Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ನಟ ಅರ್ಜುನ್ ಸರ್ಜಾ ಮನೆ ಹೇಗಿದೆ ಗೊತ್ತಾ?? ಮೊದಲ ಬಾರಿಗೆ ಇಲ್ಲಿದೆ ನೋಡಿ!!

0

ದಕ್ಷಿಣ ಭಾರತದ ಖ್ಯಾತ ನಟ ಅರ್ಜುನ್ ಸರ್ಜಾ ಅವರನ್ನು ಆಕ್ಷನ್ ಕಿಂಗ್ ಎಂದೇ ಕರೆಯುತ್ತಾರೆ. ಇವರು ಆಗಸ್ಟ್ 15 1962 ರಂದು ಮಧುಗಿರಿಯಲ್ಲಿ ಜನಿಸಿದರು. ಇವರ ತಂದೆಯ ಹೆಸರು ಶಕ್ತಿಪ್ರಸಾದ್ ಮತ್ತು ತಾಯಿಯ ಹೆಸರು ಲಕ್ಷ್ಮಿ ದೇವಿ. ಇವರ ತಂದೆ ಕೂಡ ಆಗಿನ ಕಾಲದ ಖ್ಯಾತ ನಟರಾಗಿದ್ದರು. ಇನ್ನೂ ಅರ್ಜುನ್ ಸರ್ಜಾ ಅವರು ತಮಿಳು ಕನ್ನಡ ಹಿಂದಿ ಮಲಯಾಳಂ ಮತ್ತು ತೆಲುಗು ಭಾಷೆಗಳಲ್ಲಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿ ತುಂಬಾನೇ ಜನಪ್ರಿಯರಾಗಿದ್ದಾರೆ.

ಅರ್ಜುನ್ ಸರ್ಜಾ ಅವರು ಕೇವಲ ನಟ ಮಾತ್ರವಲ್ಲ ಇವರು ನಿರ್ದೇಶಕರು ನಿರ್ಮಾಪಕರು ಮತ್ತು ಡಿಸ್ಟ್ರಿಬ್ಯೂಟರ್ ಕೂಡ ಹೌದು. ಇದರ ಜೊತೆಗೆ ಕೆಲ ಹಾಡುಗಳನ್ನು ಕೂಡ ಇವರು ಹಾಡಿದ್ದಾರೆ. ಅರ್ಜುನ್ ಸರ್ಜಾ ಅವರು 1981 ರಲ್ಲಿ ಸಿಂಹದ ಮರಿ ಸೈನ್ಯ ಎನ್ನುವ ಕನ್ನಡ ಚಿತ್ರದ ಮೂಲಕ ಮೊದಲನೆಯದಾಗಿ ಬೆಳ್ಳಿತೆರೆಯ ಮೇಲೆ ಕಾಲಿಟ್ಟರು.

ಇದಾದ ಮೇಲೆ ಆಶಾ, ಪ್ರೇಮಯುದ್ಧ, ಪೂಜಾಫಲ, ಪ್ರೇಮ ಜ್ಯೋತಿ, ಮಳೆ ಬಂತು ಮಳೆ, ಪ್ರಳಯಾಂತಕ, ನಾ ನಿನ್ನ ಪ್ರೀತಿಸುವೆ, ಪ್ರತಾಪ್, ಪೊಲೀಸ್ ಲಾಕಪ್, ಸ್ನೇಹದ ಕಡಲಲ್ಲಿ, ಶಿವನಾಗ, ಅಳಿಮಯ್ಯ, ಶ್ರೀ ಮಂಜುನಾಥ, ವಾಯುಪುತ್ರ, ಪ್ರಸಾದ್, ಅಟ್ಟಹಾಸ, ಅಭಿಮನ್ಯು, ವಿಸ್ಮಯ, ಪ್ರೇಮಬರಹ, ಕುರುಕ್ಷೇತ್ರ, ಒಪ್ಪಂದ ಎನ್ನುವ ಕನ್ನಡ ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ.

ಅರ್ಜುನ್ ಸರ್ಜಾ ಅವರು ಕರ್ನಾಟಕದಲ್ಲಿ ಹುಟ್ಟಿದರು ಕೂಡ ಇವರ ಹೆಚ್ಚು ಜನಪ್ರಿಯ ಆಗಿದ್ದು ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ. ಇನ್ನು ಅರ್ಜುನ್ ಸರ್ಜಾ ಅವರ ಸೋದರ ಅಳಿಯಂದಿರು ಚಿರಂಜೀವಿ ಸರ್ಜಾ ಮತ್ತು ಧ್ರುವ ಸರ್ಜಾ ಅವರು ಕೂಡ ಕನ್ನಡದಲ್ಲಿ ಖ್ಯಾತ ನಟರಾಗಿದ್ದು ಇದರಲ್ಲಿ ಚಿರು ಸರ್ಜಾ ಅವರು ಜೂನ್ 7 2020 ರಂದು ಮರಣ ಹೊಂದಿದರು.

ಇನ್ನು ಅರ್ಜುನ್ ಸರ್ಜಾ ಅವರು 1988 ರಲ್ಲಿ ನಿವೇದಿತಾ ಅವರನ್ನು ಮಾಡಿಕೊಂಡಿದ್ದಾರೆ. ನಿವೇದಿತಾ ಅವರು ಕೂಡ 1986 ರಲ್ಲಿ ರಥಸಪ್ತಮಿ ಎನ್ನುವ ಕನ್ನಡ ಚಿತ್ರದಲ್ಲಿ ಅಭಿನಯಿಸಿದ್ದಾರೆ. ನಿವೇದಿತಾ ಅವರ ತಂದೆ ರಾಜೇಶ್ ಅವರು ಕೂಡ ದೊಡ್ಡ ನಟರಾಗಿದ್ದರು. ಇನ್ನೂ ಇವರಿಗೆ ಐಶ್ವರ್ಯ ಅರ್ಜುನ್ ಮತ್ತು ಅಂಜನಾ ಸರ್ಜಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

ಇದರಲ್ಲಿ ಐಶ್ವರ್ಯ ಅರ್ಜುನ್ ಅವರು ಪ್ರೇಮ ಬರಹ ಎನ್ನುವ ಕನ್ನಡ ಚಿತ್ರದಲ್ಲಿ ನಟಿಸಿದ್ದಾರೆ. ಇದರ ಜೊತೆಗೆ 2 ತಮಿಳು ಚಿತ್ರಗಳನ್ನು ಕೂಡ ಅಭಿನಯ ಮಾಡಿದ್ದಾರೆ. ನಟ ಅರ್ಜುನ್ ಸರ್ಜಾ ಅವರ ಮನೆ ಹೇಗಿದೆ ಎಂದು ಇಲ್ಲಿ ನೀವು ನೋಡಬಹುದು….

Leave A Reply