ಕನ್ನಡದ ಖ್ಯಾತ ನಟಿ ಶ್ರುತಿ ಅವರು ಎಷ್ಟು ಚೆನ್ನಾಗಿ ಅಡುಗೆ ಮಾಡ್ತಾರೆ ನೋಡಿ. ಇವರು ಆಗಾಗ ತಮ್ಮ ವೈಯಕ್ತಿಕ ಫೋಟೋಗಳು ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳಿಗೋಸ್ಕರ ಹಂಚಿಕೊಳ್ಳುತ್ತಾ ಇರುತ್ತಾರೆ. ಇವರು ಮಾಡಿದ ರಾಗಿಮುದ್ದೆ ಮತ್ತು ಉಪ್ಸಾರು ವೀಡಿಯೋ ಇಲ್ಲಿದೆ ನೀಡಬಹುದು. ಇನ್ನೂ ಶ್ರುತಿ ಅವರು ಸೆಪ್ಟೆಂಬರ್ 18 1975 ರಂದು ಹಾಸನದಲ್ಲಿ ಜನಿಸಿದ್ದಾರೆ. ಇವರ ಮೊದಲಿನ ಹೆಸರು ಪ್ರಿಯದರ್ಶಿನಿ.
ಶ್ರುತಿ ಅವರು ಕೇವಲ ಕನ್ನಡದಲ್ಲಿ ಮಾತ್ರವಲ್ಲ ತೆಲುಗು ತಮಿಳು ಮತ್ತು ಮಲಯಾಳಂ ಭಾಷೆಗಳನ್ನು ಕೂಡ ಕೆಲ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇದರ ಜೊತೆಗೆ ಶ್ರುತಿ ಅವರು ರಾಜಕೀಯ ಕ್ಷೇತ್ರದಲ್ಲೂ ಕೂಡ ತೊಡಗಿಸಿಕೊಂಡಿದ್ದಾರೆ
ಇನ್ನೂ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಹಾಸ್ಯನಟ ಶರಣ್ ಅವರು ಶ್ರುತಿ ಅವರಿಗೆ ಸಹೋದರರಾಗಬೇಕು.
ಶ್ರುತಿ ಅವರ ಹೆಸರನ್ನು ಖ್ಯಾತ ನಿರ್ದೇಶಕ ಮತ್ತು ನಟ ದ್ವಾರಕೀಶ್ ಅವರು ಶ್ರುತಿ ಎನ್ನುವ ಚಿತ್ರದ ಮುಖಾಂತರ ಬದಲಾಯಿಸಿದರು. ಇನ್ನೂ ಸಿನಿಮಾಗಳಿಗೆ ಬಂದರೆ ಶ್ರುತಿ ಅವರು 1989 ರಲ್ಲಿ ಮಲಯಾಳಂನ ಸ್ವಂತಂ ಎನ್ನೂ ಕಾರುತಿ ಎನ್ನುವ ಚಿತ್ರದ ಮೂಲಕ ಮೊದಲನೆಯದಾಗಿ ಸಿನಿಮಾ ರಂಗಕ್ಕೆ ಕಾಲಿಟ್ಟರು.
ಇನ್ನೂ ನಮ್ಮ ಕನ್ನಡದಲ್ಲಿ ನೋಡಿದರೆ 1990 ರಂದು ನಂಬಿದ್ರೆ ನಂಬಿ ಬಿಟ್ರೆ ಬಿಡಿ ಎನ್ನುವ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪ್ರವೇಶ ಮಾಡಿದರು. ಇದಾದ ಮೇಲೆ ಆಸೆಗೊಬ್ಬ ಮೀಸೆಗೊಬ್ಬ, ಶ್ರುತಿ, ಗೌರಿಗಣೇಶ, ಸಿಬಿಐ ಶಿವ, ಅಳಿಮಯ್ಯ, ಮಿಡಿದ ಹೃದಯಗಳು, ಮುದ್ದಿನ ಮಾವ, ಟೈಂಪಾಸ್, ಕಲ್ಕಿ, ವೀರಪ್ಪ ನಾಯಕ, ಸ್ವಲ್ಪ ಅಡ್ಜಸ್ಟ್ ಮಾಡ್ಕೊಳ್ಳಿ, ಗೌಡ್ರು, ರಾಮ ಶಾಮ ಭಾಮ, ಪುಟ್ಟಕ್ಕನ ಹೈವೇ, ಕಲ್ಪನಾ ಇನ್ನೂ ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ರತ್ನನ್ ಪ್ರಪಂಚ ಮತ್ತು ಭಜರಂಗ 2 ಚಿತ್ರಗಳಲ್ಲೂ ಕೂಡ ಶ್ರುತಿ ಅವರು ನಟಿಸಿದ್ದಾರೆ. ಇದರ ಜೊತೆಗೆ ಬಿಗ್ ಬಾಸ್ ಕನ್ನಡ ಸೀಸನ್ ಮೂರರಲ್ಲಿ ಕೂಡ ಮನೆಗೆ ಪ್ರವೇಶ ಮಾಡಿದ್ದು ಇದರಲ್ಲಿ ವಿನ್ನರ್ ಕೂಡ ಆಗಿದ್ದಾರೆ. ಇನ್ನು ನಟಿ ಶ್ರುತಿ ಅವರಿಗೆ ಮಹೇಂದರ್ ಗೌರಿ ಎನ್ನುವ ಏಕೈಕ ಮಗಳು ಕೂಡ ಇದ್ದಾರೆ……