ದಕ್ಷಿಣ ಭಾರತದ ಖ್ಯಾತ ನಟಿ ಸುಹಾಸಿನಿ ಅವರು ಆಗಸ್ಟ್ 15 1961 ರಂದು ಚೆನ್ನೈನಲ್ಲಿ ಜನಿಸಿದರು. ಇವರ ತಂದೆಯ ಹೆಸರು ಚಾರುಹಾಸನ್ ಮತ್ತು ತಾಯಿಯ ಹೆಸರು ಕೋಮಲಂ ಎಂದು. ಸುಹಾಸಿನಿ ಅವರು ತಮಿಳು ತೆಲುಗು ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇವರು 1980 ಮತ್ತು 1990 ರ ಸಮಯದಲ್ಲಿ ಟಾಪ್ ಲೀಡಿಂಗ್ ನಟಿಯಾಗಿದ್ದರು.
ಹಾಗೆಯೇ ಇವರು ಬಹುತೇಕ ಎಲ್ಲ ದೊಡ್ಡ ದೊಡ್ಡ ನಟರ ಜೊತೆಗೂ ಕೂಡ ಅಭಿನಯ ಮಾಡಿದ್ದಾರೆ. ಸುಹಾಸಿನಿ ಅವರು ಮೊದಲು 1980 ರಲ್ಲಿ ತಮಿಳಿನಲ್ಲಿ ನೆಂಜತೈ ಕಿಲ್ಲತೇ ಎನ್ನುವ ಚಿತ್ರದ ಮೂಲಕ ಮೊದಲನೆಯದಾಗಿ ಬೆಳ್ಳಿತೆರೆಯ ಮೇಲೆ ಕಾಲಿಟ್ಟರು. ಇನ್ನೂ ನಮ್ಮ ಕನ್ನಡದಲ್ಲಿ ನೋಡಿದರೆ 1983 ರಂದು ಬೆಂಕಿಯಲ್ಲಿ ಅರಳಿದ ಹೂವು ಚಿತ್ರದಲ್ಲಿ ನಟಿಸಿ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದರು.
ಇದಾದ ಮೇಲೆ ಬಂಧನ, ಹೊಸ ನೀರು, ಸುಪ್ರಭಾತ, ಮುತ್ತಿನಹಾರ, ಉಷಾ, ಹಿಮಪಾತ, ಅಮೃತವರ್ಷಣಿ, ಗಂಗಾ ಯಮುನಾ, ಓ ಗುಲಾಬಿಯೇ, ಸಂಜು ವೆಡ್ಸ್ ಗೀತಾ, ಮತ್ತೊಂದ್ ಮದುವೇನಾ, ಮೈನಾ, ಮಾಸ್ಟರ್ ಪೀಸ್, ವಿರಾಟ್, ಮಾಸ್ತಿಗುಡಿ, ವಿಸ್ಮಯ, ಪ್ರೇಮಬರಹ, ಯಾಣ ಇನ್ನೂ ಸಾಕಷ್ಟು ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಸುಹಾಸಿನಿ ಅವರು ಕನ್ನಡದಲ್ಲಿ ಡಾ ವಿಷ್ಣುವರ್ಧನ್, ಡಾ ರಾಜ್ ಕುಮಾರ್, ಅನಂತ್ ನಾಗ್ ಇನ್ನೂ ಸಾಕಷ್ಟು ದೊಡ್ಡ ದೊಡ್ಡ ನಟರ ಜೊತೆಗೆ ನಟಿಸಿದ್ದಾರೆ. ಸುಹಾಸಿನಿಯವರು ಕೇವಲ ನಟಿ ಮಾತ್ರವಲ್ಲ ಈಕೆ ನಿರ್ದೇಶಕಿ ನಿರ್ಮಾಪಕಿ ಕೂಡ ಹೌದು. ಇವರು ಕೆಲ ಚಿತ್ರಗಳನ್ನು ನಿರ್ದೇಶನ ಮತ್ತು ನಿರ್ಮಾಣ ಸಹ ಮಾಡಿದ್ದಾರೆ.
ಇನ್ನೂ ಸುಹಾಸಿನಿ ಅವರಿಗೆ ಕಮಲ್ ಹಾಸನ್ ಅವರು ಸಂಬಂಧದಲ್ಲಿ ಅಂಕಲ್ ಆಗಬೇಕು. ಇವರಿಗೆ ಸಿನಿಮಾದ ಬ್ಯಾಕ್ ಗ್ರೌಂಡ್ ಇದ್ದರೂ ಕೂಡ ತಮ್ಮ ಸ್ವಂತ ಪರಿಶ್ರಮದಿಂದಲೇ ಸಿನಿಮಾ ರಂಗಕ್ಕೆ ಬಂದು ಇಷ್ಟರ ಮಟ್ಟಿಗೆ ಬೆಳೆದಿದ್ದಾರೆ. ಇವರು ಮೊದಲು ಸಾಕಷ್ಟು ಸಿನಿಮಾಗಳಲ್ಲಿ ನಟಿಯಾಗಿ ನಟನೆ ಮಾಡುತ್ತಿದ್ದರು. ಈಗ ಇವರು ಸಾಕಷ್ಟು ಪೋಷಕ ಪಾತ್ರಗಳಲ್ಲಿ ಕಾಣಿಸುತ್ತಿದ್ದಾರೆ.
ಹಾಗೆಯೇ ಸುಹಾಸಿನಿ ಅವರು 1988 ರಂದು ಖ್ಯಾತ ನಿರ್ದೇಶಕರಾಗಿರುವ ಮಣಿರತ್ನಂ ಎನ್ನುವವರನ್ನು ವಿವಾಹ ಮಾಡಿಕೊಂಡಿದ್ದಾರೆ. ಮಣಿರತ್ನಂ ಅವರು ತಮಿಳು ಭಾಷೆಯ ಖ್ಯಾತ ನಿರ್ದೇಶಕರಾಗಿದ್ದು ಸಾಕಷ್ಟು ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. ಇವರಿಗೆ ನಂದನ್ ಮಣಿರತ್ನಂ ಎನ್ನುವ ಮಗ ಕೂಡ ಇದ್ದಾರೆ. ಇನ್ನೂ ಇಲ್ಲಿ ನೀವು ಸುಹಾಸಿನಿ ಅವರ ಮನೆ ಹೇಗಿದೆ ಎಂದು ನೋಡಬಹುದು….