Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ನಟಿ ಸಂಜನಾ ತಂಗಿ ನಿಕ್ಕಿ ಗಲ್ರಾಣಿ ಅವರನ್ನು ಮದುವೆಯಾಗಿದ್ದು ಯಾರು ಗೊತ್ತಾ.. ಇವರು ಕೂಡ ಖ್ಯಾತ ನಟ..!!

0

ಕನ್ನಡದ ಖ್ಯಾತ ನಟಿ ಸಂಜನಾ ಅವರಿಗೆ ನಿಕ್ಕಿ ಗಲ್ರಾಣಿ ಅವರು ಸ್ವಂತ ತಂಗಿ ಆಗಬೇಕು. ನಿಕ್ಕಿ ಗಲ್ರಾಣಿ ಅವರು ಕೂಡ ಕನ್ನಡ ತಮಿಳು ತೆಲುಗು ಭಾಷೆಗಳಲ್ಲಿ ಚಲನಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ. ಇನ್ನೂ ನಿಕ್ಕಿ ಗಲ್ರಾಣಿ ಅವರನ್ನು ವರಿಸಿದ ಹುಡುಗ ಯಾರು ಗೊತ್ತಾ. ಈತ ಕೂಡ ಟಾಲಿವುಡ್ ನ ಖ್ಯಾತ ನಟರಾಗಿ ಗುರುತಿಸಿಕೊಂಡಿದ್ದಾರೆ. ಅವರು ಬೇರೆ ಯಾರೂ ಅಲ್ಲ ತೆಲುಗಿನ ಜನಪ್ರಿಯ ನಟ ಆದಿ ಪಿನಿಶೆಟ್ಟಿ.

ಇತ್ತೀಚೆಗಷ್ಟೇ ನಟಿ ನಿಕ್ಕಿ ಗಲ್ರಾನಿ ಮತ್ತು ಆದಿ ಪಿನಿಶೆಟ್ಟಿ ಅವರು ತಮ್ಮ ನಿಶ್ಚಿತಾರ್ಥವನ್ನು ತುಂಬ ಅದ್ದೂರಿಯಾಗಿ ಮಾಡಿಕೊಂಡಿದ್ದರು. ಇದೀಗ ಮೇ 18 2022 ರಂದು ಚೆನ್ನೈನಲ್ಲಿ ಇವರಿಬ್ಬರು ವಿವಾಹ ಮಾಡಿಕೊಂಡು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಆದಿ ಪಿನಿಶೆಟ್ಟಿ ಅವರು ತೆಲುಗು ಚಿತ್ರರಂಗದಲ್ಲಿ ಖ್ಯಾತ ನಟರಾಗಿ ಗುರುತಿಸಿಕೊಂಡಿದ್ದಾರೆ ಮತ್ತು ನಿಕ್ಕಿ ಗಲ್ರಾಣಿ ಅವರ ಕೂಡ ಕನ್ನಡ ತಮಿಳು ಮಲಯಾಳಂ ಚಿತ್ರಗಳಲ್ಲಿ ಹೆಸರನ್ನು ಸಂಪಾದನೆ ಮಾಡಿಕೊಂಡಿದ್ದಾರೆ. ನಿಕ್ಕಿ ಗಲ್ರಾಣಿ ಅವರು ಜನವರಿ 3 1992 ರಂದು ಬೆಂಗಳೂರಿನಲ್ಲಿ ಜನಿಸಿದರು. ಇವರ ತಂದೆಯ ಹೆಸರು ಮನೋಹರ್ ಗಲ್ರಾಣಿ ಮತ್ತು ತಾಯಿಯ ಹೆಸರು ರೇಷ್ಮ ಗಲ್ರಾಣಿ.

ಇನ್ನು ಸಿನಿಮಾ ವಿಷಯಕ್ಕೆ ಬಂದರೆ ನಿಕ್ಕಿ ಗಲ್ರಾಣಿ ಅವರು ಮಲಯಾಳಂ ಕನ್ನಡ ತೆಲುಗು ತಮಿಳು ಭಾಷೆಗಳಲ್ಲಿ ಸಾಕಷ್ಟು ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ. ಮೊದಲು ಇವರು 2014 ರಲ್ಲಿ ಬಿಡುಗಡೆಯಾದ ಮಲಯಾಳಂನ 1983 ಎನ್ನುವ ಚಿತ್ರದ ಮೂಲಕ ಸಿನಿ ಇಂಡಸ್ಟ್ರಿಗೆ ಪದಾರ್ಪಣೆ ಮಾಡಿದರು.

 

ಇನ್ನು ನಮ್ಮ ಕನ್ನಡದಲ್ಲಿ ನೋಡಿದರೆ 2014 ರಲ್ಲಿ ಚಿರಂಜೀವಿ ಸರ್ಜಾ ಅವರ ಜೊತೆಗೆ ಅಜಿತ್ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪ್ರವೇಶ ಮಾಡಿದರು. ತದನಂತರ ಜಂಬೂಸವಾರಿ, ಸಿದ್ಧಾರ್ಥ, ಓ ಪ್ರೇಮವೆ ಎನ್ನುವ ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇವರು ಹೆಚ್ಚಾಗಿ ತಮಿಳು ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ ಎಂದು ಹೇಳಬಹುದು.

ಹಾಗೆಯೇ ಆದಿ ಪಿನಿಶೆಟ್ಟಿ ಅವರು 2006 ರಲ್ಲಿ ತೆಲುಗಿನ ಒಕ ವಿ ಚಿತ್ರಂ ಎನ್ನುವ ಚಿತ್ರದ ಮೂಲಕ ಸಿನಿ ಇಂಡಸ್ಟ್ರಿಗೆ ಪದಾರ್ಪಣೆ ಮಾಡಿದರು. ಇವರು ತೆಲುಗು ಅಲ್ಲದೆ ಕೆಲ ತಮಿಳು ಚಿತ್ರಗಳಲ್ಲೂ ಅಭಿನಯ ಮಾಡಿದ್ದಾರೆ
ಆದಿ ಪಿನಿಶೆಟ್ಟಿ ಅವರು ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಸುಮಾರು 20 ಕ್ಕಿಂತ ಹೆಚ್ಚು ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ.

ಇದೀಗ ನಿಕ್ಕಿ ಗಲ್ರಾಣಿ ಮತ್ತು ಆದಿ ಪಿನಿಶೆಟ್ಟಿ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಇವರಿಬ್ಬರ ಅಭಿಮಾನಿಗಳು ಮದುವೆಯ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ…..

Leave A Reply