ಕನ್ನಡದ ಜನಪ್ರಿಯ ನಟಿ ವನಿತಾ ವಾಸು ಅವರು ಬೆಂಗಳೂರಿನಲ್ಲಿ ಜನಿಸಿದ್ದು ಮಲಯಾಳಂ ಕುಟುಂಬಕ್ಕೆ ಸೇರಿದ್ದಾರೆ. ಇವರು ಬೆಂಗಳೂರಿನಲ್ಲಿ ಎಂಇಎಸ್ ಕಾಲೇಜಿನಲ್ಲಿ ತಮ್ಮ ಬಿ.ಕಾಂ ಪದವಿಯನ್ನು ಮಾಡಿ ಮುಗಿಸಿದ್ದಾರೆ.
ಇವರು ಕೇವಲ ಸಿನಿಮಾಗಳಲ್ಲಿ ಮಾತ್ರವಲ್ಲ ಕೆಲ ಧಾರಾವಾಹಿಗಳಲ್ಲೂ ಕೂಡ ನಟಿಸಿದ್ದಾರೆ. ಹಾಗೆಯೇ ಇವರು ಬಹುತೇಕ ಎಲ್ಲ ದೊಡ್ಡ ದೊಡ್ಡ ನಟರ ಜೊತೆಗೂ ಕೂಡ ಅಭಿನಯಿಸಿದ್ದಾರೆ.
ಇನ್ನೂ ವನಿತಾ ವಾಸು ಅವರು 1987 ರಂದು ಬಿಡುಗಡೆಯಾಗಿದ್ದ ಆಗಂತುಕ ಎನ್ನುವ ಕನ್ನಡ ಚಿತ್ರದ ಮೂಲಕ ಮೊದಲನೆಯದಾಗಿ ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದರು.
ಈ ಸಿನಿಮಾವನ್ನು ಸುರೇಶ್ ಹೆಬ್ಳಿಕರ್ ಅವರು ನಿರ್ದೇಶನ ಮಾಡಿದ್ದಾರೆ ಮತ್ತು ಇದರ ಕಥೆಯನ್ನು ಎ ಬಾಲಕೃಷ್ಣ ಅವರು ಬರೆದಿದ್ದಾರೆ. ಇನ್ನು ಈ ಚಿತ್ರದಲ್ಲಿ ಸುರೇಶ್ ಹೆಬ್ಳೀಕರ್, ವನಿತಾ ವಾಸು, ದೇವರಾಜ್ ಇನ್ನೂ ಮುಂತಾದ ಕಲಾವಿದರು ಅಭಿನಯಿಸಿದ್ದಾರೆ.
ತದನಂತರ ಚಿರಂಜೀವಿ ಸುಧಾಕರ್, ಶಕ್ತಿ, ಕೃಷ್ಣ ರುಕ್ಮಿಣಿ, ಕಾಡಿನ ಬೆಂಕಿ, ನರಸಿಂಹ, ಜಯಭೇರಿ, ಗಗನ, ಉತ್ಕರ್ಷ, ಚಪಲ ಚನ್ನಿಗರಾಯ, ಮಣ್ಣಿನ ದೋಣಿ, ಘರ್ಷಣೆ, ಯಾರಿಗೂ ಹೇಳ್ಬೇಡಿ, ಮೆಜೆಸ್ಟಿಕ್, ಏಕಾಂಗಿ, ಒಂದಾಗೋಣ ಬಾ, ಮೊನಾಲಿಸಾ, ಮಠ, ಬಿಂದಾಸ್, ಹುಡುಗರು, ಇನ್ನೂ ಸಾಕಷ್ಟು ಕನ್ನಡ ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ. ವನಿತಾ ವಾಸು ಅವರು ಸಾಕಷ್ಟು ಅಭಿಮಾನಿಗಳ ಬಳಗವನ್ನು ಸಹ ಹೊಂದಿದ್ದಾರೆ.
ಹೌದು ವನಿತಾ ವಾಸು ಅವರು ಕನ್ನಡದಲ್ಲಿ ಕೆಲ ಚಿತ್ರಗಳಲ್ಲಿ ನಟಿಸಿದರೂ ಕೂಡ ತುಂಬಾನೇ ಜನಪ್ರಿಯರಾಗಿದ್ದಾರೆ. ಇನ್ನೂ ವನಿತಾ ವಾಸು ಅವರು ಸುಂದರ್ ಎನ್ನುವವರನ್ನು ವಿವಾಹ ಮಾಡಿಕೊಂಡಿದ್ದಾರೆ. ಇನ್ನು ಇವರ ಮಗ ತಾಯಿಯ ರೀತಿಯಂತೆ ನೋಡುವುದಕ್ಕೆ ಥೇಟ್ ಇದ್ದಾರೆ. ನನ್ನ ಸ್ಟ್ರೆಂಥ್ ಮತ್ತು ನನ್ನ ವೀಕ್ ನೆಸ್ ನನ್ನ ಮಗನೇ ಎಂದು ವನಿತಾ ವಾಸು ಅವರು ಹೇಳುತ್ತಾರೆ.
ಇನ್ನು ಇವರ ಕೊನೆಯ ಸಿನಿಮಾ ಪುನೀತ್ ರಾಜ್ ಕುಮಾರ್ ಅವರ ಅಭಿನಯದ ಹುಡುಗರು ಚಿತ್ರ. ಇದಾದ ಮೇಲೆ ಇವರು ಯಾವ ಸಿನಿಮಾಗಳಲ್ಲೂ ನಟಿಸುತ್ತಿಲ್ಲ. ಹಾಗೆಯೇ ಇಲ್ಲಿ ನೀವು ವನಿತಾ ವಾಸು ಮತ್ತು ಸುಂದರ್ ಅವರ ಮದುವೆಯ ಅಪರೂಪದ ಕೆಲ ಸುಂದರ ದೃಶ್ಯಗಳನ್ನು ನೋಡಬಹುದು…..