ಇದೀಗ ಸೋಶಿಯಲ್ ಮೀಡಿಯಾದಲ್ಲಿ ನಟಿ ಶ್ರುತಿಯವರ ಅಪರೂಪದ ವಿಡಿಯೋ ಒಂದು ವೈರಲ್ ಆಗುತ್ತಿದೆ. ಕನ್ನಡದ ಚಿತ್ರರಂಗದಲ್ಲಿ ತನ್ನದೇ ರೀತಿಯ ನಟನಾ ಶೈಲಿಯಲ್ಲಿ ಗುರುತಿಸಿಕೊಂಡ ನಟಿ ಶ್ರುತಿ. ಇವರು ಮೊದಲಿಗೆ ಶಿವರಾಜ್ ಕುಮಾರ್ ಅವರ ಸಿನಿಮಾ “ಆಸೆಗೊಬ್ಬ ಮೀಸೆಗೊಬ್ಬ” ಅದರಲ್ಲಿ ಅತಿಥಿ ಪಾತ್ರದಲ್ಲಿ ನಟಿಸುವ ಮೂಲಕ ಬೆಳ್ಳಿತೆರೆ ಮೇಲೆ ಕಾಣಿಸಿ ಕೊಂಡಿದ್ದರು. ಆ ನಂತರ ದ್ವಾರಕೇಶ್ ಅವರ “ಶೃತಿ ಚಿತ್ರದಲ್ಲಿ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡರು.
ಆ ಚಿತ್ರದಿಂದ ಇವರಿಗೆ ಶೃತಿ ಎಂಬ ಹೆಸರು ಬಂತು. ಇವರ ಮೂಲ ಹೆಸರು ಗಿರಿಜಾ ಎಂಬುದಾಗಿ. ಇವರು ಹುಟ್ಟಿದ್ದು 18 ಸೆಪ್ಟಂಬರ್ 1975 ರಲ್ಲಿ. ಇವರು ಕನ್ನಡ ಸೇರಿದಂತೆ ತಮಿಳು, ಮಲಯಾಳಂ, ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇವರು ಕನ್ನಡದ ತಾಯಿ ಇಲ್ಲದ ತವರು, ವೀರಪ್ಪ ನಾಯಕ, ಗೌರಿ ಗಣೇಶ, ಬೊಂಬಾಟ್ ಹೆಂಡ್ತಿ ಸೇರಿದಂತೆ ಇನ್ನು ಹಲವು ಸಿನಿಮಾಗಳಲ್ಲಿ ನಟಿಸಿರುವ ಅದ್ಭುತ ನಟಿ.
ಶ್ರುತಿಯವರಿಗೆ ಹೆಚ್ಚಾಗಿ ಅಳು ಮುಂಜಿ ಪಾತ್ರವೇ ಸಿಗುತ್ತಿತ್ತು. ಯಾಕಂದರೆ ಅಂತಹ ಪಾತ್ರಗಳನ್ನು ಅವರು ಅದ್ಭುತವಾಗಿ ನಿಭಾಯಿಸುತ್ತಿದ್ದರು. ಅವರು ಸಿನಿಮಾದಲ್ಲಿ ಅಳುವ ಸೀನ್ ಮಾಡಿದರೆ, ವೀಕ್ಷಕರು ಕಣ್ಣಲ್ಲೂ ನೀರು ಬರುತಿತ್ತು. ಅಷ್ಟರಮಟ್ಟಿಗೆ ಪರಕಾಯ ಪ್ರವೇಶ ಮಾಡಿದಂತಹ ನಟನೆ ಅವರದ್ದು.ಇವರು ಕನ್ನಡ ಚಿತ್ರರಂಗದಲ್ಲಿ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡ ನಟಿ ಎಂದು ಗುರುತಿಸಿಕೊಂಡಿದ್ದಾರೆ.
