ಕನ್ನಡದ ಖ್ಯಾತ ನಟ ಅಭಿಜಿತ್ ಅವರು ಜುಲೈ 30 1963 ರಂದು ಚಿತ್ರದುರ್ಗದಲ್ಲಿ ಜನಿಸಿದರು. ಇವರ ತಂದೆಯ ಹೆಸರು ಮಾಧವ ರಾವ್ ಮತ್ತು ತಾಯಿಯ ಹೆಸರು ನಂಜಮ್ಮ. ಇವರು 80, 90 ಮತ್ತು 2000ರ ಸಮಯದಲ್ಲಿ ಟಾಪ್ ಲೀಡಿಂಗ್ ನಟರಾಗಿ ಮಿಂಚಿದ್ದಾರೆ. ಇವರು ನಾಯಕ ನಟರಾಗಿ ನಟಿಸುವ ಮುನ್ನ ಕೆಲ ಸಿನಿಮಾಗಳಲ್ಲಿ ಮೊದಲು ವಿಲನ್ ಪಾತ್ರಗಳಲ್ಲಿ ಅಭಿನಯ ಮಾಡಿದ್ದಾರೆಮ
ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಇವರನ್ನು ಸಮರಸಿಂಹ, ಡೇರ್ ಕಿಂಗ್, ಅಭಿನವ ಚತುರ, ಫ್ಯಾಮಿಲಿ ಸ್ಟಾರ್ ಎನ್ನುವ ಈ ಹೆಸರುಗಳಿಂದ ಕರೆಯುತ್ತಾರೆ. ಇನ್ನು ಅಭಿಜಿತ್ ಅವರು 1990 ರಲ್ಲಿ ಕಾಲೇಜ್ ಹೀರೋ ಎನ್ನುವ ಕನ್ನಡ ಚಿತ್ರದಲ್ಲಿ ವಿಲನ್ ಪಾತ್ರಗಳಲ್ಲಿ ಮೊದಲನೆಯದಾಗಿ ನಟಿಸಿದ್ದಾರೆ. ಇದಾದ ಮೇಲೆ ಸಾಕಷ್ಟು ಚಿತ್ರಗಳಲ್ಲಿ ವಿಲನ್ ಪಾತ್ರದಲ್ಲಿ ನಟಿಸಿದ್ದಾರೆ ಎಂದು ಹೇಳಬಹುದು.
ಮಾಂಗಲ್ಯ, ಚೈತ್ರದ ಪ್ರೇಮಾಂಜಲಿ, ಸಿಂಧೂರ ತಿಲಕ, ಮನಮೆಚ್ಚಿದ ಸೊಸೆ, ಜೀವನಚೈತ್ರ, ಸರ್ವರ್ ಸೋಮಣ್ಣ, ಭೂತಯ್ಯನ ಮಕ್ಕಳು, ರಂಜಿತಾ, ರಶ್ಮಿ, ಮುದ್ದಿನ ಮಾವ, ತುಂಬಿದ ಮನೆ, ಓಂ ನಮ ಶಿವಾಯ, ಆಂತರ್ಯ, ಯಜಮಾನ, ಕೋಟಿಗೊಬ್ಬ, ಸಮರಸಿಂಹ ನಾಯಕ, ವೈರಿ, ವಿಷ್ಣು, ಅಮರೇಶ್ವರ ಮಹಾತ್ಮೆ, ಅಭಿಮನ್ಯು, ಸಿಬಿಐ ಸತ್ಯ, ಶಿವಯೋಗಿ, ಶ್ರೀ ಪುಟ್ಟಯ್ಯಜ್ಜ ಇನ್ನೂ ಸಾಕಷ್ಟು ಕನ್ನಡ ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ.
ಇದರ ಜೊತೆಗೆ ಇವರು ಸಮರಸಿಂಹ ನಾಯಕ, ಜೋಡಿ ನಂಬರ್ 1, ವಿಷ್ಣು ಮತ್ತು ಪಂಟ ಚಿತ್ರಗಳನ್ನು ನಿರ್ಮಾಣ ಸಹ ಮಾಡಿದ್ದಾರೆ. ಹಾಗೆಯೇ ಅಭಿಜಿತ್ ಅವರು ಪ್ರಸ್ತುತ ಕಿರುತೆರೆಯಲ್ಲೂ ಕೂಡ ಸಕ್ರಿಯರಾಗಿದ್ದಾರೆ. ಹೌದು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸತ್ಯ ಸೀರಿಯಲ್ ನಲ್ಲಿ ಅಭಿಜಿತ್ ಅವರು ಅಭಿನಯ ಮಾಡುತ್ತಿದ್ದಾರೆ.
ಇನ್ನೂ ಅಭಿಜಿತ್ ಅವರು ಮಾನ್ಸಿ ಶ್ರೀವಾಸ್ತವ ಎನ್ನುವವರನ್ನು ವಿವಾಹ ಮಾಡಿಕೊಂಡಿದ್ದಾರೆ. ಇವರಿಗೆ ಶಿಲ್ಪಶ್ರೀ, ಬಾಲಾಜಿ ಮತ್ತು ಕಾರ್ತಿಕೇಯ ಎನ್ನುವ 3 ಜನ ಮಕ್ಕಳಿದ್ದಾರೆ. ನಟ ಅಭಿಜಿತ್ ಅವರ ಮನೆಯನ್ನು ನೀವು ನೋಡಿಲ್ಲ ಎಂದರೆ ಇಲ್ಲಿರುವ ದೃಶ್ಯಗಳಲ್ಲಿ ನೋಡಬಹುದು. ಅಭಿಜಿತ್ ಅವರ ಮನೆಯ ಒಳಾಂಗಣ ಮತ್ತು ಹೊರಾಂಗಣ ತುಂಬ ಸೊಗಸಾಗಿ ಇದೆ……