ಕನ್ನಡದ ಖ್ಯಾತ ನಟಿ ಸಂಜನಾ ಗಲ್ರಾಣಿ ಅವರ ತಂಗಿ ನಿಕ್ಕಿ ಗಲ್ರಾಣಿ ಅವರು ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಖ್ಯಾತ ನಟರಾಗಿರುವ ಆದಿ ಪಿನಿಶೆಟ್ಟಿ ಅವರ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಹೌದು ಇವರ ನಿಶ್ಚಿತಾರ್ಥ ತುಂಬ ಅದ್ದೂರಿಯಾಗಿ ನಡೆಯಿತು. ಈ ಕಾರ್ಯಕ್ರಮಕ್ಕೆ ಬಂಧು ಮಿತ್ರರು ಕಲಾವಿದರು ಸ್ನೇಹಿತರು ಆಗಮನ ಮಾಡಿದರು.
ಅದರಲ್ಲೂ ತೆಲುಗಿನ ಖ್ಯಾತ ನಟ ನಾನಿ ಅವರು ಬಂದಿರುವುದು ಒಂದು ವಿಶೇಷ ಎಂದು ಹೇಳಬಹುದು. ಇನ್ನೂ ಆದಿ ಪಿನಿಶೆಟ್ಟಿ ಅವರು ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ಒಳ್ಳೆಯ ಹೆಸರನ್ನು ಸಂಪಾದನೆ ಮಾಡಿಕೊಂಡಿದ್ದಾರೆ. ಇವರು ಡಿಸೆಂಬರ್ 14 1982 ರಂದು ಜನಿಸಿದ್ದಾರೆ. ಇವರ ತಂದೆಯ ಹೆಸರು ರವಿರಾಜ ಶೆಟ್ಟಿ ಮತ್ತು ತಾಯಿಯ ಹೆಸರು ರಾಧಾ ರಾಣಿ ಎಂದು.
ಆದಿ ಪಿನಿಶೆಟ್ಟಿ ಅವರ ತಂದೆ ರವಿರಾಜ್ ಅವರು ಸುಮಾರು 50 ಕ್ಕಿಂತ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಇನ್ನೂ ಆದಿ ಪಿನಿಶೆಟ್ಟಿ ಅವರು 2006 ರಲ್ಲಿ ತೆಲುಗಿನ ಒಕ ವಿ ಚಿತ್ರಂ ಎನ್ನುವ ಚಿತ್ರದ ಮೂಲಕ ಬೆಳ್ಳಿತೆರೆಯ ಮೇಲೆ ಕಾಣಿಸಿದರು. ಇದಾದ ಮೇಲೆ ಸಾಕಷ್ಟು ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ. ಅದರಲ್ಲೂ ತೆಲುಗಿನಲ್ಲಿ ಸರೈನೋಡು, ರಂಗಸ್ಥಳಂ, ಯೂಟರ್ನ್ ಸಿನಿಮಾಗಳು ಇವರನ್ನು ಹೆಚ್ಚು ಜನಪ್ರಿಯರನ್ನಾಗಿ ಮಾಡಿತು.
ಇನ್ನೂ ನಿಕ್ಕಿ ಗಲ್ರಾಣಿ ಅವರು ತಮಿಳು ಮತ್ತು ಮಲಯಾಳಂ ಚಿತ್ರಗಳಲ್ಲಿ ಜನಪ್ರಿಯತೆಯನ್ನು ಸಾಧಿಸಿಕೊಂಡಿದ್ದಾರೆ. ಇವರು ಜನವರಿ 3 1992 ರಂದು ಬೆಂಗಳೂರಿನಲ್ಲಿ ಜನಿಸಿದ್ದಾರೆ.
ಇವರ ತಂದೆಯ ಹೆಸರು ಮನೋಹರ್ ಗಲ್ರಾಣಿ ಮತ್ತು ತಾಯಿಯ ಹೆಸರು ರೇಷ್ಮಾ ಗಲ್ರಾಣಿ ಎಂದು. ನಿಕ್ಕಿ ಗಲ್ರಾಣಿ ಅವರು 2014 ರಲ್ಲಿ 1983 ಎನ್ನುವ ಮಲಯಾಳಂ ಚಿತ್ರದ ಮೂಲಕ ಮೊದಲನೆಯದಾಗಿ ಬೆಳ್ಳಿತೆರೆಯ ಮೇಲೆ ಕಾಣಿಸಿದರು.
ಇನ್ನೂ ನಮ್ಮ ಕನ್ನಡದಲ್ಲಿ ಚಿರಂಜೀವಿ ಸರ್ಜಾ ಅವರ ಜೊತೆಗೆ ಅಜಿತ್ ಚಿತ್ರದಲ್ಲಿ ನಟಿಸಿದ್ದಾರೆ. ಇದಾದ ಮೇಲೆ ಓ ಪ್ರೇಮವೇ ಎನ್ನುವ ಕನ್ನಡ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಇವರು ಸಾಕಷ್ಟು ಮಲಯಾಳಂ ಮತ್ತು ತಮಿಳು ಭಾಷೆಗಳ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ ಎಂದು ಹೇಳಬಹುದು.
ಈ ಇಬ್ಬರು ಖ್ಯಾತ ನಟ ನಟಿ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು ಇವರ ಅಭಿಮಾನಿಗಳಂತೂ ಭಾರಿ ಮೆಚ್ಚುಗೆಯನ್ನು ವ್ಯಕ್ತ ಪಡಿಸಿ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ…..