ಒಂದು ಕಾಲದಲ್ಲಿ ಇವರು ಬಹು ಬೇಡಿಕೆಯ ನಟಿಯಾಗಿದ್ದರು. ಇವರು ನಿರ್ದೇಶಕ ಮಹೇಂದರ್ ಅವರನ್ನು ಪ್ರೀತಿಸಿ ಮದುವೆ ಆಗಿದ್ದರು. 1998 ರಲ್ಲಿ ಇವರಿಬ್ಬರ ಮದುವೆ ಆಗಿತ್ತು. ಆದರೆ 2009 ರಲ್ಲಿ ಇಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿ ಪರಸ್ಪರ ವಿಚ್ಚೇ ದನ ಕೊಟ್ಟು ದೂರ ಆಗಿದ್ದಾರೆ. ಇನ್ನು ಶ್ರುತಿಯವರಿಗೆ ಗೌರಿ ಅನ್ನುವ ಮಗಳಿದ್ದಾಳೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಗೌರಿ ಹುಟ್ಟಿದ ಕ್ಷಣದಿಂದ ಹಿಡಿದು ದೊಡ್ಡವಳಾದವರೆಗಿನ ಒಂದು ವಿಡಿಯೋ ಸಖತ್ ವೈರಲ್ ಆಗುತ್ತಿದೆ.
ಆಸ್ಪತ್ರೆಯಲ್ಲಿ ಮುದ್ದಾದ ಗೌರಿ ಹುಟ್ಟಿದ ತಕ್ಷಣದ ಫೋಟೋ, ಇಬ್ಬರು ಅಜ್ಜಿಯಂದಿರು ಎತ್ತಿ ಮುದ್ದಾಡುವ ದೃಶ್ಯ, ಶ್ರುತಿ ತನ್ನ ಕಂದಮ್ಮನಿಗೆ ಪ್ರೀತಿಯ ಮುತ್ತು ನೀಡುವ, ಅದೇ ರೀತಿ ಗೌರಿ ಜೊತೆ ಆಟ ಆಡುವ ತುಣುಕುಗಳು ಆ ವಿಡಿಯೋದಲ್ಲಿ ಇದೆ. ನೋಡಲು ಸಖತ್ ಕ್ಯೂಟ್ ಆಗಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದಕ್ಕೆ ಕಾರಣವೂ ಇದೆ. ಯಾಕಂದರೆ ಇವತ್ತು ಶ್ರುತಿ ಪುತ್ರಿ ಗೌರಿಯ ಹುಟ್ಟು ಹಬ್ಬ.
ಗೌರಿ, 2002 ಜೂನ್ 6 ರಂದು ಹುಟ್ಟಿದ್ದರು. ಇದೀಗ ಇವತ್ತಿಗೆ ಗೌರಿ ಅವರಿಗೆ 20 ವರ್ಷ ತುಂಬಿದ್ದು ಈ ಕಾರಣಕ್ಕಾಗಿ ಗೌರಿಯ ಬಾಲ್ಯದ ವಿಡಿಯೋ ವನ್ನು ಶೇರ್ ಮಾಡಲಾಗಿದೆ. ಇದು ಶ್ರುತಿ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಗೌರಿಯವರು ನೋಡಲು ಇದೀಗ ತಾಯಿಯಂತರಯೇ ಕಾಣಿಸುತ್ತಾರೆ. ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಪಿಯುಸಿ ಕಾಮರ್ಸ್ ವಿಭಾಗದಲ್ಲಿ ಓದುತ್ತಿರುವ ಗೌರಿ ಅದ್ಭುತ ಹಾಡುಗಾರ್ತಿ.
ಜೊತೆಗೆ ಗಿಟಾರ್ ನುಡಿಸುವುದು, ಲಾಂಗ್ ಜರ್ನಿ ಎಂದರೆ ಅವರಿಗೆ ಇಷ್ಟ. ಅಮ್ಮನ ಮುದ್ದಿನ ಮಗಳಾಗಿ, ಅಜ್ಜಿಯಂದಿರ ಮುದ್ದಿನ ಮೊಮ್ನಗಳಾದ ಗೌರಿಯವರಿಗೆ ನಮ್ಮ ಕಡೆಯಿಂದಲೂ ಹುಟ್ಟು ಹಬ್ಬದ ಶುಭಾಶಯಗಳು. ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯ ಏನು ಅನ್ನುವುದನ್ನು ಕಾಮೆಂಟ್ ಮೂಲಕ ತಿಳಿಸಿ.