ಕನ್ನಡ ಕಿರುತೆರೆ ಮತ್ತು ಬೆಳ್ಳಿತೆರೆಯ ಖ್ಯಾತ ನಟಿ ವೀಣಾ ಸುಂದರ್ ಅವರ ಸುಂದರ ಕುಟುಂಬ ಹೇಗೆ ಎಂದು ಇಲ್ಲಿ ನೋಡೋಣ. ಇದಕ್ಕೂ ಮುನ್ನ ವೀಣಾ ಸುಂದರ್ ಅವರ ಬಗ್ಗೆ ಕೆಲ ಮಾಹಿತಿಯನ್ನು ತೆಗೆದುಕೊಳ್ಳೋಣ. ಕಿರುತೆರೆಯಲ್ಲಿ ಮತ್ತೆ ಬೆಳ್ಳಿತೆರೆಯಲ್ಲಿ ಎರಡರಲ್ಲೂ ಹೆಸರು ಗಳಿಸುವುದು ತುಂಬಾನೇ ಕಷ್ಟ.
ಅದರಲ್ಲಿ ವೀಣಾ ಸುಂದರ್ ಅವರು ಕೂಡ ಒಬ್ಬರು ಎಂದು ಹೇಳಬಹುದು. ವೀಣಾ ಸುಂದರ್ ಅವರು ಕಿರುತೆರೆ ಮತ್ತು ಬೆಳ್ಳಿತೆರೆಯ ಖ್ಯಾತ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಹೌದು ವೀಣಾ ಸುಂದರ್ ಅವರು ಯಮಲೋಕದಲ್ಲಿ ಪ್ರಾಯಶ್ಚಿತ್ತ, ವಾಸುದೈವ ಕುಟುಂಬ, ಸಂಬಂಧ, ಮತ್ತೆ ಮನ್ವಂತರ,.
ಮದುಮಗಳು, ಕನಕ, ಜೇನುಗೂಡು, ಗೋಕುಲದಲ್ಲಿ ಸೀತೆ, ಗೌರೀಪುರದ ಗಯ್ಯಾಳಿಗಳು, ದಿಬ್ಬಣ ಇನ್ನೂ ಸಾಕಷ್ಟು ಕನ್ನಡ ದಾರಾವಾಹಿಗಳಲ್ಲಿ ನಟಿಸಿದ್ದಾರೆ. ಇದರ ಜೊತೆಗೆ ತಮಿಳಿನಲ್ಲಿ ರೋಜಾ ಎನ್ನುವ ಧಾರಾವಾಹಿಯಲ್ಲಿ ಕೂಡ ನಟಿಸಿದ್ದಾರೆ.
ಹಾಗೆಯೇ ಬೆಳ್ಳಿತೆರೆಯಲ್ಲಿ ನೋಡಿದರೆ ಇವರು ಆಪ್ತರಕ್ಷಕ, ಒಲವೇ ಮಂದಾರ, ಅಧ್ಯಕ್ಷ, ಪುಟ್ಟಕ್ಕನ ಹೈವೇ, ಕಾಫಿತೋಟ, ಆ ಕರಾಳ ರಾತ್ರಿ, ಅಸುರ ಸಂಹಾರ, ತೋತಾಪುರಿ ಇನ್ನೂ ಸಾಕಷ್ಟು ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಇದರ ಜೊತೆಗೆ ಇವರು ಕೆಲ ತೆಲುಗು ಚಿತ್ರಗಳಲ್ಲಿ ಕೂಡ ಅಭಿನಯ ಮಾಡಿದ್ದಾರೆ.
ಇನ್ನೂ ವೀಣಾ ಅವರು ನಟ ಸುಂದರ್ ಎಂಬುವವರನ್ನು ವಿವಾಹ ಮಾಡಿಕೊಂಡಿದ್ದಾರೆ. ಸುಂದರ ಅವರು ಕೂಡ ಸಾಕಷ್ಟು ಧಾರಾವಾಹಿಗಳಲ್ಲಿ ಮತ್ತು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರು ರನ್ನ, ಇಕ್ಕಟ್, ಯುವರತ್ನ, ರತ್ನನ್ ಪರ್ಪಂಚ, ಡೇರ್ ಡೆವಿಲ್ ಮುಸ್ತಫಾ ಹೀಗೆ ಜನಪ್ರಿಯ ಆಗಿರುವ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
ನಟಿ ವೀಣಾ ಮತ್ತು ನಟ ಸುಂದರ್ ದಂಪತಿಗೆ ಒಬ್ಬ ಮಗ ಮತ್ತು ಮಗಳು ಸಹ ಇದ್ದಾರೆ. ನಟಿ ವೀಣಾ ಅವರ ಸುಂದರ ಕುಟುಂಬ ಹೇಗಿದೆ ಎಂದು ಇಲ್ಲಿರುವ ಫೋಟೋಗಳಲ್ಲಿ ನೋಡಬಹುದು…..