ಲಕ್ಷ್ಮಿ ಬಾರಮ್ಮ ಧಾರಾವಾಹಿಯ ಮುಖಾಂತರ ನಟಿ ರಶ್ಮಿ ಪ್ರಭಾಕರ ಅವರು ಜನಪ್ರಿಯತೆಯನ್ನು ಸಾಧಿಸಿಕೊಂಡರು. ಇದರ ಜೊತೆಗೆ ಪರಭಾಷೆಗಳ ಧಾರಾವಾಹಿಗಳಲ್ಲಿ ಕೂಡ ಇವರು ನಟಿಸಿದ್ದಾರೆ. ರಶ್ಮಿ ಪ್ರಭಾಕರ್ ಅವರು ಇತ್ತೀಚೆಗೆಯಷ್ಟೇ ನಿಖಿಲ್ ಅವರನ್ನು ವಿವಾಹ ಮಾಡಿಕೊಂಡರು. ಇನ್ನು ಇಲ್ಲಿ ನೀವು ರಶ್ಮಿ ಪ್ರಭಾಕರ್ ಅವರ ಸುಂದರ ಮನೆ ಹೇಗಿದೆ ಎಂದು ನೋಡಬಹುದು..
ಹೌದು ರಶ್ಮಿ ಪ್ರಭಾಕರ್ ಅವರು ನಿಖಿಲ್ ಭಾರ್ಗವ್ ಎನ್ನುವವರನ್ನು ಇಂದು ಏಪ್ರಿಲ್ 25 2022 ರಂದು ವಿವಾಹ ಮಾಡಿಕೊಂಡಿದ್ದಾರೆ. ಇನ್ನೂ ಇವರ ನಿಶ್ಚಿತಾರ್ಥ ಕಳೆದ ವರ್ಷ ನವೆಂಬರ್ ತಿಂಗಳಿನಲ್ಲಿ ಜರುಗಿತ್ತು. ಈಗ ಇವರಿಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಅಭಿಮಾನಿಗಳು ಭಾರೀ ಸಂತೋಷವನ್ನು ವ್ಯಕ್ತ ಪಡಿಸುತ್ತಿದ್ದಾರೆ. ಇನ್ನೂ ರಶ್ಮಿ ಪ್ರಭಾಕರ್ ಅವರು ಫೆಬ್ರವರಿ 16 1991 ರಂದು ಬೆಂಗಳೂರಿನಲ್ಲಿ ಜನಿಸಿದ್ದಾರೆ. ಇವರು ಕೇವಲ ಕನ್ನಡದಲ್ಲಿ ಮಾತ್ರವಲ್ಲ ತೆಲುಗು ತಮಿಳು ಕಿರುತೆರೆಯಲ್ಲಿ ಕೂಡ ತುಂಬಾ ಪ್ರಖ್ಯಾತವನ್ನು ಗಳಿಸಿದ್ದಾರೆ.
ಇವರು 2014 ರಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿದ್ದ ಶುಭವಿವಾಹ ಧಾರಾವಾಹಿಯಲ್ಲಿ ನಟಿಸಿ ಕಿರುತೆರೆಯ ಲೋಕಕ್ಕೆ ಮೊದಲನೆಯದಾಗಿ ಕಾಲಿಟ್ಟರು. ಇದಾದ ಮೇಲೆ ಮಹಾಭಾರತ, ಜೀವನ ಚೈತ್ರ, ಅರುಂಧತಿ, ಲಕ್ಷ್ಮೀ ಬಾರಮ್ಮ, ಪೌರ್ಣಮಿ, ಇವಳು ಸುಜಾತಾ, ಮನಸೆಲ್ಲಾ ನೀನೆ ಎನ್ನುವ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಪ್ರಸ್ತುತ ರಶ್ಮಿ ಪ್ರಭಾಕರ್ ಅವರು ತೆಲುಗಿನ ಜೆಮಿನಿ ಟಿವಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕಾವ್ಯಾಂಜಲಿ ಎನ್ನುವ ಧಾರಾವಾಹಿಯಲ್ಲಿ ಕಾವ್ಯ ಎನ್ನುವ ಮುಖ್ಯವಾದ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ಇದರ ಜೊತೆಗೆ ಬಿಬಿ5 ಮತ್ತು ಮಹಾಕಾವ್ಯ ಎನ್ನುವ ಕನ್ನಡ ಚಿತ್ರಗಳಲ್ಲಿ ಕೂಡ ನಟನೆ ಮಾಡಿದ್ದಾರೆ. ಇನ್ನೂ ಮುಖ್ಯವಾಗಿ ಹೇಳಬೇಕು ಎಂದರೆ ದಕ್ಷಿಣ ಭಾರತದ ಸ್ಟಾರ್ ನಟಿಯಾಗಿದ್ದ ಸೌಂದರ್ಯ ಅವರಿಗೆ ರಶ್ಮಿ ಪ್ರಭಾಕರ್ ಅವರು ತಂಗಿಯಾಗಬೇಕು. ಹೌದು ರಶ್ಮಿ ಪ್ರಭಾಕರ್ ಅವರಿಗೆ ಸೌಂದರ್ಯ ಅವರು ದೊಡ್ಡಪ್ಪನ ಮಗಳು ಆಗಬೇಕು. ಹೀಗಾಗಿ ಇವರಿಬ್ಬರು ಅಕ್ಕ ತಂಗಿಯರು.
ಇನ್ನೂ ರಶ್ಮಿ ಪ್ರಭಾಕರ್ ಅವರು ನಿಖಿಲ್ ಅವರ ಜೊತೆಗೆ ಹೊಸದಾದ ಬದುಕನ್ನು ಶುರು ಮಾಡಿದ್ದು ಸಾಕಷ್ಟು ಅಭಿಮಾನಿಗಳು ಇವರಿಗೆ ಶುಭಾಶಯಗಳನ್ನು ಸಲ್ಲಿಸುತ್ತಿದ್ದಾರೆ ಮತ್ತು ಇವರ ದಾಂಪತ್ಯ ಜೀವನವು ಸುಖಮಯವಾಗಿರಲಿ ಎಂದು ಎಲ್ಲರೂ ಹಾರೈಸೋಣ…..