Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ನಟಿ ಸುಹಾಸಿನಿ ಅವರ ಗಂಡ ಮತ್ತು ಮಗನನ್ನು ನೋಡಿದ್ದೀರಾ.. ಇವರು ಕೂಡ ತುಂಬಾ ಫೇಮಸ್..!!

0

ದಕ್ಷಿಣ ಭಾರತದ ಖ್ಯಾತ ನಟಿ ಸುಹಾಸಿನಿ ಅವರು ಆಗಸ್ಟ್ 15 1961 ರಂದು ಜನಿಸಿದರು. ಇವರ ತಂದೆಯ ಹೆಸರು ಚಾರುಹಾಸನ್ ಮತ್ತು ತಾಯಿಯ ಹೆಸರು ಕೋಮಲಂ. ನಟ ಕಮಲ್ ಹಾಸನ್ ಅವರು ಸುಹಾಸಿನಿ ಅವರಿಗೆ ಅಂಕಲ್ ಆಗಬೇಕು ಸುಹಾಸಿನಿ ಅವರು ತಮಿಳು ತೆಲುಗು ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಈಕೆ ಕೇವಲ ನಟಿ ಮಾತ್ರವಲ್ಲ ಸಿನಿಮಾ ನಿರ್ದೇಶಕಿ ನಿರ್ಮಾಪಕಿ ಮತ್ತು ರೈಟರ್ ಕೂಡ ಹೌದು.

ಇವರು ಮೊದಲು 1980 ರಲ್ಲಿ ನೆಂಜತೈ ಕಿಲ್ಲತೇ ಎನ್ನುವ ತಮಿಳು ಸಿನಿಮಾದ ಮೂಲಕ ತಮ್ಮ ಸಿನಿಮಾ ಜೀವನವನ್ನು ಶುರು ಮಾಡಿಕೊಂಡರು. ಇನ್ನು ನಮ್ಮ ಕನ್ನಡದಲ್ಲಿ ನೋಡಿದರೆ 1983 ರಲ್ಲಿ ಬೆಂಕಿಯಲ್ಲಿ ಅರಳಿದ ಹೂವು ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದರು.

ತದನಂತರ ಬಂಧನ, ಸುಪ್ರಭಾತ, ಹಿಮಪಾತ, ಗಂಗಾ ಯಮುನಾ, ಯಾರಿಗೆ ಸಾಲುತ್ತೆ ಸಂಬಳ, ಮಾತಾಡ್ ಮಾತಾಡು ಮಲ್ಲಿಗೆ, ಎರಡನೇ ಮದುವೆ, ಸಂಜು ವೆಡ್ಸ್ ಗೀತಾ, ಮೈನಾ, ವಿರಾಟ್, ಪ್ರೇಮಬರಹ, ಅಂಬಿ ನಿಂಗ್ ವಯಸ್ಸಾಯ್ತೋ, ಆಯುಷ್ಮಾನ್ ಭವ ಇನ್ನೂ ಸಾಕಷ್ಟು ಕನ್ನಡ ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ.

ಇವರು ಕನ್ನಡದಲ್ಲಿ ಸುಮಾರು 30 ಗಿಂತ ಹೆಚ್ಚು ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ. ಇದರ ಜೊತೆಗೆ ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಕೂಡ ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ನಟಿ ಸುಹಾಸಿನಿ ಅವರು ತಮಿಳು ಖ್ಯಾತ ನಿರ್ದೇಶಕ ಆಗಿರುವ ಮಣಿರತ್ನಂ ಎನ್ನುವವರನ್ನು ಆಗಸ್ಟ್ 26 1988 ರಂದು ವಿವಾಹ ಮಾಡಿಕೊಂಡಿದ್ದಾರೆ. ಇವರಿಗೆ ನಂದನ್ ಎನ್ನುವ ಮಗ ಕೂಡ ಇದ್ದಾರೆ.

ಇನ್ನು ಸುಹಾಸಿನಿ ಅವರ ಪತಿ ಮಣಿರತ್ನಂ ಅವರು ಕೂಡ ತಮಿಳಿನಲ್ಲಿ ಖ್ಯಾತ ನಿರ್ದೇಶಕರಾಗಿ ಸಾಕಷ್ಟು ಚಿತ್ರಗಳನ್ನು ನಿರ್ದೇಶನ ಮಾಡಿದ್ದಾರೆ. ಇದರ ಜೊತೆಗೆ ಕನ್ನಡ ಮಲಯಾಳಂ ತೆಲುಗು ಚಿತ್ರಗಳನ್ನು ಕೂಡ ನಿರ್ದೇಶಿಸಿದ್ದಾರೆ. ಇವರು ಮೊದಲು 1983 ರಲ್ಲಿ ಪಲ್ಲವಿ ಅನುಪಲ್ಲವಿ ಎನ್ನುವ ಕನ್ನಡ ಚಿತ್ರವನ್ನು ಮೊದಲನೆಯದಾಗಿ ಬರೆದು ನಿರ್ದೇಶನ ಮಾಡಿದ್ದಾರೆ. ತದನಂತರ ಸಾಕಷ್ಟು ತಮಿಳು ಮತ್ತು ತೆಲುಗು ಚಿತ್ರಗಳನ್ನು ನಿರ್ದೇಶಿಸಿದ್ದಾರೆ…..

Leave A Reply