ನಮ್ಮ ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ಸುಂದರವಾದ ನಟಿಯರು ಇದ್ದಾರೆ. ಅದರಲ್ಲಿ ನಟಿ ವೈಷ್ಣವಿ ಗೌಡ ಅವರು ಕೂಡ ಒಬ್ಬರು ಎಂದು ಹೇಳಬಹುದು ಕಿರುತೆರೆಯ ಖ್ಯಾತ ನಟಿ ವೈಷ್ಣವಿ ಗೌಡ ಅವರು ಫೆಬ್ರುವರಿ 20 1992 ರಂದು ಬೆಂಗಳೂರಿನಲ್ಲಿ ಜನಿಸಿದ್ದಾರೆ. ಇವರಿಗೆ ಈಗ 29 ವರ್ಷಗಳು ಆಗಿವೆ. ವೈಷ್ಣವಿ ಗೌಡ ಅವರನ್ನು ಸಾಕಷ್ಟು ಜನರು ಸನ್ನಿಧಿ ಎಂದೇ ಕರೆಯುತ್ತಾರೆ.
ಏಕೆಂದರೆ ಇವರು ಮೊದಲು ಕಿರುತೆರೆಯ ಅಗ್ನಿಸಾಕ್ಷಿ ಧಾರಾವಾಹಿಯ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಈ ಧಾರಾವಾಹಿಯಲ್ಲಿ ವೈಷ್ಣವಿ ಗೌಡ ಅವರು ಸನ್ನಿಧಿ ಎನ್ನುವ ಪಾತ್ರದಲ್ಲಿ ನಟಿಸಿ ಬಹಳ ಜನಪ್ರಿಯರಾಗಿದ್ದರು
ಇನ್ನೂ ಇವರು ಬೆಂಗಳೂರಿನ ಕ್ಯಾನ್ಡೋರ್ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ತಮ್ಮ ಶಾಲೆಯ ಶಿಕ್ಷಣವನ್ನು ಮುಗಿಸಿದ್ದಾರೆ.
ಇದಾದ ಮೇಲೆ ಬೆಂಗಳೂರಿನಲ್ಲೇ ಪ್ರೆಸಿಡೆನ್ಸಿ ಕಾಲೇಜ್ ನಲ್ಲಿ ತಮ್ಮ ಪದವಿಯನ್ನು ಕೂಡ ಓದಿ ಮುಗಿಸಿದ್ದಾರೆ. ಇವರು ಶಾಲೆಯಲ್ಲಿ ಓದುತ್ತಿರಬೇಕಾದರೆ ಹಾಡುಗಳನ್ನು ಹಾಡುವುದು ನಟನೆ ಡ್ಯಾನ್ಸ್ ಹೀಗೆಲ್ಲ ಮಾಡುತ್ತಿದ್ದರು. ಇನ್ನು ಇವರ ತಂದೆ ಬ್ಯಾಂಕ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ ಮತ್ತು ತಾಯಿ ಹೌಸ್ ವೈಫ್ ಆಗಿದ್ದಾರೆ.
ಹಾಗೆಯೇ ವೈಷ್ಣವಿ ಅವರಿಗೆ ಒಬ್ಬ ಅಣ್ಣ ಕೂಡ ಇದ್ದಾರೆ. ಮೊದಲು ಇವರು ಮಾಡೆಲಿಂಗ್ ಕ್ಷೇತ್ರದಲ್ಲಿ ಮಾಡೆಲ್ ಆಗಿ ತಮ್ಮ ಕೆರಿಯರ್ ಅನ್ನು ಶುರು ಮಾಡಿದರು.
ಇದಾದ ಮೇಲೆ ಸಾಕಷ್ಟು ಮ್ಯಾಗಜೀನ್ ನಲ್ಲಿ ಕವರ್ ಪೇಜ್ ಆಗಿ ಕಾಣಿಸಿಕೊಂಡರು ಜೊತೆಗೆ ಆಡ್ ಗಳಲ್ಲೂ ಕೂಡ ಮಾಡಿದ್ದಾರೆ. ವೈಷ್ಣವಿ ಗೌಡ ಅವರು ಡ್ರೆಸ್ ಕೋಡ್ ಎನ್ನುವ ಚಿತ್ರದಲ್ಲಿ ನಟಿಸಿದ್ದಾರೆ.
ಇದಾದ ಮೇಲೆ ಮೇಲೆ ಗಿರಿಗಿಟ್ಲೆ ಎನ್ನುವ ಚಿತ್ರದಲ್ಲೂ ಕೂಡ ಅಭಿನಯಿಸಿದ್ದಾರೆ. ಇನ್ನು ಕಿರುತೆರೆಗೆ ಬಂದರೆ ದೇವಿ ಪುನರ್ ವಿವಾಹ ಮತ್ತು ಅಗ್ನಿಸಾಕ್ಷಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.
ಹಾಗೆಯೇ ವೈಷ್ಣವಿ ಗೌಡ ಅವರು ಕಲರ್ಸ್ ಕನ್ನಡದ ದೊಡ್ಡ ರಿಯಾಲಿಟಿ ಶೋ ಆಗಿರುವ ಬಿಗ್ ಬಾಸ್ ಕನ್ನಡ ಸೀಸನ್ 8 ರಲ್ಲೂ ಕೂಡ ಭಾಗವಹಿಸಿದ್ದರು. ಇನ್ನು ನೀವು ಇಲ್ಲಿ ವೈಷ್ಣವಿ ಗೌಡ ಅವರ ಮನೆಯ ಒಳಾಂಗಣ ಹೇಗಿದೆ ಎಂದು ನೋಡಬಹುದು…..