Hindustan Prime
Hindustan Prime is a 24-hour media news website, we provide you with the Latest Breaking news, Current affairs, Technology, Automobiles and Karnataka news.

ನಟಿ ರಮ್ಯಾಗೆ ಡಾ ವಿಷ್ಣುವರ್ಧನ್ ಅವರ ಈ ಸಿನಿಮಾ ಅಂದ್ರೆ ತುಂಬಾ ಇಷ್ಟ ಅಂತೆ, ಯಾವುದು ಗೊತ್ತೇ ಸಿನೆಮಾ ??

0

 

ಸಾಹಸಸಿಂಹ ಡಾ ವಿಷ್ಣುವರ್ಧನ್ ಅವರ ಸಿನಿಮಾಗಳು ಎಂದರೆ ಎಲ್ಲರಿಗೂ ಕೂಡ ತುಂಬಾ ಇಷ್ಟವಾಗುತ್ತದೆ. ಏಕೆಂದರೆ ಅವರು ಆಯ್ಕೆ ಮಾಡಿಕೊಳ್ಳುವ ಸಿನಿಮಾದ ಕಥೆ ವಿಭಿನ್ನವಾದ ಪಾತ್ರಗಳು ಅಭಿಮಾನಿಗಳ ಮನಸ್ಸನ್ನು ದೋಚಿಕೊಳ್ಳುತ್ತದೆ.

ಇನ್ನು ಡಾ ವಿಷ್ಣುವರ್ಧನ್ ಅವರು ಒಂದು ಸಿನಿಮಾ ಮಾಡುತ್ತಿದ್ದಾರೆ ಎಂದರೆ ಆ ಚಿತ್ರದ ಕಥೆ ಹೇಗಿರುತ್ತೆ ಮತ್ತು ಅದರಲ್ಲಿ ವಿಷ್ಣುವರ್ಧನ್ ಅವರ ಪಾತ್ರ ಹೇಗಿರುತ್ತದೆ ಎನ್ನುವ ಕುತೂಹಲ ತುಂಬಾ ಅಭಿಮಾನಿಗಳಿಗೆ ಇರುತ್ತಿತ್ತು. ಡಾ ವಿಷ್ಣುವರ್ಧನ್ ಅವರ ಯಾವ ಸಿನಿಮಾಗಳೂ ಇಷ್ಟ ಎಂದರೆ ಕೆಲವರು ಒಂದೊಂದು ಸಿನಿಮಾಗಳನ್ನು ಹೇಳುತ್ತಾರೆ.

ಆದರೆ ಸ್ಯಾಂಡಲ್ ವುಡ್ ನ ಖ್ಯಾತ ನಟಿ ರಮ್ಯಾ ಅವರಿಗೆ ಡಾ ವಿಷ್ಣುವರ್ಧನ್ ಅವರ ಈ ಒಂದು ಸಿನಿಮಾ ಎಂದರೆ ತುಂಬ ಇಷ್ಟವಂತೆ. ಈ ಸಿನಿಮಾ 1991 ರಲ್ಲಿ ಬಿಡುಗಡೆಯಾಯಿತು. ಇನ್ನೂ ಇದನ್ನು ಬಿ.ದೊರೈರಾಜ್ ಅವರು ನಿರ್ದೇಶನ ಮಾಡಿದ್ದಾರೆ ಮತ್ತು ಹಂಸಲೇಖ ಅವರು ಸಂಗೀತ ನಿರ್ದೇಶನವನ್ನು ನೀಡಿದ್ದಾರೆ.

ಇದರಲ್ಲಿ ಡಾ ವಿಷ್ಣುವರ್ಧನ್ ಅವರು ನಾಯಕರಾಗಿ ಹಾಸ್ಯ ಮತ್ತು ಪ್ರೇಮಿಯ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನೂ ವಿಶೇಷವಾದ ವಿಷಯ ಏನೆಂದರೆ ಇದರಲ್ಲಿ 5 ಜನ ನಾಯಕಿಯರು ಡಾ ವಿಷ್ಣುವರ್ಧನ್ ಅವರ ಜೊತೆ ಅಭಿನಯ ಮಾಡಿದ್ದಾರೆ. ಹಾಗಾಗಿ ಈ ಸಿನಿಮಾದಲ್ಲಿ ವಿಷ್ಣುವರ್ಧನ್ ಅವರು ಯಾವ ನಾಯಕಿಯನ್ನು ಮದುವೆ ಮಾಡಿಕೊಳ್ಳುತ್ತಾರೆ ಎನ್ನುವ ವಿಷಯ ತುಂಬ ಕುತೂಹಲಕಾರಿ.

ನೀನು ನಕ್ಕರೆ ಹಾಲು ಸಕ್ಕರೆ ಚಿತ್ರದಲ್ಲಿ ವಿಷ್ಣುವರ್ಧನ್ ಅವರ ಜೊತೆಗೆ ರೂಪಿಣಿ, ಅಂಜಲಿ ಸುಧಾಕರ್, ವಿನಯಾ ಪ್ರಸಾದ್, ಚಂದ್ರಿಕಾ, ರಜನಿ ಅವರು ನಾಯಕಿಯರ ಪಾತ್ರಗಳಲ್ಲಿ ಅಭಿನಯ ಮಾಡಿದ್ದಾರೆ. ಇನ್ನೂ ಇವರುಗಳ ಜೊತೆಗೆ ಈ ಸಿನಿಮಾದಲ್ಲಿ ಉಮಾಶ್ರೀ, ಶ್ರೀನಾಥ್, ಅಂಬರೀಶ್, ರಮೇಶ್ ಭಟ್, ಮುಖ್ಯಮಂತ್ರಿ ಚಂದ್ರು, ವಿಜಯಕಾಶಿ ಇನ್ನು ಮುಂತಾದ ಕಲಾವಿದರು ಅಭಿನಯಿಸಿದ್ದಾರೆ.

ರಮ್ಯಾ ಅವರಿಗೆ ನೀನು ನಕ್ಕರೆ ಹಾಲು ಸಕ್ಕರೆ ಸಿನಿಮಾದ ಕಥೆ ಹಾಡುಗಳು ಅದರಲ್ಲಿರುವ ಪಾತ್ರಗಳು ತುಂಬ ಇಷ್ಟವಂತೆ. ಹಾಗಾಗಿ ಇದು ಆಲ್ ಟೈಮ್ ಫೇವರಿಟ್ ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಒಂದು ಪೋಸ್ಟ್ ಮುಖಾಂತರ ಹೇಳಿಕೊಂಡಿದ್ದಾರೆ…..

Leave A Reply