ದಕ್ಷಿಣ ಭಾರತದ ಖ್ಯಾತ ನಟಿ ರಮ್ಯಾಕೃಷ್ಣ ಅವರು ಸೆಪ್ಟೆಂಬರ್ 15 1970 ರಂದು ಚೆನ್ನೈನಲ್ಲಿ ಜನಿಸಿದರು. ಇವರ ತಂದೆಯ ಹೆಸರು ಕೃಷ್ಣನ್ ಮತ್ತು ತಾಯಿಯ ಹೆಸರು ಮಾಯ. ಇವರಿಗೆ ವಿನಯ ಕೃಷ್ಣನ್ ಎನ್ನುವ ಸಹೋದರಿ ಕೂಡ ಇದ್ದಾರೆ. ರಮ್ಯಕೃಷ್ಣ ಅವರು ತೆಲುಗು ತಮಿಳು ಕನ್ನಡ ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ನಟಿಸಿ ಪಂಚಭಾಷಾ ನಟಿಯಾಗಿ ಗುರುತಿಸಿಕೊಂಡಿದ್ದಾರೆ.
ಇನ್ನೂ ರಮ್ಯಕೃಷ್ಣ ಅವರು ಬಾಲ್ಯ ವಯಸ್ಸಿನಲ್ಲಿ ಇದ್ದಾಗಲೇ ಭರತನಾಟ್ಯ ವೆಸ್ಟ್ರನ್ ಮತ್ತು ಕುಚುಪುಡಿ ನೃತ್ಯಗಳನ್ನು ಕಲಿತು ಸಾಕಷ್ಟು ವೇದಿಕೆಗಳ ಮೇಲೆ ಪ್ರದರ್ಶನಗಳನ್ನು ನೀಡಿದ್ದಾರೆ. ಇನ್ನೂ ಸಿನಿಮಾ ವಿಷಯಕ್ಕೆ ಬಂದರೆ ಇವರು ಕೇವಲ 13 ವರ್ಷದ ವಯಸ್ಸಿನಲ್ಲಿದ್ದಾಗಲೇ ತಮ್ಮ ಸಿನಿಮಾ ಕೆರಿಯರ್ ಅನ್ನು ಶುರು ಮಾಡಿಕೊಂಡರು. ಹೌದು ಮಲಯಾಳಂನ ನೆರಂ ಪುಲಾರುಂಬಲ್ ಎನ್ನುವ ಚಿತ್ರದ ಮೂಲಕ ಮೊದಲನೆಯದಾಗಿ ಬಾಲನಟಿಯಾಗಿ ಅಭಿನಯ ಮಾಡಿದರು.
ಆದರೆ ಈ ಚಿತ್ರವು 1986 ರಲ್ಲಿ ಬಿಡುಗಡೆಯಾಯಿತು. ಆದರೆ 1985 ರಲ್ಲಿ ತಮಿಳಿನ ವೆಳ್ಳೈ ಮನಸ್ಸು ಎನ್ನುವ ಚಿತ್ರವು ಮೊದಲನೆಯದಾಗಿ ಬಿಡುಗಡೆಯಾಯಿತು. ಇನ್ನೂ ನಮ್ಮ ಕನ್ನಡದಲ್ಲಿ ನೋಡಿದರೆ 1988 ರಲ್ಲಿ ಬಿಡುಗಡೆಯಾದ ಶಕ್ತಿ ಎನ್ನುವ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದರು.
ಇದಾದ ಮೇಲೆ ಕೃಷ್ಣ ರುಕ್ಮಿಣಿ, ಗಡಿಬಿಡಿ ಗಂಡ, ಮಾಂಗಲ್ಯಂ ತಂತುನಾನೇನ, ಯಾರೇ ನೀ ಅಭಿಮಾನಿ, ಸ್ನೇಹ, ಆಂಧ್ರ ಹೆಂಡ್ತಿ, ನೀಲಾಂಬರಿ, ಚಾಮುಂಡಿ, ಏಕಾಂಗಿ, ರಾಜನರಸಿಂಹ, ರಕ್ತಕಣ್ಣೀರು, ನಾನು ನಾನೇ, ಶ್ರೀ ಕಾಳಿಕಾಂಬಾ, ಬಾ ಬಾರೋ ರಸಿಕ, ಸ್ವೀಟಿ ನನ್ನ ಜೋಡಿ, ಮಾಣಿಕ್ಯ, ಜಾಗ್ವಾರ್, ಅಂಜನಿಪುತ್ರ, ಶಿವಗಾಮಿ ಎನ್ನುವ ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಇವರು ಹೆಚ್ಚಾಗಿ ತಮಿಳು ಮತ್ತು ತೆಲುಗು ಭಾಷೆಗಳ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ ಎಂದು ಹೇಳಬಹುದು. ಇನ್ನು ರಮ್ಯಕೃಷ್ಣ ಅವರು ಖ್ಯಾತ ತೆಲುಗು ನಿರ್ದೇಶಕರಾಗಿರುವ ಕೃಷ್ಣವಂಶಿ ಅವರನ್ನು 2003 ರಲ್ಲಿ ವಿವಾಹ ಮಾಡಿಕೊಂಡರು. ಇವರಿಗೆ ರಿತ್ವಿಕ್ ವಂಶಿ ಎನ್ನುವ ಮಗ ಕೂಡ ಇದ್ದಾರೆ.
ತಮ್ಮ ಮೊದಲ ಮಗುವಿನ ಸೀಮಂತ ಕಾರ್ಯಕ್ರಮವನ್ನು ರಾಮಕೃಷ್ಣ ಅವರು ಮಾಡಿಕೊಂಡಿದ್ದರು. ಅದರ ಸುಂದರ ದೃಶ್ಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಿಗೋಸ್ಕರ ಹಂಚಿಕೊಂಡಿದ್ದಾರೆ. ರಮ್ಯ ಕೃಷ್ಣ ಅವರ ಸೀಮಂತ ಶಾಸ್ತ್ರದ ಕಾರ್ಯಕ್ರಮದ ಕೆಲ ಸುಂದರ ಚಿತ್ರಗಳನ್ನು ನೀವು ನೋಡಬಹುದು…..