ನಮ್ಮ ಕನ್ನಡ ಹಿರಿಯ ನಟಿಯರಲ್ಲಿ ನಟಿ ವಿನಯಾ ಪ್ರಸಾದ್ ಅವರು ಕೂಡಾ ಒಬ್ಬರು ಎಂದು ಹೇಳಬಹುದು. ಇವರು ಕೇವಲ ಕನ್ನಡದಲ್ಲಿ ಮಾತ್ರವಲ್ಲ ಬೇರೆ ಭಾಷೆಗಳಲ್ಲೂ ನಟಿಸಿ ಸಾಕಷ್ಟು ಜನಪ್ರಿಯರಾಗಿದ್ದಾರೆ. ಹೌದು ವಿನಯಾ ಪ್ರಸಾದ್ ಅವರು.
ಕನ್ನಡ ಮಲಯಾಳಂ ತಮಿಳು ತೆಲುಗು ಭಾಷೆಗಳಲ್ಲಿ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಇನ್ನೂ ಇವರು ನವೆಂಬರ್ 22 1965 ರಂದು ಉಡುಪಿಯಲ್ಲಿ ಜನಿಸಿದರು.ಇವರ ತಂದೆಯ ಹೆಸರು ಕೃಷ್ಣ ಭಟ್ ಮತ್ತು ತಾಯಿಯ ಹೆಸರು ವತ್ಸಲಾ ಭಟ್. ಇವರಿಗೆ ನಟ ರವಿ ಭಟ್ ಅವರು ಸಹೋದರ ಆಗಬೇಕು.
ರವಿ ಭಟ್ ಅವರು ಕೂಡ ಕಿರುತೆರೆ ಮತ್ತು ಬೆಳ್ಳಿತೆರೆಯಲ್ಲಿ ಸಾಕಷ್ಟು ಧಾರಾವಾಹಿ ಮತ್ತು ಚಲನಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ. ಇನ್ನು ವಿನಯ ಪ್ರಸಾದ್ ಅವರು ಬೆಳ್ಳಿತೆರೆಯಲ್ಲಿ ಮಾತ್ರವಲ್ಲ ಕಿರುತೆರೆಯಲ್ಲೂ ಕೂಡ ಸಕ್ರಿಯರಾಗಿದ್ದಾರೆ.
ಇವರು ಮೊದಲು 1988 ರಲ್ಲಿ ಮಧ್ವಾಚಾರ್ಯ ಎನ್ನುವ ಕನ್ನಡ ಚಿತ್ರದ ಮೂಲಕ ಬೆಳ್ಳಿತೆರೆಯ ಮೇಲೆ ಕಾಲಿಟ್ಟರು. ಇದಾದ ಮೇಲೆ ಸಾಕಷ್ಟು ಕನ್ನಡ ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ. ಇವರು ಎಲ್ಲಾ ಭಾಷೆಗಳಲ್ಲಿ ಸೇರಿ ಸುಮಾರು 180 ಕ್ಕಿಂತ ಹೆಚ್ಚು.
ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ. ಇನ್ನೂ ಕಿರುತೆರೆಯ ಲೋಕದಲ್ಲಿ ನೋಡಿದರೆ 1990 ರಂದು ಬದುಕಿನಲ್ಲಿ ಒಂದು ತಿರುವು ಎನ್ನುವ ಕನ್ನಡ ಧಾರಾವಾಹಿಯ ಮುಖಾಂತರ ಸೀರಿಯಲ್ ಗೆ ಕಾಲಿಟ್ಟರು.ಇದು ದೂರದರ್ಶನ ವಾಹಿನಿಯಲ್ಲಿ ಪ್ರಸಾರವಾಗಿತ್ತು. ತದನಂತರ ಸ್ತ್ರೀ, ನಂದಗೋಕುಲ, ಅನುಪಮಾ, ಬಂಗಾರ, ನಿತ್ಯೋತ್ಸವ, ಸುಂದರಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.
ಪ್ರಸ್ತುತ ವಿನಯಾ ಪ್ರಸಾದ್ ಅವರು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಪಾರು ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಇವರು ಕೇವಲ ಕನ್ನಡದಲ್ಲಿ ಮಾತ್ರವಲ್ಲ ಮಲೆಯಾಳಂ ತಮಿಳು ಧಾರಾವಾಹಿಗಳಲ್ಲಿ ಕೂಡ ನಟಿಸಿದ್ದಾರೆ.
ಇನ್ನೂ ವಿನಯಾ ಪ್ರಸಾದ್ ಅವರಿಗೆ ಪ್ರಥಮ ಪ್ರಸಾದ್ ಎನ್ನುವ ಏಕೈಕ ಮಗಳು ಇದ್ದಾರೆ. ಈಕೆ ಭರತನಾಟ್ಯ ನೃತ್ಯವನ್ನು ಕಲಿತು ಸಾಕಷ್ಟು ವೇದಿಕೆಗಳಲ್ಲಿ ಪ್ರದರ್ಶನಗಳನ್ನು ನೀಡಿದ್ದಾರೆ. ಇನ್ನೂ ವಿನಯ ಪ್ರಸಾದ್ ಅವರ ಅಳಿಯ ಕೂಡ ಭರತನಾಟ್ಯವನ್ನು ಕಲಿತು ಒಳ್ಳೆಯ ನೃತ್ಯ ಮಾಡುತ್ತಾರೆ. ನಟಿ ವಿನಯಾ ಪ್ರಸಾದ್ ಅವರ ಅಳಿಯ ಕೂಡ ನೃತ್ಯದಲ್ಲಿ ಸಕತ್ ಫೇಮಸ್ ಆಗಿದ್ದಾರೆ…..