ ಪ್ರತಿಭಾವಂತ ಮತ್ತು ಅದ್ಭುತ ನಟನನ್ನು ಕಳೆದುಕೊಂಡು ಕನ್ನಡ ಚಿತ್ರರಂಗ ಇಂದಿಗೂ ಮರಗುತ್ತಿರುವುದು ಮಾತ್ರ ಸುಳ್ಳಲ್ಲ. ಸ್ನೇಹಿತರೆ ಈ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಪ್ಪದೆ ನಮಗೆ ಕಮೆಂಟ್ ಮಾಡಿ ತಿಳಿಸಿ ಹಾಗೂ ಈ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ಒಂದು ಲೈಕ್ ಮಾಡಿ.