ನಟಿ ಶ್ರುತಿ ಅವರು ತಮ್ಮ ಕುಟುಂಬಕ್ಕೆ ಹೆಚ್ಚು ಸಮಯವನ್ನು ಕೊಡುತ್ತಾರೆ. ಈಗಾಗಲೇ ಇವರು ತಮ್ಮ ಇಬ್ಬರು ತಾಯಂದಿರ ಜೊತೆಗೆ ಇರುವ ಸಾಕಷ್ಟು ಫೋಟೋಗಳು ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾ ಇರುತ್ತಾರೆ. ಇನ್ನು ಶ್ರುತಿ ಅವರು ಮತ್ತು ಅವರ ಕುಟುಂಬದ ಸದಸ್ಯರು ಮನೆಯಲ್ಲಿ ಹೇಗಿರುತ್ತಾರೆ ಎನ್ನುವ ಸುಂದರ ದೃಶ್ಯಗಳನ್ನು ಇಲ್ಲಿ ಕಾಣಬಹುದು.
ನಟಿ ಶ್ರುತಿ ಅವರ ಮೊದಲಿನ ಹೆಸರು ಗಿರಿಜಾ. ತದನಂತರ ತಮ್ಮ ಶ್ರುತಿ ಸಿನಿಮಾದ ಮೂಲಕ ಇವರು ಈ ಹೆಸರಿಗೆ ಬದಲಾಯಿಸಿಕೊಂಡರು. ಇವರು ಸೆಪ್ಟೆಂಬರ್ 18 1975 ರಂದು ಹಾಸನದಲ್ಲಿ ಜನಿಸಿದ್ದಾರೆ. ಇನ್ನು ಹಾಸ್ಯ ನಟ ಶರಣ್ ಅವರು ಶ್ರುತಿ ಅವರಿಗೆ ಸಹೋದರ ಆಗಬೇಕು. ಶ್ರುತಿ ಅವರು ಕೇವಲ ಕನ್ನಡದಲ್ಲಿ ಮಾತ್ರವಲ್ಲ ಮಲೆಯಾಳಂ ತಮಿಳು ತೆಲುಗು ಭಾಷೆಗಳಲ್ಲೂ ಕೂಡ ಕೆಲ ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ.
ಇವರು 1989 ರಲ್ಲಿ ಸ್ವಂತಂ ಎನ್ನೂ ಕಾರುತಿ ಎನ್ನುವ ಮಲಯಾಳಂ ಚಿತ್ರದ ಮೂಲಕ ಮೊದಲನೆಯದಾಗಿ ಬೆಳ್ಳಿತೆರೆಗೆ ಕಾಲಿಟ್ಟರು. ಇನ್ನು ನಮ್ಮ ಕನ್ನಡದಲ್ಲಿ ನೋಡಿದರೆ 1990 ರಲ್ಲಿ ನಂಬಿದ್ರೆ ನಂಬಿ ಬಿಟ್ರೆ ಬಿಡಿ ಎನ್ನುವ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪ್ರವೇಶ ಮಾಡಿದರು.
ತದನಂತರ ಶ್ರುತಿ, ಗೌರಿಗಣೇಶ, ಬೊಂಬಾಟ್ ಹೆಂಡ್ತಿ, ಮುದ್ದಿನ ಮಾವ, ಜಾಣ, ಟೈಂಬಾಂಬ್, ಅಪಘಾತ, ಕರ್ಪೂರದ ಗೊಂಬೆ, ವೀರಪ್ಪ ನಾಯಕ, ಸೂರಪ್ಪ, ಗೌಡ್ರು, ರಾಮ ಶಾಮ ಭಾಮ, ಅಕ್ಕತಂಗಿ, ಪುಟ್ಟಕ್ಕನ ಹೈವೇ, ರಾಂಬೋ, ಕಲ್ಪನಾ ಬಚ್ಚನ್, ರತ್ನನ್ ಪರಪಂಚ, ಭಜರಂಗಿ 2 ಇನ್ನೂ ಸಾಕಷ್ಟು ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ.
ಇನ್ನು ಶ್ರುತಿ ಅವರು ಕಲರ್ಸ್ ಕನ್ನಡ ವಾಹಿನಿಯ ದೊಡ್ಡ ರಿಯಾಲಿಟಿ ಶೋ ಆಗಿರುವ ಬಿಗ್ ಬಾಸ್ ಕನ್ನಡ ಸೀಸನ್ ಮೂರರಲ್ಲೂ ಭಾಗವಹಿಸಿ ಅದರಲ್ಲಿ ವಿನ್ನರ್ ಕೂಡ ಆಗಿದ್ದರು. ಇನ್ನು ಶ್ರುತಿ ಅವರಿಗೆ ಮಹೇಂದರ್ ಗೌರಿ ಎನ್ನುವ ಮಗಳು ಕೂಡ ಇದ್ದಾರೆ. ಶ್ರುತಿ ಅವರು ಕೇವಲ ಸಿನಿಮಾ ಕ್ಷೇತ್ರದಲ್ಲಿ ಮಾತ್ರವಲ್ಲ ರಾಜಕೀಯ ಕ್ಷೇತ್ರದಲ್ಲಿ ಕೂಡಾ ತೊಡಗಿಸಿಕೊಂಡಿದ್ದಾರೆ. ಇವರು ಪ್ರಸ್ತುತ ಭಾರತೀಯ ಜನತಾ ಪಾರ್ಟಿಯಲ್ಲಿ ಮೆಂಬರ್ ಆಗಿದ್ದಾರೆ…..